ಪಾಕಿಸ್ತಾನದಲ್ಲಿ ಭಯೋತ್ಪಾದಕರು ಓಡಾಡುತ್ತಿದ್ದಾರೆ ಎಂಬುದನ್ನು ಒಪ್ಪಿಕೊಂಡ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್

ಪಾಕಿಸ್ತಾನದಲ್ಲಿ ಭಯೋತ್ಪಾದಕರು ಓಡಾಡುತ್ತಿದ್ದಾರೆ ಆದರೆ, ಅವರಿಗೆ ಸುರಕ್ಷಿತ ನೆಲೆ ಇಲ್ಲ ಎಂದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ತಪ್ಪೊಪ್ಪಿಕೊಂಡಿದ್ದಾರೆ. ಪಾಕಿಸ್ತಾನದ ಯಾವುದೇ ಪ್ರದೇಶದಲ್ಲಿ ಯಾವುದೇ ಭಯೋತ್ಪಾದಕರು ನಿರ್ಧಿಷ್ಟವಾಗಿ ನೆಲೆಸಿದ್ದಾರೆ ಎಂಬುದನ್ನು ಅವರು ತಳ್ಳಿಹಾಕಿರುವುದಾಗಿ ಸಾಮಾ ಟಿವಿ ವರದಿ ಮಾಡಿದೆ.
ಶೆಹಬಾಜ್ ಷರೀಫ್
ಶೆಹಬಾಜ್ ಷರೀಫ್

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಭಯೋತ್ಪಾದಕರು ಓಡಾಡುತ್ತಿದ್ದಾರೆ ಆದರೆ, ಅವರಿಗೆ ಸುರಕ್ಷಿತ ನೆಲೆ ಇಲ್ಲ ಎಂದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ತಪ್ಪೊಪ್ಪಿಕೊಂಡಿದ್ದಾರೆ.

ಪಾಕಿಸ್ತಾನದ ಯಾವುದೇ ಪ್ರದೇಶದಲ್ಲಿ ಯಾವುದೇ ಭಯೋತ್ಪಾದಕರು ನಿರ್ದಿಷ್ಟವಾಗಿ ನೆಲೆಸಿದ್ದಾರೆ ಎಂಬುದನ್ನು ಅವರು ತಳ್ಳಿಹಾಕಿರುವುದಾಗಿ ಸಾಮಾ ಟಿವಿ ವರದಿ ಮಾಡಿದೆ.

ಅವರು (ಉಗ್ರರು) ಪಾಕಿಸ್ತಾನದಲ್ಲಿ ಸುತ್ತಾಡುತ್ತಿದ್ದರೂ ಕೂಡ, ದೇಶದ ಯಾವುದೇ ಭಾಗದಲ್ಲಿ ನೆಲೆಸಲು ಸಾಧ್ಯವಾಗುತ್ತಿಲ್ಲ. ಭಯೋತ್ಪಾದನೆಯ ಪಿಡುಗಿನ ವಿರುದ್ಧ ಹೋರಾಡಲು ಷರೀಫ್ ಈ ಸಮಯದಲ್ಲಿ ಎಲ್ಲರೂ ಒಟ್ಟಾಗಬೇಕು ಎಂದು ಹೇಳಿದರು. 

ಇದು ಮಾಡು ಇಲ್ಲವೇ ಮಡಿ ಎಂಬ ಸ್ಥಿತಿ ನಿರ್ಮಾಣವಾಗಿದ್ದು, ದೇಶದಲ್ಲಿ ಪುನರುತ್ಥಾನಗೊಳ್ಳುತ್ತಿರುವ ಭಯೋತ್ಪಾದನೆ ವಿರುದ್ಧ ಸಮಗ್ರ ಕಾರ್ಯತಂತ್ರ ರೂಪಿಸಲು ರಾಜಕೀಯ ನಾಯಕತ್ವ ಒಟ್ಟಾಗಿ ಕುಳಿತುಕೊಳ್ಳಬೇಕು. ಭಯೋತ್ಪಾದನೆ ನಿರ್ಮೂಲನೆ ಮಾಡಿದ ಹಿಂದಿನ ಯಶಸ್ವಿ ಸೇನಾ ಕಾರ್ಯಾಚರಣೆಗಳನ್ನು ಪ್ರಸ್ತಾಪಿಸಿದ ಅವರು, ಭಯೋತ್ಪಾದನೆ ನಿರ್ನಾಮವಾದ ನಂತರ ಇಂತಹ ಘಟನೆ ಹೇಗೆ ನಡೆಯಿತು ಎಂದು ರಾಷ್ಟ್ರವು ಪ್ರಶ್ನಿಸುತ್ತದೆ ಎಂದರು.

ಪೇಶಾವರ ಮಸೀದಿ ಸ್ಫೋಟದಲ್ಲಿ ಭದ್ರತಾ ಲೋಪಗಳ ಬಗ್ಗೆ ತನಿಖೆಯಾಗಬೇಕು ಆದರೆ, ಸರ್ಕಾರದ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡಬಾರದು ಎಂದು ಶರೀಫ್ ಹೇಳಿದರು ಎಂದು ಸಾಮಾ ಟಿವಿ ವರದಿ ಮಾಡಿದೆ. 

ಸ್ಫೋಟದ ನಂತರ ಪೇಶಾವರದಲ್ಲಿ ಪ್ರಧಾನ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಸೇನಾ ಮುಖ್ಯಸ್ಥರೂ ಭಾಗವಹಿಸಿದ್ದರು. 100 ಕ್ಕೂ ಹೆಚ್ಚು ಸಾವುನೋವುಗಳಿಗೆ ಕಾರಣವಾದ ಮಾರಣಾಂತಿಕ ದಾಳಿಯ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರವನ್ನು ಅವರು ಖಂಡಿಸಿದರು.

ಆರ್ಥಿಕ ನೆರವಿಗಾಗಿ ಐಎಂಎಫ್ ಷರತ್ತುಗಳಿಗೆ ಪಾಕಿಸ್ತಾನ 'ಒಪ್ಪಿಕೊಳ್ಳಬೇಕಾಗುತ್ತದೆ': ಪ್ರಧಾನಿ

ಪೇಶಾವರ: ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು 'ಕಲ್ಪನೆಗೆ ಮೀರಿದ' ಐಎಂಎಫ್ (ಅಂತಾರಾಷ್ಟ್ರೀಯ ಹಣಕಾಸು ನಿಧಿ) ಆರ್ಥಿಕ ನೆರವು ನೀಡಲು ವಿಧಿಸಿರುವ ಷರತ್ತುಗಳನ್ನು ಸರ್ಕಾರ ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಶುಕ್ರವಾರ ಹೇಳಿದ್ದಾರೆ.

'ನಾನು ಈ ಬಗ್ಗೆ ಹೆಚ್ಚು ವಿವರವಾಗಿ ಹೇಳುವುದಿಲ್ಲ. ಆದರೆ, ನಮಗೆ ಎದುರಾಗಿರುವ ಆರ್ಥಿಕ ಸವಾಲನ್ನು ಊಹಿಸಲು ಸಾಧ್ಯವಿಲ್ಲ ಎಂದು ಮಾತ್ರ ಹೇಳುತ್ತೇನೆ. ಆರ್ಥಿಕ ನೆರವಿಗಾಗಿ ಐಎಂಎಫ್ ವಿಧಿಸಿರುವ ಷರತ್ತುಗಳು ಕಲ್ಪನೆಗೆ ಮೀರಿವೆ. ಆದರೆ, ನಾವು ಈ ಷರತ್ತುಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ' ಎಂದು ಷರೀಫ್ ದೂರದರ್ಶನವೊಂದಕ್ಕೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪಾಕಿಸ್ತಾನದ ಆರ್ಥಿಕತೆಯು ತೀವ್ರ ಸಂಕಷ್ಟದಲ್ಲಿದೆ. ರಾಜಕೀಯ ಅವ್ಯವಸ್ಥೆ ಮತ್ತು ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿಯ ನಡುವೆ ಹೆಚ್ಚಿನ ಮಟ್ಟದ ಬಾಹ್ಯ ಸಾಲವನ್ನು ಪೂರೈಸಲು ಪ್ರಯತ್ನಿಸುತ್ತಿರುವುದರಿಂದ ಪಾವತಿಗಳ ಸಮತೋಲನದ ಬಿಕ್ಕಟ್ಟಿನಿಂದ ಬಳಲುತ್ತಿದೆ.

ಪಾಕಿಸ್ತಾನದ ಸೆಂಟ್ರಲ್ ಬ್ಯಾಂಕ್ ಗುರುವಾರ ತನ್ನ ವಿದೇಶಿ ವಿನಿಮಯ ಸಂಗ್ರಹ ಮತ್ತೆ 3.1 ಶತಕೋಟಿ ಡಾಲರ್‌ಗೆ ಇಳಿದಿದೆ ಎಂದು ಹೇಳಿದ್ದು, ಇದು ಕೇವಲ ಮೂರು ವಾರಗಳಿಗಿಂತ ಕಡಿಮೆ ಆಮದುಗಳಿಗೆ ಸಾಕಾಗುತ್ತದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿರುವ ಹಣದುಬ್ಬರವು ಬುಧವಾರ 48 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿತು. ಪಾಕಿಸ್ತಾನಿಗಳು ಮೂಲಭೂತ ಆಹಾರ ಪದಾರ್ಥಗಳನ್ನು ಪಡೆಯಲು ಸಹ ಹೆಣಗಾಡುತ್ತಿದ್ದಾರೆ.

ಐಎಂಎಫ್ ವಿಧಿಸಿದ್ದ ಬೇಡಿಕೆಗಳನ್ನು ಒಪ್ಪಿಕೊಳ್ಳಲು ಸರ್ಕಾರಕ್ಕೆ ಇಷ್ಟವಿಲ್ಲದ ಕಾರಣ ತಿಂಗಳುಗಟ್ಟಲೆ ಸ್ಥಗಿತಗೊಂಡಿದ್ದ ಆರ್ಥಿಕ ನೆರವು ಕಾರ್ಯಕ್ರಮವನ್ನು ಪುನರುಜ್ಜೀವನಗೊಳಿಸಲು ತುರ್ತು ಮಾತುಕತೆಗಾಗಿ ಅಂತಾರಾಷ್ಟ್ರೀಯ ಹಣಕಾಸು ನಿಧಿ ಮಂಗಳವಾರ ಪಾಕಿಸ್ತಾನಕ್ಕೆ ಆಗಮಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com