ಕೆನಡಾದ ಸ್ವಾಮಿ ನಾರಾಯಣ್ ದೇವಾಲಯದಲ್ಲಿ ಭಾರತ ವಿರೋಧಿ ಬರಹ, ದೇವಾಲಯಕ್ಕೆ ಹಾನಿ

ಕೆನಡಾದಲ್ಲಿ ಖಾಲಿಸ್ಥಾನಿ ತೀವ್ರಗಾಮಿಗಳು ಸ್ವಾಮಿ ನಾರಾಯಣ್ ದೇವಾಲಯದ ಮೇಲೆ ದಾಳಿ ನಡೆಸಿ ಹಾನಿ ಉಂಟುಮಾಡಿದ್ದಾರೆ.
ಸ್ವಾಮಿ ನಾರಾಯಣ ದೇವಾಲಯ (ಸಂಗ್ರಹ ಚಿತ್ರ)
ಸ್ವಾಮಿ ನಾರಾಯಣ ದೇವಾಲಯ (ಸಂಗ್ರಹ ಚಿತ್ರ)

ಕೆನಡಾ: ಕೆನಡಾದಲ್ಲಿ ಖಾಲಿಸ್ಥಾನಿ ತೀವ್ರಗಾಮಿಗಳು ಸ್ವಾಮಿ ನಾರಾಯಣ್ ದೇವಾಲಯದ ಮೇಲೆ ದಾಳಿ ನಡೆಸಿ ಹಾನಿ ಉಂಟುಮಾಡಿದ್ದಾರೆ.

ದೇವಾಲಯದ ಗೋಡೆಗಳ ಮೇಲೆ ಭಾರತ ವಿರೋಧಿ ಬರಹಗಳನ್ನು ಹಾಕಿದ್ದು, ಟೋರಂಟೋದಲ್ಲಿರುವ ಭಾರತೀಯ ಮಿಷನ್ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು ತ್ವರಿತಗತಿಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ. 

ಬಿಎಪಿಎಸ್ ಸ್ವಾಮಿ ನಾರಾಯಣ್ ಮಂದಿರದಲ್ಲಿ ನಡೆದ ದಾಳಿಯ ಸಮಯ ಇನ್ನಷ್ಟೇ ತಿಳಿಯಬೇಕಿದೆ. "ಸ್ವಾಮಿ ನಾರಾಯಣ್ ಮಂದಿರದ ಮೇಲಿನ ದಾಳಿಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಈ ಬಗ್ಗೆ ತನಿಖೆ ನಡೆಸಿ ಕ್ಷಿಪ್ರಗತಿಯಲ್ಲಿ ಅಪರಾಧಿಗಳಿಗೆ ಶಿಕ್ಷೆ ವಿಧಿಸುವಂತೆ ಕೆನಡಾ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ" ಎಂದು ಭಾರತ ಪ್ರತಿಕ್ರಿಯೆ ನೀಡಿದೆ.

ಇದನ್ನೂ ಓದಿ: ನ್ಯೂಯಾರ್ಕ್: ಹಿಂದೂ ದೇವಾಲಯದ ಹೊರಗಿನ ಗಾಂಧಿ ಪ್ರತಿಮೆ ಧ್ವಂಸ
 
ಈ ಬಗ್ಗೆ ಭಾರತೀಯ ಮೂಲದ ಕೆನಡಾ ಸಂಸದ ಚಂದ್ರ ಆರ್ಯ ಮಾತನಾಡಿ, ಖಾಲಿಸ್ಥಾನಿ ತೀವ್ರಗಾಮಿಗಳು ಟೊರಂಟೋದ ಸ್ವಾಮಿ ನಾರಾಯಣ್ ಮಂದಿರ ಧ್ವಂಸಗೊಳಿಸಿರುವುದನ್ನು ನಾವೆಲ್ಲರೂ ಖಂಡಿಸಬೇಕು. ಇದು ಕೇವಲ ಮತ್ತೊಂದು ಘಟನೆಯಲ್ಲ, ಇತ್ತೀಚಿನ ದಿನಗಳಲ್ಲಿ ಈ ರೀತಿಯ ದ್ವೇಷ ಅಪರಾಧಗಳ ಮೂಲಕ ಹಿಂದೂ ದೇವಾಲಯವನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com