ಪಾಕಿಸ್ತಾನ: ಹಜಾರಾ ಎಕ್ಸ್‌ಪ್ರೆಸ್ ರೈಲಿನ ಐದು ಬೋಗಿಗಳು ಹಳಿತಪ್ಪಿ 15 ಮಂದಿ ಸಾವು, ಹಲವರಿಗೆ ಗಾಯ

ರಾವಲ್ಪಿಂಡಿಗೆ ತೆರಳುತ್ತಿದ್ದ ರೈಲಿನ ಐದು ಬೋಗಿಗಳು ಹಳಿತಪ್ಪಿದ ಪರಿಣಾಮ ಭಾನುವಾರ ಪಾಕಿಸ್ತಾನದಲ್ಲಿ ಕನಿಷ್ಠ 15 ಜನರು ಸಾವಿಗೀಡಾಗಿದ್ದಾರೆ ಮತ್ತು ಇತರರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿ ಹಳಿತಪ್ಪಿದ ರೈಲಿನ ಬೋಗಿಗಳು
ಪಾಕಿಸ್ತಾನದಲ್ಲಿ ಹಳಿತಪ್ಪಿದ ರೈಲಿನ ಬೋಗಿಗಳು

ಕರಾಚಿ: ರಾವಲ್ಪಿಂಡಿಗೆ ತೆರಳುತ್ತಿದ್ದ ರೈಲಿನ ಐದು ಬೋಗಿಗಳು ಹಳಿತಪ್ಪಿದ ಪರಿಣಾಮ ಭಾನುವಾರ ಪಾಕಿಸ್ತಾನದಲ್ಲಿ ಕನಿಷ್ಠ 15 ಜನರು ಸಾವಿಗೀಡಾಗಿದ್ದಾರೆ ಮತ್ತು ಇತರರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಜಾರಾ ಎಕ್ಸ್‌ಪ್ರೆಸ್ ಕರಾಚಿಯಿಂದ ರಾವಲ್ಪಿಂಡಿಗೆ ತೆರಳುತ್ತಿತ್ತು ಮತ್ತು ನವಾಬ್‌ಶಾ ಪ್ರದೇಶದ ಸರ್ಹಾರಿ ರೈಲು ನಿಲ್ದಾಣದ ಬಳಿ ಈ ಅಪಘಾತ ಸಂಭವಿಸಿದೆ.

ಹಾನಿಗೊಳಗಾದ ಬೋಗಿಗಳಿಂದ ಕನಿಷ್ಠ 15 ಶವಗಳನ್ನು ಹೊರತೆಗೆಯಲಾಗಿದ್ದು, ಸುಮಾರು 50 ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ ಎಂದು ಪಾಕಿಸ್ತಾನ ರೈಲ್ವೆಯ ಉಪ ಅಧೀಕ್ಷಕ ಮಹಮೂದ್ ರೆಹಮಾನ್ ತಿಳಿಸಿದ್ದಾರೆ.

ಸರ್ಹಾರಿ ರೈಲು ನಿಲ್ದಾಣದ ಬಳಿ ಅಪಘಾತದ ಸ್ಥಳದಲ್ಲಿ ರೈಲಿನ ಭೋಗಿಗಳು ತೀವ್ರ ಹಾನಿಗೊಳಗಾಗಿರುವುದು ಕಂಡುಬಂದಿದೆ.
ಸದ್ಯ, ರಕ್ಷಣಾ ಕಾರ್ಯಾಚರಣೆಯ ಮೇಲೆ ಗಮನ ಹರಿಸಲಾಗಿದ್ದು, ಅಪಘಾತದ ಹಿಂದಿನ ಕಾರಣವನ್ನು ತನಿಖೆ ಮಾಡಲಾಗುತ್ತಿದೆ ಎಂದು ರೆಹಮಾನ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com