ಪಾಕಿಸ್ತಾನಕ್ಕೆ F-16: ಯಾರನ್ನೂ ಮೂರ್ಖರಾಗಿಸಲು ಸಾಧ್ಯವಿಲ್ಲ, ಅವರು ಎಲ್ಲಿ ಬಳಸುತ್ತಾರೆ ಎಂದು ಎಲ್ಲರಿಗೂ ಗೊತ್ತು; ಅಮೆರಿಕಕ್ಕೆ ಭಾರತ ತೀಕ್ಷ್ಣ ಪ್ರತಿಕ್ರಿಯೆ

ನೀವು ಯಾರನ್ನೂ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ.. ನೀವು ಮಾರಾಟ ಮಾಡಿದ ಎಫ್-16 ಯುದ್ಧ ವಿಮಾನವನ್ನು ಅವರು ಎಲ್ಲಿ ಮತ್ತು ಯಾರ ವಿರುದ್ಧ ಬಳಸುತ್ತಾರೆ ಎಂಬುದು ನಮಗೆ ತಿಳಿದಿದೆ ಎಂದು ಭಾರತ ಅಮೆರಿಕಕ್ಕೆ ತೀಕ್ಷ್ಣ ತಿರುಗೇಟು ನೀಡಿದೆ.
ಎಸ್ ಜೈ ಶಂಕರ್ ಮತ್ತು ಎಫ್ 16
ಎಸ್ ಜೈ ಶಂಕರ್ ಮತ್ತು ಎಫ್ 16

ವಾಷಿಂಗ್ಟನ್: ನೀವು ಯಾರನ್ನೂ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ.. ನೀವು ಮಾರಾಟ ಮಾಡಿದ ಎಫ್-16 ಯುದ್ಧ ವಿಮಾನವನ್ನು ಅವರು ಎಲ್ಲಿ ಮತ್ತು ಯಾರ ವಿರುದ್ಧ ಬಳಸುತ್ತಾರೆ ಎಂಬುದು ನಮಗೆ ತಿಳಿದಿದೆ ಎಂದು ಭಾರತ ಅಮೆರಿಕಕ್ಕೆ ತೀಕ್ಷ್ಣ ತಿರುಗೇಟು ನೀಡಿದೆ.

ರಷ್ಯಾದ ಎಸ್-400 ಕ್ಷಿಪಣಿ ವ್ಯವಸ್ಥೆ ಖರೀದಿಯ ಕುರಿತು ಭಾರತದ ವಿರುದ್ಧ ಕಿಡಿಕಾರಿದ್ದ ಅಮೆರಿಕಕ್ಕೆ ಭಾರತ ತೀಕ್ಷ್ಣ ತಿರುಗೇಟು ನೀಡಿರುವ ಭಾರತ, ಪಾಕಿಸ್ತಾನಕ್ಕೆ ಎಫ್-16 ಯುದ್ಧ ವಿಮಾನ ಮಾರಾಟ ವಿಚಾರ ಸಂಬಂಧ ದೊಡ್ಣನಿಗೆ ತೀಕ್ಷ್ಣ ತಿರುಗೇಟು ನೀಡಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಅಮೆರಿಕ-ಪಾಕಿಸ್ತಾನ ಸಂಬಂಧದ "ಯೋಗ್ಯತೆ" ಕುರಿತು ಪ್ರಶ್ನೆಗಳನ್ನು ಎತ್ತಿದ್ದು, ಇಸ್ಲಾಮಾಬಾದ್‌ನೊಂದಿಗಿನ ವಾಷಿಂಗ್ಟನ್‌ನ ಸಂಬಂಧಗಳು "ಅಮೆರಿಕನ್ ಹಿತಾಸಕ್ತಿ" ಯನ್ನು ಪೂರೈಸಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

ವಾಷಿಂಗ್ಟನ್‌ನಲ್ಲಿ ಭಾನುವಾರ ಭಾರತೀಯ ಅಮೆರಿಕನ್ ಸಮುದಾಯ ಆಯೋಜಿಸಿದ್ದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 'ಇದು ಪಾಕಿಸ್ತಾನಕ್ಕೆ ಉತ್ತಮವಾಗಿ ಸೇವೆ ಸಲ್ಲಿಸಲು ಅಥವಾ ಅಮೆರಿಕದ ಹಿತಾಸಕ್ತಿಗಳ ಸಾಧಿಸುವುದು ಅಲ್ಲ ಎಂದು ಹೇಳಿದ್ದಾರೆ.

ಪಾಕಿಸ್ತಾನಕ್ಕೆ ಅಮೆರಿಕದ ಎಫ್-16 ಯುದ್ಧವಿಮಾನಗಳ ಮಾರಾಟದ ಕುರಿತು ಸಭಿಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜೈ ಶಂಕರ್, 'ಇದು ಪಾಕಿಸ್ತಾನಕ್ಕೆ ಉತ್ತಮ ಸೇವೆ ಸಲ್ಲಿಸುವುದರಿಂದ ಅಥವಾ ಅಮೆರಿಕದ ಹಿತಾಸಕ್ತಿಗಳಿಗೆ ಗೌರವ ನೀಡುವುದರಿಂದ ಸಂಬಂಧಗಳು ಗಟ್ಟಿಯಾಗುವುದಿಲ್ಲ. ಪಾಕಿಸ್ತಾನ ಭಯೋತ್ಪಾದನೆಯ ಕೇಂದ್ರ ಸ್ಥಳವಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಅಮೆರಿಕದಿಂದ ಎಫ್-16 ನಂತಹ ಶಕ್ತಿಶಾಲಿ ವಿಮಾನಗಳನ್ನು (Fighter Jet) ಪಡೆಯುತ್ತಿರುವ ಪಾಕಿಸ್ತಾನದ ಹಿಂದಿನ ಉದ್ದೇಶವನ್ನೂ ನಾವು ಊಹಿಸಬಲ್ಲೆವು. ನೀವು ಈ ವಿಷಯಗಳ ಬಗ್ಗೆ ಏನೇ ಸ್ಪಷ್ಟನೆ ನೀಡಿದರೂ ಯಾರನ್ನೂ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಖಡಕ್ ಆಗಿ ತಿರುಗೇಟು ನೀಡಿದ್ದಾರೆ.

ಅಮೆರಿಕ 2018ರ ಬಳಿಕ ಇದೇ ಮೊದಲ ಬಾರಿಗೆ ಪಾಕಿಸ್ತಾನದ ವಾಯುಪಡೆಗೆ ಎಫ್-16 ಯುದ್ಧ ವಿಮಾನದ ಪ್ಯಾಕೇಜ್ ಅನ್ನು ನೀಡಲು ಒಪ್ಪಿಗೆ ನೀಡಿದೆ. ಆದರೆ ಪಾಕಿಸ್ತಾನಕ್ಕೆ ಮಿಲಿಟರಿ ನೆರವನ್ನು ನೀಡಲು ಮುಂದಾಗಿರುವ ಅಮೆರಿಕವನ್ನು ಭಾರತ ಪ್ರಶ್ನಿಸಿತ್ತು. ಇದಕ್ಕೆ ಅಮೆರಿಕ ನಾವು ಪಾಕಿಸ್ತಾನಕ್ಕೆ ನೆರವು ನೀಡುತ್ತಿಲ್ಲ, ಪಾಕಿಸ್ತಾನ ನಮ್ಮಿಂದ ವಿಮಾನದ ಬಿಡಿ ಭಾಗಗಳನ್ನು ಖರೀದಿಸುತ್ತಿದೆ ಎಂದು ತಿಳಿಸಿತ್ತು.

ಭಾರತದ ವಿರೋಧ ಯಾಕೆ?
ಭಾರತ 2019 ಫೆ.26 ರಂದು ಪಾಕಿಸ್ತಾನದ ಬಾಲಕೋಟ್ ಮೇಲೆ ಏರ್‌ಸ್ಟ್ರೈಕ್ ಮಾಡಿತ್ತು. ಏರ್‌ಸ್ಟ್ರೈಕ್ ಮಾಡಿದ ಮರುದಿನ ಫೆ.27 ರಂದು ಪಾಕಿಸ್ತಾನ 10 ಎಫ್ 16 ವಿಮಾನಗಳು ಭಾರತದ ಮೇಲೆ ದಾಳಿ ಮಾಡಲು ಮುಂದಾಗಿತ್ತು. ಈ ಸಂದರ್ಭದಲ್ಲಿ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ತಮ್ಮ ಮಿಗ್ 21 ವಿಮಾನದ ಮೂಲಕ ಪ್ರತಿರೋಧ ಒಡ್ಡಿದ್ದರು. ಈ ವೇಳೆ ನಡೆದ ಡಾಗ್‌ಫೈಟ್(ಆಕಾಶದಲ್ಲಿ ಯುದ್ಧ ವಿಮಾನಗಳ ಮಧ್ಯೆ ನಡೆಯುವ ಕಾದಾಟ) 1 ಎಫ್ 16 ವಿಮಾನವನ್ನು ಕ್ಷಿಪಣಿ ಪ್ರಯೋಗಿಸಿ ಉರುಳಿಸಿದ್ದರು. ಎಫ್ 16 ವಿಮಾನವನ್ನು ಉಗ್ರರ ವಿರುದ್ಧದ ಕಾರ್ಯಾಚರಣೆಗೆ ಮಾತ್ರ ಬಳಸಬೇಕು ಎಂದು ಅಮೆರಿಕ ಷರತ್ತು ವಿಧಿಸಿತ್ತು. ಹೀಗಿದ್ದರೂ ಭಾರತದ ವಿರುದ್ಧ ಈ ವಿಮಾನಗಳ ಮೂಲಕ ದಾಳಿ ನಡೆಸುವ ಮೂಲಕ ಅಮೆರಿಕದ ಷರತ್ತನ್ನು ಪಾಕಿಸ್ತಾನ ಮುರಿದಿತ್ತು. ಈ ಕಾರಣಕ್ಕೆ ಭಾರತ ಈಗ ಅಮೆರಿಕ ಎಫ್ 16 ವಿಚಾರದಲ್ಲಿ ತೆಗೆದುಕೊಂಡಿರುವ ನಿರ್ಧಾರವನ್ನು ಬಲವಾಗಿ ವಿರೋಧಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com