ಹೊಸ ವರ್ಷ 2024ನ್ನು ಅದ್ಧೂರಿಯಾಗಿ ಸ್ವಾಗತಿಸಿದ ನ್ಯೂಜಿಲೆಂಡ್..!!

2023 ಕೊನೆಗೊಳ್ಳಲು ಇನ್ನು ಕೆಲವೇ ಗಂಟೆಗಳು ಬಾಕಿ ಇರುವಂತೆಯೇ ಅತ್ತ ನ್ಯೂಜಿಲೆಂಡ್ ನಲ್ಲಿ ಅದ್ದೂರಿಯಾಗಿ ಹೊಸ ವರ್ಷ 2024 ಸ್ವಾಗತಿಸಲಾಗಿದೆ. 
ನ್ಯೂಜಿಲೆಂಡ್ ನ ಆಕ್ಲೆಂಡ್ ನಲ್ಲಿ ಹೊಸ ವರ್ಷದ ಸಂಭ್ರಮ
ನ್ಯೂಜಿಲೆಂಡ್ ನ ಆಕ್ಲೆಂಡ್ ನಲ್ಲಿ ಹೊಸ ವರ್ಷದ ಸಂಭ್ರಮ

ನವದೆಹಲಿ: 2023 ಕೊನೆಗೊಳ್ಳಲು ಇನ್ನು ಕೆಲವೇ ಗಂಟೆಗಳು ಬಾಕಿ ಇರುವಂತೆಯೇ ಅತ್ತ ನ್ಯೂಜಿಲೆಂಡ್ ನಲ್ಲಿ ಅದ್ದೂರಿಯಾಗಿ ಹೊಸ ವರ್ಷ 2024 ಸ್ವಾಗತಿಸಲಾಗಿದೆ. 

ನ್ಯೂಜಿಲೆಂಡ್ ನ ಆಕ್ಲೆಂಡ್ ನಲ್ಲಿ ಸಿಡಿಮದ್ದು ಮತ್ತು ದೀಪಾಲಂಕಾರಗಳ ಮೂಲಕ 2024ರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ತಮಕಿ ಮಕೌರೌ ಆಕ್ಲೆಂಡ್ ಹೊಸ ವರ್ಷವನ್ನು ಸ್ವಾಗತಿಸುವ ವಿಶ್ವದ ಮೊದಲ ಪ್ರಮುಖ ನಗರವಾಗಿದೆ. ಗಡಿಯಾರದ ಮುಳ್ಳುಗಳು ಮಧ್ಯರಾತ್ರಿ 12ಕ್ಕೆ ಸೇರುತ್ತಿದ್ದಂತೆಯೇ ಐದು ನಿಮಿಷಗಳ ಕಾಲ ಸತತ ಸಿಡಿಮದ್ದು ಮತ್ತು ಪಟಾಕಿ ಪ್ರದರ್ಶನದ ಮೂಲಕ ಅದ್ಧೂರಿಯಾಗಿ 2024ನ್ನು ಸ್ವಾಗತಿಸಲಾಯಿತು. 

ಆಕ್ಲೆಂಡ್ ನ ಸ್ಕೈ ಟವರ್‌ನ 55, 61 ಮತ್ತು 64ನೇ ಫ್ಲೋರ್ ಗಳಲ್ಲಿ ಹೊಸ ವರ್ಷ ಸ್ವಾಗತಿಸಲು ಅಳವಡಿಸಲಾಗಿದ್ದ ಮೂರು ಉದ್ದೇಶ-ನಿರ್ಮಿತ ಫೈರಿಂಗ್ ಸೈಟ್‌ಗಳಿಂದ 500kgs ಪೈರೋಟೆಕ್ನಿಕ್‌ಗಳನ್ನು ಸಿಡಿಸಲಾಯಿತು. ಇವು ಸುಮಾರು 200-240m ಎತ್ತರದಲ್ಲಿ ಹಾರಿ ಸಿಡಿದಿ ಬಾನಿನಲ್ಲಿ ಬಣ್ಣದ ಚಿತ್ತಾರ ಮೂಡಿಸಿದವು.

ಹೊಸ ವರ್ಷವನ್ನು ಸ್ವಾಗತಿಸುವ ಮೊದಲ ದೇಶ ಯಾವುದು ಗೊತ್ತಾ?    
ಯಾವ ದೇಶದಲ್ಲಿ ಹೊಸ ವರ್ಷ ಮೊದಲು ಬರುತ್ತದೆ? ವಿಶ್ವದಲ್ಲಿ ಮೊದಲು ಹೊಸ ವರ್ಷವನ್ನು ಎದುರುಗೊಳ್ಳುವುದು ಒಸಿಯಾನಿಯಾ ದೇಶ. ಟೊಂಗಾ, ಸಮೊವಾ, ಕಿರಬಾಸ್ ದೇಶಗಳು ಹೊಸ ವರ್ಷವನ್ನು ಮೊದಲು ಸ್ವಾಗತಿಸುತ್ತಾರೆ. ಈ ಸಮಯದಲ್ಲಿ ಭಾರತದಲ್ಲಿ ಡಿಸೆಂಬರ್ 31ರ ಮಧ್ಯಾಹ್ನ 3.30 ಆಗಿರುತ್ತದೆ. 

ಬ್ರಿಟನ್​ನಲ್ಲಿ ಇನ್ನೂ ಡಿಸೆಂಬರ್ 31ರ ಮುಂಜಾವಿನ 10 ಗಂಟೆಯಾಗಿರುತ್ತದೆ. ದ್ವೀಪ ರಾಷ್ಟ್ರಗಳಲ್ಲಿ ಹೊಸ ವರ್ಷ ಆಗಮಿಸಿದ ಐದೇ ನಿಮಿಷಕ್ಕೆ ನ್ಯೂಜಿಲೆಂಡ್ ದೇಶ ಹೊಸ ವರ್ಷವನ್ನು ಎದುರುಗೊಳ್ಳುತ್ತದೆ. ಮೂರು ಗಂಟೆಗಳ ನಂತರ ಆಸ್ಟ್ರೇಲಿಯಾದಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಪ್ರಾರಂಭವಾಗುತ್ತದೆ.

ಹೊಸ ವರ್ಷವನ್ನು ಕೊನೆಗೆ ಸ್ವಾಗತಿಸುವ ರಾಷ್ಟ್ರಗಳು ಯಾವುವು?
ಅಮೇರಿಕಾ ಸಂಯುಕ್ತ ಸಂಸ್ಥಾನದ ಸಮೀಪವಿರುವ ದ್ವೀಪ ರಾಷ್ಟ್ರಗಳಾದ ಹೋಲ್ಯಾಂಡ್ ಮತ್ತು ಬೇಕಲ್​ ಐಲ್ಯಾಂಡ್ ಹೊಸ ವರ್ಷಾಚರಣೆಯನ್ನು ಕೊನೆಯದಾಗಿ ಆಚರಿಸುತ್ತವೆ. ಅವು ಹೊಸ ವರ್ಷ ಸ್ವಾಗತಿಸುವಾಗ ಭಾರತದಲ್ಲಿ ಜನವರಿ 1ರ ಸಂಜೆ 5.30 ಆಗಿರುತ್ತದೆ. ಅಚ್ಚರಿಯ ಸಂಗತಿಯೆಂದರೆ ಕಡೆಯದಾಗಿ ಹೊಸ ವರ್ಷ ಸ್ವಾಗತಿಸುವ 2ನೇ ರಾಷ್ಟ್ರ ‘ಅಮೇರಿಕನ್ ಸಮೋವಾ’. ಇದಕ್ಕೂ ಮೊದಲು ಹೊಸ  ವರ್ಷ ಸ್ವಾಗತಿಸುವ ಟೊಂಗಕ್ಕೂ ಕೇವಲ 558 ಮೈಲುಗಳ ದೂರವಷ್ಟೇ ಅಂತರವಿದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com