ಚಾಕು ದಾಳಿಯ 6 ತಿಂಗಳ ಬಳಿಕ ಸಲ್ಮಾನ್ ರಶ್ದಿ ಹೊಸ ಪುಸ್ತಕ ಬಿಡುಗಡೆ

ಈ ಹಿಂದೆ ಚಾಕು ಇರಿತ ದಾಳಿಗೆ ತುತ್ತಾಗಿದ್ದ ಖ್ಯಾತ ವಿವಾದಾತ್ಮಕ ಲೇಖಕ ಸಲ್ಮಾನ್ ರಶ್ದಿ ಅವರ ನೂತನ ಪುಸ್ತಕ ಬಿಡುಗಡೆಯಾಗಿದೆ. 
ಚಾಕು ದಾಳಿಯ 6 ತಿಂಗಳ ಬಳಿಕ ಸಲ್ಮಾನ್ ರಶ್ದಿ ಹೊಸ ಪುಸ್ತಕ ಬಿಡುಗಡೆ
Updated on

ಲಂಡನ್: ಈ ಹಿಂದೆ ಚಾಕು ಇರಿತ ದಾಳಿಗೆ ತುತ್ತಾಗಿದ್ದ ಖ್ಯಾತ ವಿವಾದಾತ್ಮಕ ಲೇಖಕ ಸಲ್ಮಾನ್ ರಶ್ದಿ ಅವರ ನೂತನ ಪುಸ್ತಕ ಬಿಡುಗಡೆಯಾಗಿದೆ.

ಹೌದು.. ಚಾಕು ದಾಳಿಯಾದ 6 ತಿಂಗಳ ಬಳಿಕ ಬ್ರಿಟಿಷ್ ಲೇಖಕ ಸಲ್ಮಾನ್ ರಶ್ದಿ ಮಂಗಳವಾರ ತಮ್ಮ ಹೊಸ ಕಾದಂಬರಿ "ವಿಕ್ಟರಿ ಸಿಟಿ" ಅನ್ನು ಪ್ರಕಟಿಸಿದ್ದಾರೆ. ಇದು 14 ನೇ ಶತಮಾನದ ಮಹಿಳೆಯ ಕುರಿತಾದ ಕಾವ್ಯವಾಗಿದ್ದು, ಒಂದು ನಗರವನ್ನು ಆಳಲು ಪಿತೃಪ್ರಭುತ್ವದ ಜಗತ್ತನ್ನು ಧಿಕ್ಕರಿಸುವ ಕಥಾಹಂದರವನ್ನು ಹೊಂದಿದೆ.

ಭಾರತ ಮೂಲದ ಲೇಖಕ ರಶ್ಜಿ ಚಾಕು ದಾಳಿಗೂ ಮೊದಲು ಬರೆಯಲಾದ ಈ ಕಾದಂಬರಿಯು ಮೂಲತಃ ಸಂಸ್ಕೃತದಲ್ಲಿ ಬರೆದ ಐತಿಹಾಸಿಕ ಮಹಾಕಾವ್ಯದ ಅನುವಾದವಾಗಿದೆ ಎಂದು ಹೇಳಲಾಗಿದೆ. ಬಹು ನಿರೀಕ್ಷಿತ ಕೃತಿಯು ಯುವ ಅನಾಥ ಹುಡುಗಿ ಪಂಪಾ ಕಂಪನಳ ಕಥೆಯನ್ನು ಹೇಳುತ್ತದೆ, ಅವಳು ಮಾಂತ್ರಿಕ ಶಕ್ತಿಗಳನ್ನು ಹೊಂದಿರುವ ದೇವತೆಯಿಂದ ದಯಪಾಲಿಸಲ್ಪಟ್ಟಿದ್ದಾಳೆ ಮತ್ತು ಆಧುನಿಕ ಭಾರತದಲ್ಲಿ ಬಿಸ್ನಾಗ ನಗರವನ್ನು ಸ್ಥಾಪಿಸಿದಳು, ಇದನ್ನು ಇತಿಹಾಸದಲ್ಲಿ ವಿಜಯ ನಗರ ಎಂದು ಅನುವಾದಿಸಲಾಗಿದೆ.

75 ವರ್ಷದ ರಶ್ದಿ ಅವರು ತಮ್ಮ ದೈಹಿಕ ಸ್ಥಿತಿಯ ಕಾರಣದಿಂದ ಅವರ 15 ನೇ ಕಾದಂಬರಿ ಕುರಿತು ಹೆಚ್ಚು ಪ್ರಚಾರ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರಲಿಲ್ಲ. 

ಕಳೆದ ಆಗಸ್ಟ್ 12 ರಂದು ಅಪ್‌ಸ್ಟೇಟ್ ನ್ಯೂಯಾರ್ಕ್‌ನ ಚೌಟೌಕ್ವಾದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಲು ಮುಂದಾದಾಗ ಅವರ ಮೇಲೆ ಆಗಂತುಕ ಚಾಕು ದಾಳಿ ನಡೆಸಿದ್ದ. 

ಇರಾನ್‌ನ ಮೊದಲ ಸರ್ವೋಚ್ಚ ನಾಯಕ ಅಯತೊಲ್ಲಾ ರುಹೊಲ್ಲಾ ಖೊಮೇನಿ ಅವರನ್ನು ರಶ್ದಿ ತಮ್ಮ "ದಿ ಸೈಟಾನಿಕ್ ವರ್ಸಸ್" ಪುಸ್ತಕದಲ್ಲಿ ನಿಂದಿಸಿದ್ದರು ಎಂದು ಆರೋಪಿಸಿ ರಶ್ದಿ ಹತ್ಯೆಗೆ ಆದೇಶಿಸಲಾಗಿತ್ತು. ಈ ಘಚನೆ ಬಳಿಕ ಲೇಖಕ ರಶ್ಜಿ ಸುಮಾರು ವರ್ಷಗಳ ಕಾಲ ತಲೆಮರೆಸಿಕೊಂಡಿದ್ದರು.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com