ಸಿಂಗಾಪುರ್ ನಲ್ಲೂ ಕೋವಿಡ್ ರೂಪಾಂತರಿ JN.1: ವಾರದಲ್ಲಿ 56,000 ಹೊಸ ಪ್ರಕರಣ, ಭಾರತ ಸೇರಿ 40 ದೇಶಗಳಲ್ಲಿ ಸೋಂಕು ಪತ್ತೆ!

ವಿಶ್ವಾದ್ಯಂತ ಮಾರಕ ಕೊರೋನಾ ವೈರಸ್ ನ ಹೊಸ ರೂಪಾಂತರಿ JN.1 ವೈರಸ್ ಆತಂಕ ವ್ಯಾಪಕವಾಗುತ್ತಿದ್ದು, ಇದರ ಬೆನ್ನಲ್ಲೇ ಸಿಂಗಾಪುರದಲ್ಲಿ ಕೇವಲ ಒಂದು ವಾರದ ಅವಧಿಯಲ್ಲಿ 56,000 ಹೊಸ ಪ್ರಕರಣಗಳು ವರದಿಯಾಗಿರುವುದು ಜಾಗತಿಕ ಆತಂಕಕ್ಕೆ ಕಾರಣವಾಗಿದೆ.
ಸಿಂಗಾಪುರದಲ್ಲಿ ಕೋವಿಡ್ ಸೋಂಕು
ಸಿಂಗಾಪುರದಲ್ಲಿ ಕೋವಿಡ್ ಸೋಂಕು

ನವದೆಹಲಿ: ವಿಶ್ವಾದ್ಯಂತ ಮಾರಕ ಕೊರೋನಾ ವೈರಸ್ ನ ಹೊಸ ರೂಪಾಂತರಿ JN.1 ವೈರಸ್ ಆತಂಕ ವ್ಯಾಪಕವಾಗುತ್ತಿದ್ದು, ಇದರ ಬೆನ್ನಲ್ಲೇ ಸಿಂಗಾಪುರದಲ್ಲಿ ಕೇವಲ ಒಂದು ವಾರದ ಅವಧಿಯಲ್ಲಿ 56,000 ಹೊಸ ಪ್ರಕರಣಗಳು ವರದಿಯಾಗಿರುವುದು ಜಾಗತಿಕ ಆತಂಕಕ್ಕೆ ಕಾರಣವಾಗಿದೆ.

ಈ ಹಿಂದೆ ಇಡೀ ಜಗತ್ತನ್ನು ಕಾಡಿದ್ದ ಮಹಾಮಾರಿ ಕೊರೋನಾ ವೈರಸ್ ಇದೀಗ ಮತ್ತೊಂದು ರೂಪಾಂತರ ತಾಳಿದ್ದು, ತವರು ಚೀನಾ ಸೇರಿದಂತೆ ಭಾರತ, ಸಿಂಗಾಪುರ ಸೇರಿ ಜಗತ್ತಿನ 40 ದೇಶಗಳಲ್ಲಿ ರೂಪಾಂತರಿ ವೈರಸ್ ಪತ್ತೆಯಾಗುವ ಮೂಲಕ ವ್ಯಾಪಕ ಭೀತಿ ಹುಟ್ಟಿಸಿದೆ. ಪ್ರಮುಖವಾಗಿ ಕೇರಳದಲ್ಲಿ ಸೋಂಕಿತ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವುದು, ತಮಿಳುನಾಡಿನಲ್ಲಿ ರೂಪಾಂತರಿ ಸೋಂಕಿತರ ಸಂಖ್ಯೆ 8ಕ್ಕೇರಿಕೆಯಾಗಿರುವುದು ಆತಂಕ ಹೆಚ್ಚಾಗುವಂತೆ ಮಾಡಿದೆ.

ಸಿಂಗಾಪುರದಲ್ಲಿ ವಾರದ ಅವಧಿಯಲ್ಲಿ 56,000 ಹೊಸ ಪ್ರಕರಣ
ಭಾರತದ ಪರಿಸ್ಥಿತಿ ಹೀಗಿರುವಾಗಲೇ ಸಿಂಗಾಪುರದಲ್ಲಿ ಕೊರೋನಾ ವೈರಸ್ ತನ್ನ ಬಾಹುಗಳನ್ನು ಚಾಚುತ್ತಿದ್ದು, ಕೇವಲ ಒಂದು ವಾರದ ಅವಧಿಯಲ್ಲಿ ಬರೊಬ್ಬರಿ 56,000 ಹೊಸ ಪ್ರಕರಣಗಳು ವರದಿಯಾಗಿದೆ. ಹೀಗಾಗಿ ಸಿಂಗಾಪುರ ಆರೋಗ್ಯ ಸಚಿವಾಲಯವು ನಾಗರಿಕರು ಮತ್ತು ಪ್ರಯಾಣಿಕರಿಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಸಚಿವಾಲಯದ ಪ್ರಕಾರ, ಡಿಸೆಂಬರ್ 3 ರಿಂದ 9 2023 ರ ವಾರದಲ್ಲಿ ಅಂದಾಜು 56,043 ಪ್ರಕರಣಗಳ COVID-19 ಪ್ರಕರಣಗಳು ದಾಖಲಾಗಿವೆ. ಇದೇ ಹಿಂದಿನ ವಾರದಲ್ಲಿ 32,035 ಪ್ರಕರಣಗಳು ವರದಿಯಾಗಿತ್ತು ಎಂದು ಹೇಳಲಾಗಿದೆ.

ಭಾರತ ಸೇರಿ 40 ದೇಶಗಳಲ್ಲಿ ಸೋಂಕು ಪತ್ತೆ
ಹೊಸ JN.1 ರೂಪಾಂತರಿ ವೈರಸ್ ಭಾರತ ಮಾತ್ರವಲ್ಲದೇ ತವರು ಚೀನಾ ಸೇರಿದಂತೆ ಜಗತ್ತಿನ 40 ದೇಶಗಳಲ್ಲಿ ಪತ್ತೆಯಾಗಿದೆ. ಡಿಸೆಂಬರ್ 10ರ ವೇಳೆಗೆ ಜಗತ್ತಿನ ಕನಿಷ್ಠ 40 ಇತರ ದೇಶಗಳು ರೂಪಾಂತರಿ ವೈರಸ್ ಪ್ರಕರಣಗಳನ್ನು ವರದಿ ಮಾಡಿವೆ. ಅಮೆರಿಕದ 17 ರಾಜ್ಯಗಳಲ್ಲಿ ಕೋವಿಡ್ -19 ಮತ್ತು ಇತರ ಫ್ಲೂ ಪ್ರಕರಣಗಳು ಹೆಚ್ಚಾಗುತ್ತಿರುವ ಕುರಿತು ಆಸ್ಪತ್ರೆಗಳು ವರದಿ ಮಾಡುತ್ತಿವೆ ಎನ್ನಲಾಗಿದೆ. ಆಸ್ಪತ್ರೆಗೆ ದಾಖಲಾದವರ ಸಂಖ್ಯೆ 23,432 ಕ್ಕೆ ಏರಿದೆ. ಸಾಧ್ಯವಾದಷ್ಟು ಬೇಗ COVID-19, ಫ್ಲೂ ಮತ್ತು RSV ಲಸಿಕೆಗಳನ್ನು ನೀಡಲು ಅವರನ್ನು ಪ್ರೋತ್ಸಾಹಿಸುತ್ತದೆ ಆಡಳಿತ ಹೇಳಿದೆ ಎಂದು ವರದಿ ಹೇಳಿದೆ.

ಅಲ್ಲದೆ ಕಳೆದ ತಿಂಗಳಲ್ಲಿ, ಎಲ್ಲಾ ವಯೋಮಾನದವರಿಗೆ, ಕೋವಿಡ್-19 ಗೆ 200 ಪ್ರತಿಶತದಷ್ಟು ಮತ್ತು US ನಲ್ಲಿ ಜ್ವರಕ್ಕೆ 51 ಪ್ರತಿಶತದಷ್ಟು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ABC ನ್ಯೂಸ್ ವರದಿ ಮಾಡಿದೆ.

ಚೀನಾ ಮೂಲದ ರೋಗನಿರೋಧಕಶಾಸ್ತ್ರಜ್ಞರ ಪ್ರಕಾರ, ಹೆಚ್ಚಿನ ಪ್ರಕರಣಗಳು ವೈರಸ್‌ಗೆ ಯಾವುದೇ ಗಡಿಯಿಲ್ಲದ ಕಾರಣ JN.1 ರೂಪಾಂತರವನ್ನು ನಿರೀಕ್ಷಿಸಲಾಗಿದೆ. ಆದರೆ ಇದು ಸಾರ್ವಜನಿಕರ ಕಾಳಜಿಯಲ್ಲ. ಏಕೆಂದರೆ ಕೊರೋನವೈರಸ್ ಹೊಸ ರೂಪಾಂತರಗಳು ಭವಿಷ್ಯದಲ್ಲಿ ಕಾಣಿಸಿಕೊಳ್ಳಬಹುದು ಎಂದು ಹೇಳಿದ್ದಾರೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com