'ಧರ್ಮನಿಂದನೆ'ಗಾಗಿ ವಿಕಿಪೀಡಿಯಾ ಮೇಲೆ ವಿಧಿಸಿದ್ದ ನಿರ್ಬಂಧ ತೆರವುಗೊಳಿಸಿದ ಪಾಕಿಸ್ತಾನ

ಧರ್ಮನಿಂದನೆಯ ವಿಷಯವನ್ನು ತೆಗೆದುಹಾಕುವಲ್ಲಿ ವಿಫಲವಾದ ಕಾರಣಕ್ಕಾಗಿ ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರ ಎನ್‌ಸೈಕ್ಲೋಪೀಡಿಯಾಗೆ ನಿರ್ಬಂಧ ವಿಧಿಸಿದ ಎರಡು ದಿನಗಳ ನಂತರ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ತಕ್ಷಣದಿಂದಲೇ ಜಾರಿಗೆ ಬರುವಂತೆ ವಿಕಿಪೀಡಿಯಾ ಮೇಲೆ ವಿಧಿಸಿರುವ ನಿರ್ಬಂಧ ತೆರವಿಗೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ಇಸ್ಲಾಮಾಬಾದ್: ಆಕ್ಷೇಪಾರ್ಹ ಮತ್ತು ಧರ್ಮನಿಂದನೆಯ ವಿಷಯವನ್ನು ತೆಗೆದುಹಾಕುವಲ್ಲಿ ವಿಫಲವಾದ ಕಾರಣಕ್ಕಾಗಿ ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರ (ಪಿಟಿಎ) ಎನ್‌ಸೈಕ್ಲೋಪೀಡಿಯಾಗೆ ನಿರ್ಬಂಧ ವಿಧಿಸಿದ ಎರಡು ದಿನಗಳ ನಂತರ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ತಕ್ಷಣದಿಂದಲೇ ಜಾರಿಗೆ ಬರುವಂತೆ ವಿಕಿಪೀಡಿಯಾ ಮೇಲೆ ವಿಧಿಸಿರುವ ನಿರ್ಬಂಧ ತೆರವಿಗೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ತಕ್ಷಣದಿಂದಲೇ ಜಾರಿಗೆ ಬರುವಂತೆ ವಿಕಿಪೀಡಿಯಾವನ್ನು ಮರುಸ್ಥಾಪಿಸುವಂತೆ ನಿರ್ದೇಶನ ನೀಡಲು ಪ್ರಧಾನಿ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಮರಿಯುಮ್ ಔರಂಗಜೇಬ್ ಸೋಮವಾರ ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಧಾನಿ ಆದೇಶವನ್ನು ಪೋಸ್ಟ್ ಮಾಡಿದ್ದಾರೆ.

ವಿಕಿಪೀಡಿಯಾ ಮತ್ತು ಇತರ ಆನ್‌ಲೈನ್ ವಿಷಯಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ನೋಡಿಕೊಳ್ಳಲು ಪ್ರಧಾನಮಂತ್ರಿ ಕ್ಯಾಬಿನೆಟ್ ಸಮಿತಿಯನ್ನು ಸಹ ರಚಿಸಿದ್ದಾರೆ ಎಂದು ಅವರು ಹೇಳಿದರು.

ವಿಕಿಪೀಡಿಯಾ, ವಿಶ್ವದ ಅತಿದೊಡ್ಡ ಉಚಿತ ಆನ್‌ಲೈನ್ ವಿಶ್ವಕೋಶವಾಗಿದ್ದು, ಪ್ರಪಂಚದಾದ್ಯಂತದ ಸ್ವಯಂಸೇವಕರಿಂದ ಮಾಹಿತಿಗಳನ್ನು ಸೇರಿಸಬಹುದಾಗಿದೆ ಮತ್ತು ಎಡಿಟ್ ಮಾಡಬಹುದಾಗಿದೆ. ಇದನ್ನು ವಿಕಿಮೀಡಿಯಾ ಫೌಂಡೇಶನ್‌ನಿಂದ ನಿರ್ಮಿಸಲಾಗಿದೆ.

ಧರ್ಮ ನಿಂದನೆಯ ವಿಷಯಗಳನ್ನು ಶುಕ್ರವಾರದೊಳಗೆ ತನ್ನ ವೆಬ್‌ಸೈಟ್‌ನಿಂದ ತೆಗೆದು ಹಾಕದಿದ್ದರೆ ವಿಕಿಪೀಡಿಯ ಮೇಲೆ ನಿಷೇಧ ಹೇರುವುದಾಗಿ ಪಾಕಿಸ್ತಾನ ಎಚ್ಚರಿಸಿತ್ತು. ಆದರೆ, ಇದನ್ನು ನಿರ್ಲಕ್ಷ್ಯಿಸಿದ್ದರಿಂದ ವಿಕಿಪೀಡಿಯಾವನ್ನು ನಿರ್ಬಂಧಿಸಲಾಗಿದೆ ಎಂದು ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರ ಹೇಳಿತ್ತು.

ಇಂತಹ ವಿಷಯಗಳು ಮುಸ್ಲಿಮರ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ನಿಯಂತ್ರಕದ ವಕ್ತಾರರಾದ ಮಲಾಹತ್ ಒಬೈದ್ ಹೇಳಿದ್ದಾರೆ.

ವೆಬ್‌ಸೈಟಿನಲ್ಲಿ ಹೇಳಲಾದ ವಿಷಯವನ್ನು ನಿರ್ಬಂಧಿಸಲು ಅಥವಾ ತೆಗೆದುಹಾಕಲು ವಿಕಿಪೀಡಿಯಾವನ್ನು ಸಂಪರ್ಕಿಸಲಾಯಿತು. ವಿಚಾರಣೆಗೆ ಅವಕಾಶ ನೀಡಲಾಯಿತು. ಆದಾಗ್ಯೂ, ವೇದಿಕೆಯು ಧರ್ಮನಿಂದನೆಯ ವಿಷಯವನ್ನು ತೆಗೆದುಹಾಕುವ ಮೂಲಕ ಕಾನೂನನ್ನು ಪಾಲಿಸಿಲ್ಲ ಅಥವಾ ಪ್ರಾಧಿಕಾರದ ಮುಂದೆ ಹಾಜರಾಗಲಿಲ್ಲ ಎಂದು ಪಿಟಿಎ ವಕ್ತಾರರು ದೂರಿದ್ದಾರೆ.

ಪಿಟಿಎ ನೀಡಿದ ನಿರ್ದೇಶನಗಳನ್ನು ಅನುಸರಿಸಲು ಉದ್ದೇಶಪೂರ್ವಕವಾಗಿ ವಿಫಲವಾದ ಕಾರಣ, ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರವು ದೇಶದಲ್ಲಿ ವಿಕಿಪೀಡಿಯಾ ವೆಬ್‌ಸೈಟ್ ಅನ್ನು 48 ಗಂಟೆಗಳ ಕಾಲ ಕೆಳದರ್ಜೆಗೆ ಇಳಿಸಿತು. ಈ ವೇಳೆ ವೆಬ್‌ಸೈಟ್ ಆ್ಯಕ್ಸೆಸ್ ನಿಧಾನವಾಗಿತ್ತು.  

ವಿಕಿಪೀಡಿಯಾವು ಕ್ರೌಡ್-ಸೋರ್ಸ್ಡ್ ಪ್ಲಾಟ್‌ಫಾರ್ಮ್ ಆಗಿದ್ದು, ಖಾತೆಯನ್ನು ಹೊಂದಿರುವ ಯಾರಾದರೂ ಲೇಖನಗಳನ್ನು ಎಡಿಟ್ ಮಾಡಬಹುದು ಎಂಬುದನ್ನು ನ್ಯಾಯಾಲಯಗಳು ಮತ್ತು ನಿಯಂತ್ರಕರು ಅರಿತುಕೊಳ್ಳಬೇಕು. ಸಂಪೂರ್ಣ ವೆಬ್‌ಸೈಟ್ ಅನ್ನು ನಿರ್ಬಂಧಿಸುವ ಬದಲು ಅದನ್ನು ಎಡಿಟ್ ಸಹ ಮಾಡಬಹುದು ಎಂದು  ಎಂದು ಬೊಲೊಭಿ ನಿರ್ದೇಶಕರು ಹೇಳಿರುವುದಾಗಿ ದಿ ನ್ಯೂಸ್ ವರದಿ ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com