ಪಾಕ್ ಹೇಳಿಕೆಯನ್ನು ನಿರಾಕರಿಸಿದ ತಾಲಿಬಾನ್; ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಅಫ್ಘಾನಿಸ್ತಾನದಲ್ಲಿಲ್ಲ!

ಜೈಶ್-ಎ-ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಅಫ್ಘಾನಿಸ್ತಾನದಲ್ಲಿ ಇದ್ದಾನೆ ಎನ್ನುವ ಪಾಕಿಸ್ತಾನದ ಹೇಳಿಕೆಯನ್ನು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ನಿರಾಕರಿಸಿದ್ದಾರೆ. ವಾಸ್ತವವಾಗಿ ಆತ ಪಾಕಿಸ್ತಾನದಲ್ಲಿದ್ದಾನೆ ಎಂದು ಹೇಳಿರುವುದಾಗಿ ಅಫ್ಘಾನಿಸ್ತಾನದ ಸ್ಥಳೀಯ ಮಾಧ್ಯಮ ಟೋಲೋ ನ್ಯೂಸ್ ವರದಿ ಮಾಡಿದೆ.
ಜೈಶ್-ಎ-ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಮೌಲಾನಾ ಮಸೂದ್ ಅಜರ್
ಜೈಶ್-ಎ-ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಮೌಲಾನಾ ಮಸೂದ್ ಅಜರ್

ಕಾಬೂಲ್: ಜೈಶ್-ಎ-ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಅಫ್ಘಾನಿಸ್ತಾನದಲ್ಲಿ ಇದ್ದಾನೆ ಎನ್ನುವ ಪಾಕಿಸ್ತಾನದ ಹೇಳಿಕೆಯನ್ನು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ನಿರಾಕರಿಸಿದ್ದಾರೆ. ವಾಸ್ತವವಾಗಿ ಆತ ಪಾಕಿಸ್ತಾನದಲ್ಲಿದ್ದಾನೆ ಎಂದು ಹೇಳಿರುವುದಾಗಿ ಅಫ್ಘಾನಿಸ್ತಾನದ ಸ್ಥಳೀಯ ಮಾಧ್ಯಮ ಟೋಲೋ ನ್ಯೂಸ್ ವರದಿ ಮಾಡಿದೆ.

ಮೌಲಾನಾ ಮಸೂದ್ ಅಜರ್‌ನನ್ನು ಬಂಧಿಸುವಂತೆ ಪಾಕಿಸ್ತಾನವು ಅಫ್ಘಾನಿಸ್ತಾನಕ್ಕೆ ಪತ್ರ ಬರೆದಿರುವ ಕಾರಣ, ಬೋಲ್ ನ್ಯೂಸ್ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಮೌಲಾನಾ ಮಸೂದ್ ಅಜರ್ ಬಹುಶಃ ಅಫ್ಘಾನಿಸ್ತಾನದ ನಂಗರ್‌ಹಾರ್ ಮತ್ತು ಕನ್ಹರ್ ಪ್ರದೇಶಗಳಲ್ಲಿ ಇದ್ದಾನೆ ಎಂದು ಪಾಕ್ ಹೇಳಿದೆ.

ಈ ಪತ್ರಕ್ಕೆ ಪ್ರತಿಕ್ರಿಯಿಸಿರುವ ಇಸ್ಲಾಮಿಕ್ ಎಮಿರೇಟ್ ವಕ್ತಾರ ಜಬೀವುಲ್ಲಾ ಮುಜಾಹಿದ್, 'ಜೈಶ್-ಎ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಅಫ್ಘಾನಿಸ್ತಾನದಲ್ಲಿ ಇಲ್ಲ. ಇದು ಪಾಕಿಸ್ತಾನದಲ್ಲಿ ಇರಬಹುದಾದ ಸಂಘಟನೆಯಾಗಿದೆ. ಹೀಗಾಗಿ, ಆತ ಅಫ್ಘಾನಿಸ್ತಾನದಲ್ಲಿಲ್ಲ. ಈ ಬಗ್ಗೆ ನೇರವಾಗಿ ನಮ್ಮನ್ನು ಪಾಕಿಸ್ತಾನ ಏನನ್ನು ಕೇಳಿಲ್ಲ. ಬದಲಿಗೆ ಈ ಬಗ್ಗೆ ವರದಿಯಾದ ಸುದ್ದಿಯಿಂದ ವಿಚಾರ ತಿಳಿಸಿದೆ. ಈ ವಿಚಾರ ನಿಜವಲ್ಲ ಎಂಬುದು ನಮ್ಮ ಪ್ರತಿಕ್ರಿಯೆ' ಎಂದಿರುವುದಾಗಿ ಟೋಲೋ ನ್ಯೂಸ್ ವರದಿ ಮಾಡಿದೆ.

ಇದಲ್ಲದೆ, ಇಂತಹ ಆರೋಪಗಳು ಕಾಬೂಲ್ ಮತ್ತು ಇಸ್ಲಾಮಾಬಾದ್ ನಡುವಿನ ಸಂಬಂಧಗಳ ಮೇಲೆ ಪರಿಣಾಮ ಬೀರಬಹುದು ಎಂದು ತಾಲಿಬಾನ್ ನೇತೃತ್ವದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

'ಯಾವುದೇ ಪುರಾವೆ ಮತ್ತು ದಾಖಲೆಗಳು ಇಲ್ಲದೆ ಮಾಡುವ ಇಂತಹ ಆರೋಪಗಳಿಂದ ದೂರವಿರಲು ನಾವು ಎಲ್ಲಾ ಪಕ್ಷಗಳಿಗೆ ಕರೆ ನೀಡುತ್ತೇವೆ. ಮಾಧ್ಯಮಗಳಲ್ಲಿ ಬರುವ ಈ ರೀತಿಯ ಆರೋಪಗಳು ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು' ಎಂದು ತಾಲಿಬಾನಿ ವಕ್ತಾರ ಅಬ್ದುಲ್ ಕಹರ್ ಬಾಲ್ಖಿ ಹೇಳಿದ್ದಾರೆ.

ಪ್ಯಾರಿಸ್ ಮೂಲದ ಅಂತರಾಷ್ಟ್ರೀಯ ವಾಚ್‌ಡಾಗ್ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್), ವಿಶ್ವಸಂಸ್ಥೆಯು ಗುರುತಿಸಿರುವ ಕೆಲವು ಭಯೋತ್ಪಾದಕರ ವಿರುದ್ಧ  ಕ್ರಮ ಕೈಗೊಳ್ಳುವಂತೆ  ಇಸ್ಲಾಮಾಬಾದ್‌ಗೆ ಯುಎನ್ ಒತ್ತಾಯಿಸಿರುವ ಬೆನ್ನಲ್ಲೇ ಪಾಕಿಸ್ತಾನ ಆತ ಅಪ್ಘಾನಿಸ್ಥಾನದಲ್ಲಿರುವುದಾಗಿ ಹೇಳಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಅಜರ್ ಪಾಕಿಸ್ತಾನದಲ್ಲಿ ಇಲ್ಲ ಮತ್ತು ಅಫ್ಘಾನಿಸ್ತಾನದಲ್ಲಿ ಇರುವ ಸಾಧ್ಯತೆಯಿದೆ ಎಂದು ಪಾಕಿಸ್ತಾನ ಹೇಳುತ್ತಾ ಬಂದಿದೆ. ಈವರೆಗೂ ಆತ ಎಲ್ಲಿದ್ದಾನೆ ಎಂಬುದನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಪಾಕಿಸ್ತಾನದ ಈ ಹೇಳಿಕೆಗಳ ಹೊರತಾಗಿಯೂ, ಆತ ಪಾಕಿಸ್ತಾನದ ಸಾಮಾಜಿಕ ಮಾಧ್ಯಮಗಳ ನೆಟ್‌ವರ್ಕ್‌ಗಳಲ್ಲಿ ಜೆಇಎಂ ಕಾರ್ಯಕರ್ತರನ್ನು ಜಿಹಾದ್‌ನಲ್ಲಿ ತೊಡಗಿಸಿಕೊಳ್ಳಲು ಮತ್ತು ಕಾಬೂಲ್‌ ಅನ್ನು ತಾಲಿಬಾನ್ ಸ್ವಾಧೀನ ಪಡಿಸಿಕೊಂಡ ಕುರಿತಾಗಿ ಶ್ಲಾಘಿಸುವ ಲೇಖನಗಳನ್ನು ಪ್ರಕಟಿಸುತ್ತಲೇ ಇದ್ದಾನೆ. ಅಲ್ಲದೆ, ತಾಲಿಬಾನ್ ವಿಜಯವು ಇತರೆಡೆ ಮುಸ್ಲಿಂ ವಿಜಯಗಳಿಗೆ ಮಾರ್ಗಗಳನ್ನು ತೆರೆಯುತ್ತದೆ ಎಂದೂ ಹೇಳಿರುವುದಾಗಿ ದಕ್ಷಿಣ ಏಷ್ಯಾ ಪ್ರೆಸ್ ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com