ಕೋವಿಡ್, ಉಕ್ರೇನ್ ಯುದ್ಧ ಸಮಯದಲ್ಲಿ ಭಾರತದ ನೆರವು ಶ್ಲಾಘಿಸಿದ ಬಾಂಗ್ಲಾದೇಶದ ಪ್ರಧಾನಿ 

ರಷ್ಯಾ-ಉಕ್ರೇನ್ ಸಂಘರ್ಷದ ವೇಳೆ ಮತ್ತು ಕೋವಿಡ್ ಸಂಕಷ್ಟದ ಕಾಲದಲ್ಲಿ ನೆರವಾದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕ್ರಮವನ್ನು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಶ್ಲಾಘಿಸಿದ್ದಾರೆ. 
ಶೇಖ್ ಹಸೀನಾ-ಪ್ರಧಾನಿ ಮೋದಿ
ಶೇಖ್ ಹಸೀನಾ-ಪ್ರಧಾನಿ ಮೋದಿ
Updated on

ಢಾಕಾ: ರಷ್ಯಾ-ಉಕ್ರೇನ್ ಸಂಘರ್ಷದ ವೇಳೆ ಮತ್ತು ಕೋವಿಡ್ ಸಂಕಷ್ಟದ ಕಾಲದಲ್ಲಿ ನೆರವಾದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕ್ರಮವನ್ನು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಶ್ಲಾಘಿಸಿದ್ದಾರೆ. 

ಸೋಮವಾರ ಭಾರತಕ್ಕೆ ಭೇಟಿ ನೀಡಲಿರುವ ಪ್ರಧಾನಿ ಹಸೀನಾ ಅವರು, ಕೊರೋನಾ ಸಾಂಕ್ರಾಮಿಕ ರೋಗ ವೇಗವಾಗಿ ಹರಡುತ್ತಿರುವಾಗ ಲಸಿಕೆ ಅಭಿಯಾನದಡಿ ನೆರೆಯ ದೇಶಗಳಿಗೆ ಕೋವಿಡ್-19 ಲಸಿಕೆ ಒದಗಿಸಿದ ನರೇಂದ್ರ ಮೋದಿ ಸರ್ಕಾರದ ನಡೆಯನ್ನೂ ಶ್ಲಾಘಿಸಿದ್ದಾರೆ. ಉಭಯ ದೇಶಗಳ ನಡುವೆ ಭಿನ್ನಾಭಿಪ್ರಾಯಗಳಿರಬಹುದು, ಆದರೆ, ಇವುಗಳನ್ನು ಸಂವಾದದ ಮೂಲಕ ಪರಿಹರಿಸಿಕೊಳ್ಳಬೇಕು. ಭಾರತ ಮತ್ತು ಬಾಂಗ್ಲಾದೇಶಗಳು ಹಲವಾರು ಕ್ಷೇತ್ರಗಳಲ್ಲಿ ಅದನ್ನು ನಿಖರವಾಗಿ ಮಾಡಿದೆ ಎಂದು ಅವರು ಹೇಳಿದರು.

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಸಮಯದಲ್ಲಿ ನಮ್ಮ ಅನೇಕ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದರು. ಈ ವೇಳೆ ಭಾರತವು ತನ್ನ ದೇಶ ವಿದ್ಯಾರ್ಥಿಗಳನ್ನು ಉಕ್ರೇನ್ ನಂದ ಸ್ಥಳಾಂತರಿಸಿದಾಗ ನಮ್ಮ ದೇಶದ ವಿದ್ಯಾರ್ಥಿಗಳನ್ನು ಕರೆತಂದರು. ಹೀಗಾಗಿ ನಮ್ಮ ವಿದ್ಯಾರ್ಥಿಗಳು ಮನೆಗೆ ಮರಳಿದ್ದಾರೆ. ನೀವು ಸ್ಪಷ್ಟವಾಗಿ ಸೌಹಾರ್ದ ಮನೋಭಾವವನ್ನು ತೋರಿದ್ದೀರಿ. ಈ ಉಪಕ್ರಮಕ್ಕಾಗಿ ನಾನು ಪ್ರಧಾನಿ (ಮೋದಿ) ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ಪ್ರಧಾನಿ ಹಸೀನಾ ಹೇಳಿದರು.

ಸಾರ್ಕ್ ರಾಷ್ಟ್ರಗಳ ನಡುವೆ ಸಹಕಾರದ ಕೊರತೆಯಿದೆ ಎಂದು ಪಾಶ್ಚಿಮಾತ್ಯ ವೀಕ್ಷಕರು ಆಗಾಗ್ಗೆ ಮಾಡುವ ಟೀಕೆಗಳ ಕುರಿತಾದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು. ಭಾರತ ಸರ್ಕಾರದ ಲಸಿಕೆ ಮೈತ್ರಿ ಕಾರ್ಯಕ್ರಮದ ಕುರಿತು ಇದು ಪ್ರಧಾನಿ ಮೋದಿಯವರು ಕೈಗೊಂಡ ಅತ್ಯಂತ ವಿವೇಕಯುತ ಉಪಕ್ರಮ ಎಂದು ಹೇಳಿದರು. ಪ್ರಧಾನಿ ಮೋದಿ ಬಾಂಗ್ಲಾದೇಶಕ್ಕೆ ಮಾತ್ರವಲ್ಲದೆ ಕೆಲವು ದಕ್ಷಿಣ ಏಷ್ಯಾದ ದೇಶಗಳಿಗೂ ಲಸಿಕೆಗಳನ್ನು ಕೊಡುಗೆ ನೀಡಿದ್ದಾರೆ, ಮತ್ತು ಇದು ನಿಜವಾಗಿಯೂ ತುಂಬಾ ಸಹಾಯಕವಾಗಿದೆ. ಮತ್ತು ಇದು ನಿಜವಾಗಿಯೂ ವಿವೇಕಯುತ ಉಪಕ್ರಮವಾಗಿದೆ ಎಂದರು .

ಬಾಂಗ್ಲಾದೇಶವು ತನ್ನ ಜನಸಂಖ್ಯೆಯ ಶೇಕಡಾ 90 ರಷ್ಟು ಜನರಿಗೆ ಕೋವಿಡ್ -19 ಲಸಿಕೆಗಳನ್ನು ನೀಡಿದೆ.  ನಮ್ಮ ದೇಶದ ಜನರು, ವಿಶೇಷವಾಗಿ ಗ್ರಾಮ ಮಟ್ಟದ ಜನರು, ಕೆಲವು ಪಟ್ಟಣಗಳಲ್ಲಿಯೂ ಸಹ, ನಾನು ಅನೇಕ ಜನರು ಲಸಿಕೆ ತೆಗೆದುಕೊಳ್ಳಲು ತುಂಬಾ ಹಿಂಜರಿಯುವುದನ್ನು ನಾನು ಕಂಡುಕೊಂಡಿದ್ದೇನೆ ಎಂದು ಅವರು ಹೇಳಿದರು.

ಭಾರತವನ್ನು ಉತ್ತಮ ಸ್ನೇಹಿತ ಎಂದು ಉಲ್ಲೇಖಿಸಿದ ಬಾಂಗ್ಲಾ ಪ್ರಧಾನಿ, ಭಾರತ ದೇಶವು ಬಾಂಗ್ಲಾದೇಶದ ಅಗತ್ಯದ ಯುದ್ಧದ ಸಮಯಗಳಾದ 1971 ಮತ್ತು 1975 ರಲ್ಲಿ ನೆರವು ನೀಡಿತು.  1975 ರಲ್ಲಿ ಆಗಿನ ಪ್ರಧಾನಿ ನಮಗೆ ಭಾರತದಲ್ಲಿ ಆಶ್ರಯ ನೀಡಿದರು. ನಾವು ಹತ್ತಿರದ ನೆರೆಹೊರೆಯವರು ಮತ್ತು ನಾನು ಯಾವಾಗಲೂ ನಮ್ಮ ನೆರೆಯ ದೇಶಗಳೊಂದಿಗೆ ಸ್ನೇಹಕ್ಕಾಗಿ ಪ್ರಾಮುಖ್ಯತೆ ಮತ್ತು ಆದ್ಯತೆಯನ್ನು ನೀಡುತ್ತೇನೆ ಎಂದು ಅವರು ಹೇಳಿದರು. ಉಭಯ ದೇಶಗಳ ನಡುವಿನ ಬಾಂಧವ್ಯವು ತಮ್ಮ ನಾಗರಿಕರ ಒಳಿತಿಗಾಗಿ ಇರಬೇಕು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com