ಅಫ್ಘಾನಿಸ್ತಾನದಲ್ಲಿನ ತಾಲೀಬಾನ್ ಸರ್ಕಾರಕ್ಕೆ ರಾಜತಾಂತ್ರಿಕ ಮಾನ್ಯತೆ ನೀಡಿದ ಚೀನಾ!

ತಾಲೀಬಾನ್ ನೇಮಕ ಮಾಡಿರುವ ಅಧಿಕಾರಿಗೆ ಬೀಜಿಂಗ್ ನಲ್ಲಿ ಅಫ್ಘಾನಿಸ್ತಾನದ ರಾಯಭಾರಿ ಸ್ಥಾನಮಾನ ನೀಡುವ ಮೂಲಕ ಚೀನಾ ತಾಲೀಬಾನ್ ಸರ್ಕಾರಕ್ಕೆ ಅಧಿಕೃತವಾಗಿ ರಾಜತಾಂತ್ರಿಕ ಮಾನ್ಯತೆ ನೀಡಿದೆ.
ಚೀನಾ- ಅಫ್ಘಾನಿಸ್ಥಾನ (ಸಂಗ್ರಹ ಚಿತ್ರ)
ಚೀನಾ- ಅಫ್ಘಾನಿಸ್ಥಾನ (ಸಂಗ್ರಹ ಚಿತ್ರ)

ಬೀಜಿಂಗ್: ತಾಲೀಬಾನ್ ನೇಮಕ ಮಾಡಿರುವ ಅಧಿಕಾರಿಗೆ ಬೀಜಿಂಗ್ ನಲ್ಲಿ ಅಫ್ಘಾನಿಸ್ತಾನದ ರಾಯಭಾರಿ ಸ್ಥಾನಮಾನ ನೀಡುವ ಮೂಲಕ ಚೀನಾ ತಾಲೀಬಾನ್ ಸರ್ಕಾರಕ್ಕೆ ಅಧಿಕೃತವಾಗಿ ರಾಜತಾಂತ್ರಿಕ ಮಾನ್ಯತೆ ನೀಡಿದೆ.

"ಅಫ್ಘಾನಿಸ್ತಾನದ ದೀರ್ಘಕಾಲದ ಸ್ನೇಹಪರ ನೆರೆಯ ರಾಷ್ಟ್ರವಾಗಿ, ಅಫ್ಘಾನಿಸ್ತಾನವನ್ನು ಅಂತರರಾಷ್ಟ್ರೀಯ ಸಮುದಾಯದಿಂದ ಹೊರಗಿಡಬಾರದು ಎಂದು ಚೀನಾ ನಂಬುತ್ತದೆ" ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ಹೇಳಿದ್ದಾರೆ. 

ಮಾಧ್ಯಮಗೋಷ್ಠಿಯಲ್ಲಿ ತಾಲಿಬಾನ್ ಅನ್ನು ಅಫ್ಘಾನಿಸ್ತಾನದ ಕಾನೂನುಬದ್ಧ ಸರ್ಕಾರವೆಂದು ಚೀನಾ ಗುರುತಿಸಿದೆಯೇ ಎಂದು ಕೇಳಿದಾಗ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರರು ಈ ಹೇಳಿಕೆ ನೀಡಿದ್ದಾರೆ. 

ತಾಲಿಬಾನ್ ನಾಮನಿರ್ದೇಶಿತ ಬಿಲಾಲ್ ಕರಿಮಿಗೆ ಚೀನಾ ರಾಯಭಾರಿ ಸ್ಥಾನಮಾನವನ್ನು ನೀಡಿದೆ ಮತ್ತು ಅವರು ಬೀಜಿಂಗ್‌ನಲ್ಲಿರುವ ವಿದೇಶಾಂಗ ಸಚಿವಾಲಯಕ್ಕೆ ತಮ್ಮ ರುಜುವಾತುಗಳನ್ನು ಸಲ್ಲಿಸಿರುವುದು ವರದಿಯಾಗಿದೆ. 

ಅಮೇರಿಕಾ ತನ್ನ ಪಡೆಗಳನ್ನು ಹಿಂತೆಗೆದುಕೊಂಡ ನಂತರ ಆಗಸ್ಟ್ 2021 ರಲ್ಲಿ ತಾಲಿಬಾನ್ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿತ್ತು. ಈ ಬಳಿಕ ಪಾಕಿಸ್ತಾನ ಮತ್ತು ರಷ್ಯಾ ಜೊತೆಗೆ ಚೀನಾ ಕಾಬೂಲ್‌ನಲ್ಲಿ ತನ್ನ ರಾಯಭಾರ ಕಚೇರಿಯನ್ನು ಯಥಾಸ್ಥಿತಿಯಲ್ಲಿ ನಿರ್ವಹಿಸಿತ್ತು.

ತಾಲಿಬಾನ್ ಮಧ್ಯಂತರ ಆಡಳಿತದೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದರೂ ಬೀಜಿಂಗ್ ವಿಶೇಷವಾಗಿ ತಾಲಿಬಾನ್ ಮಹಿಳೆಯರು ಮತ್ತು ಹುಡುಗಿಯರನ್ನು ನಡೆಸಿಕೊಳ್ಳುವ ರೀತಿ ಹಾಗೂ ಶಿಕ್ಷಣ ಸಂಸ್ಥೆಗಳಿಂದ ಹೊರಗಿಡುವ ನಡೆಯ ಬಗ್ಗೆ ಜಾಗತಿಕವಾಗಿ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ತಾಲೀಬಾನ್ ಸರ್ಕಾರಕ್ಕೆ ಮಾನ್ಯತೆಯನ್ನು ತಡೆ ಹಿಡಿದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com