ಚೀನಾ ಮತ್ತು ಇಟಲಿ
ಚೀನಾ ಮತ್ತು ಇಟಲಿ

ಚೀನಾಗೆ ಮತ್ತೊಂದು ಜಾಗತಿಕ ಹಿನ್ನಡೆ: ಒನ್‌ ಬೆಲ್ಟ್‌ ಯೋಜನೆಯಿಂದ ಇಟಲಿ ನಿರ್ಗಮನ

ಚೀನಾಗೆ ಮತ್ತೊಂದು ಜಾಗತಿಕ ಹಿನ್ನಡೆಯಾಗಿದ್ದು, ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮಹತ್ವಾಕಾಂಕ್ಷಿ ಯೋಜನೆ ಒನ್‌ ಬೆಲ್ಟ್‌ನಿಂದ ಇಟಲಿ ದೇಶ ಹೊರಬಿದ್ದಿದೆ.

ನವದೆಹಲಿ: ಚೀನಾಗೆ ಮತ್ತೊಂದು ಜಾಗತಿಕ ಹಿನ್ನಡೆಯಾಗಿದ್ದು, ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮಹತ್ವಾಕಾಂಕ್ಷಿ ಯೋಜನೆ ಒನ್‌ ಬೆಲ್ಟ್‌ನಿಂದ ಇಟಲಿ ದೇಶ ಹೊರಬಿದ್ದಿದೆ.

ಹೌದು.. ಚೀನಾದ ಮಹತ್ವಾಕಾಂಕ್ಷೆಯ ಮೂಲಸೌಕರ್ಯಯೋಜನೆ ಒನ್‌ ಬೆಲ್ಟ್- ಒನ್‌ ರೋಡ್‌ ಯೋಜನೆಯಿಂದ ಇಟಲಿ ನಿರ್ಗಮಿಸಿದ್ದು, ಭಾರತದ ಸುತ್ತ ಆರ್ಥಿಕಪಥ ನಿರ್ಮಿಸಿ ಹಿಡಿತ ಸಾಧಿಸುವ ಚೀನಾದ ಹುನ್ನಾರಕ್ಕೆ ಇಟಲಿ ನಿರ್ಗಮನ ಭಾರೀ ಹೊಡೆತ ನೀಡಿದಂತಾಗಿದೆ. 

ಯೂರೋಪ್‌ ಮತ್ತು ಏಷ್ಯಾಗಳನ್ನು ಸಂಪರ್ಕಿಸುವ ಪುರಾತನ ವ್ಯಾಪಾರ ಮಾರ್ಗಗಳನ್ನು ಪುನರುಜ್ಜೀವನಗೊಳಿಸುವ ಜಾಗತಿಕ ಮೂಲಸೌಕರ್ಯ ಯೋಜನೆ ಇದಾಗಿದ್ದು, ಚೀನಾದ ಜತೆಗೆ ಈ ಒಪ್ಪಂದಕ್ಕೆ ಕೈಜೋಡಿಸಿದ ಏಕೈಕ ಜಿ-7 ರಾಷ್ಟ್ರ ಇಟಲಿ ಮಾತ್ರವೇ ಆಗಿತ್ತು. ಆದರೆ ಇಟಲಿ ಹೊರಬಂದಿದ್ದು, ಚೀನಾಗೆ ಜಾಗತಿಕವಾಗಿ ಮತ್ತೊಂದು ಹಿನ್ನಡೆಯಾದಂತಾಗಿದೆ.

ಹೂಡಿಕೆಗಳನ್ನು ಆಕರ್ಷಿಸಲು ಮತ್ತು ಚೀನಾದ ಮಾರುಕಟ್ಟೆಗೆ ರಫ್ತು ಪ್ರವೇಶವನ್ನು ವಿಸ್ತರಿಸುವ ನಿಟ್ಟಿನಲ್ಲಿ ನಾಲ್ಕು ವರ್ಷಗಳ ಹಿಂದೆ ಒನ್‌ ಬೆಲ್ಟ್-ಒನ್‌ ರೋಡ್‌ ಉಪಕ್ರಮಕ್ಕೆ ಇಟಲಿ ಪಾಲುದಾರನಾಗಲು ಸಹಿ ಹಾಕಿತ್ತು. ಆದರೆ, ಈ ಉಪಕ್ರಮಕ್ಕೆ ಸೇರಿದಾಗಿನಿಂದ ಚೀನಾಗೆ ಹೋಗುತ್ತಿರುವ ಇಟಲಿಯ ರಫ್ತು ಪ್ರಮಾಣ 14.5 ಶತಕೋಟಿ ಯೂರೋಗಳಿಂದ 18.5 ಶತಕೋಟಿ ಯುರೋಗಳಿಗೆ ಏರಿಕೆಯಾದರೆ, ಚೀನಾದಿಂದ ಇಟಲಿಗೆ ಕಳುಹಿಸುತ್ತಿರುವ ರಫ್ತು ಪ್ರಮಾಣ ಮಾತ್ರ 33.5 ಶತಕೋಟಿ ಯುರೋಗಳಿಂದ 50.9 ಶತಕೋಟಿ ಯೂರೋಗಳಿಗೆ ಹೆಚ್ಚಾಗಿದೆ. ಇದರಿಂದ ಚೀನಾದೊಂದಿಗೆ ಇಟಲಿ ವ್ಯಾಪಾರ ಕೊರತೆ ಎದುರಿಸುವ ಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಇಟಲಿ ಉಪಕ್ರಮದಿಂದ ನಿರ್ಗಮಿಸುವುದಾಗಿ ಘೋಷಿಸಿದೆ.

ಯೋಜನೆಯಿಂದ ಹೊರಬಿದ್ದ 2ನೇ ದೇಶ
ಇನ್ನು ಚೀನಾದ ಮಹತ್ವಾಕಾಂಕ್ಷಿ ಒನ್ ಬೆಲ್ಟ್ ಯೋಜನೆಯಿಂದ ಹೊರಬಿದ್ದ 2ನೇ ದೇಶ ಇಟಲಿಯಾಗಿದ್ದು, ಈ ಹಿಂದೆ ನವೆಂಬರ್ ಮೊದಲ ವಾರದಲ್ಲಿ ಫಿಲಿಪೈನ್ಸ್ ದೇಶ ಯೋಜನೆಯಿಂದ ಹೊರಬಿದ್ದಿತ್ತು. ಆರ್ಥಿಕ ಮತ್ತು ರಾಜಕೀಯ ಅಂಶಗಳಿಂದಾಗಿ ಫಿಲಿಪೈನ್ಸ್‌ನಲ್ಲಿ ಚೀನಾದ ಎಲ್ಲಾ ನಿರ್ಣಾಯಕ ಹೂಡಿಕೆಯ ಉಪಕ್ರಮಗಳ ಮೇಲೆ ಈಗ ಅನುಮಾನ ವ್ಯಕ್ತಪಡಿಸಿದ್ದು, ಇದು ಫಿಲಿಪೈನ್-ಚೀನಾ (China-Philippines) ಸಂಬಂಧ ಹೊಸ ಕೆಳಮಟ್ಟಕ್ಕೆ ಕುಸಿಯಲು ಕಾರಣವಾಗಿದೆ. 

Related Stories

No stories found.

Advertisement

X
Kannada Prabha
www.kannadaprabha.com