ಧರ್ಮನಿಂದನೆಯ ವಿಷಯದ ಕಾರಣದಿಂದಾಗಿ ವಿಕಿಪೀಡಿಯಾಗೆ ಪಾಕಿಸ್ತಾನದಲ್ಲಿ ನಿರ್ಬಂಧ

ಆಕ್ಷೇಪಾರ್ಹ ಅಥವಾ ಧಾರ್ಮಿಕ ನಿಂದನೆಯ ವಿಚಾರಗಳನ್ನು ತೆಗೆದುಹಾಕಲು ವೆಬ್‌ಸೈಟ್ ನಿರಾಕರಿಸಿದ ಕಾರಣ ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರ (ಪಿಟಿಎ) ವಿಕಿಪೀಡಿಯಾವನ್ನು ನಿರ್ಬಂಧಿಸಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಇಸ್ಲಾಮಾಬಾದ್: ಆಕ್ಷೇಪಾರ್ಹ ಅಥವಾ ಧಾರ್ಮಿಕ ನಿಂದನೆಯ ವಿಚಾರಗಳನ್ನು ತೆಗೆದುಹಾಕಲು ವೆಬ್‌ಸೈಟ್ ನಿರಾಕರಿಸಿದ ಕಾರಣ ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರ (ಪಿಟಿಎ) ವಿಕಿಪೀಡಿಯಾವನ್ನು ನಿರ್ಬಂಧಿಸಿದೆ.

ಇದಕ್ಕೂ ಮುನ್ನ ಧರ್ಮ ನಿಂದನೆಯ ವಿಷಯಗಳನ್ನು ಶುಕ್ರವಾರದೊಳಗೆ ತನ್ನ ವೆಬ್‌ಸೈಟ್‌ನಿಂದ ತೆಗೆದು ಹಾಕದಿದ್ದರೆ ವಿಕಿಪೀಡಿಯ ಮೇಲೆ ನಿಷೇಧ ಹೇರುವುದಾಗಿ ಪಾಕಿಸ್ತಾನ ಎಚ್ಚರಿಸಿತ್ತು. ಇದರ ಭಾಗವಾಗಿ ದೂರಸಂಪರ್ಕ ಪ್ರಾಧಿಕಾರವು ದೇಶದಲ್ಲಿ ವಿಕಿಪೀಡಿಯಾ ವೆಬ್‌ಸೈಟ್ ಅನ್ನು ಕೆಳದರ್ಜೆಗೆ ಇಳಿಸಿದೆ. ಈ ವೇಳೆ ವೆಬ್‌ಸೈಟ್ ಆ್ಯಕ್ಸೆಸ್ ನಿಧಾನವಾಗಿತ್ತು ದಿ ನ್ಯೂಸ್ ಶನಿವಾರ ವರದಿ ಮಾಡಿತ್ತು.

ಶುಕ್ರವಾರ ತಡರಾತ್ರಿ ಪಿಟಿಎ ವಕ್ತಾರರನ್ನು ಸಂಪರ್ಕಿಸಿ ವಿಕಿಪೀಡಿಯವನ್ನು ನಿರ್ಬಂಧಿಸುವ ಬಗ್ಗೆ ವಿಚಾರಿಸಿದಾಗ, 'ಹೌದು' ಅದನ್ನು ನಿರ್ಬಂಧಿಸಲಾಗಿದೆ ಎಂದು ದೃಢಪಡಿಸಿದರು.

ಹೈಕೋರ್ಟಿನ ಸೂಚನೆ ಮೇರೆಗೆ, ವೆಬ್‌ಸೈಟ್‌ನಲ್ಲಿ ಧರ್ಮನಿಂದೆಯ ವಿಷಯವಿದ್ದ ಕಾರಣ ಪಿಟಿಎ 48 ಗಂಟೆಗಳ ಕಾಲ ವಿಶ್ವಕೋಶಕ್ಕೆ ಪ್ರವೇಶವನ್ನು ಅಡ್ಡಿಪಡಿಸುತ್ತದೆ ಮತ್ತು ನಿಧಾನಗೊಳಿಸಿದೆ ಎಂದು ದಿ ನ್ಯೂಸ್ ವರದಿ ಮಾಡಿದೆ.

ಇದಕ್ಕೆ ಅನ್ವಯವಾಗುವ ಕಾನೂನು ಮತ್ತು ನ್ಯಾಯಾಲಯದ ಆದೇಶಗಳ ಅಡಿಯಲ್ಲಿ ನೋಟಿಸ್ ನೀಡುವ ಮೂಲಕ ವೆಬ್‌ಸೈಟಿನಲ್ಲಿ ಹೇಳಲಾದ ವಿಷಯವನ್ನು ನಿರ್ಬಂಧಿಸಲು ಅಥವಾ ತೆಗೆದುಹಾಕಲು ವಿಕಿಪೀಡಿಯಾವನ್ನು ಸಂಪರ್ಕಿಸಲಾಗಿದೆ ಎಂದು ಪಿಟಿಎ ವಕ್ತಾರರು ತಿಳಿಸಿದ್ದಾರೆ.

ವಿಚಾರಣೆಗೆ ಅವಕಾಶವನ್ನೂ ಒದಗಿಸಲಾಯಿತು. ಆದಾಗ್ಯೂ, ವೇದಿಕೆಯು ಧರ್ಮನಿಂದನೆಯ ವಿಷಯವನ್ನು ತೆಗೆದುಹಾಕುವ ಮೂಲಕ ಕಾನೂನನ್ನು ಪಾಲಿಸಿಲ್ಲ ಅಥವಾ ಪ್ರಾಧಿಕಾರದ ಮುಂದೆ ಹಾಜರಾಗಲಿಲ್ಲ ಎಂದು ದೂರಿದೆ.

ವರದಿ ಮಾಡಲಾದ ಕಾನೂನುಬಾಹಿರ ವಿಷಯವನ್ನು ನಿರ್ಬಂಧಿಸಿದರೆ ಅಥವಾ ತೆಗೆದುಹಾಕಿದರೆ ವಿಕಿಪೀಡಿಯಾದ ಸೇವೆಗಳ ಮರುಸ್ಥಾಪನೆಯನ್ನು ಮರುಪರಿಶೀಲಿಸಲಾಗುತ್ತದೆ ಎನ್ನಲಾಗಿದೆ.

ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಡಿಜಿಟಲ್ ಹಕ್ಕುಗಳ ಕಾರ್ಯಕರ್ತ ಉಸಾಮಾ ಖಿಲ್ಜಿ, ಅಧಿಕಾರಿಗಳು ಮಾಹಿತಿ ಪೋರ್ಟಲ್ ಅನ್ನು ನಿರ್ಬಂಧಿಸಿದ್ದಾರೆ ಎಂದು ಟೀಕಿಸಿದರು.

ವಿಕಿಪೀಡಿಯಾ, ವಿಶ್ವದ ಅತಿದೊಡ್ಡ ವಿಶ್ವಕೋಶವಾಗಿದ್ದು, ಅದನ್ನು ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರವು ಪಾಕಿಸ್ತಾನದಲ್ಲಿ ನಿರ್ಬಂಧಿಸಿದೆ.

ವಿಕಿಪೀಡಿಯಾವು ಕ್ರೌಡ್-ಸೋರ್ಸ್ಡ್ ಪ್ಲಾಟ್‌ಫಾರ್ಮ್ ಆಗಿದ್ದು, ಖಾತೆಯನ್ನು ಹೊಂದಿರುವ ಯಾರಾದರೂ ಲೇಖನಗಳನ್ನು ಎಡಿಟ್ ಮಾಡಬಹುದು ಎಂಬುದನ್ನು ನ್ಯಾಯಾಲಯಗಳು ಮತ್ತು ನಿಯಂತ್ರಕರು ಅರಿತುಕೊಳ್ಳಬೇಕು. ಸಂಪೂರ್ಣ ವೆಬ್‌ಸೈಟ್ ಅನ್ನು ನಿರ್ಬಂಧಿಸುವ ಬದಲು ಅದನ್ನು ಎಡಿಟ್ ಸಹ ಮಾಡಬಹುದು ಎಂದು  ಎಂದು ಬೊಲೊಭಿ ನಿರ್ದೇಶಕರು ಹೇಳಿರುವುದಾಗಿ ದಿ ನ್ಯೂಸ್ ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com