ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ಬೆಂಬಲಕ್ಕೆ ನಿಂತರೆ ನಿರ್ಬಂಧ ಎದುರಿಸಬೇಕಾಗುತ್ತೆ; ಚೀನಾಗೆ ಅಮೇರಿಕ ಎಚ್ಚರಿಕೆ

ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿರುವ ರಷ್ಯಾದ ಬೆಂಬಲಕ್ಕೆ ನಿಂತರೆ ನಿರ್ಬಂಧ ಎದುರಿಸಬೇಕಾಗುತ್ತದೆ ಎಂದು ಅಮೇರಿಕಾ ಚೀನಾಗೆ ಎಚ್ಚರಿಕೆ ನೀಡಿದೆ. 
ಅಮೆರಿಕ-ಚೀನಾ (ಸಂಗ್ರಹ ಚಿತ್ರ)
ಅಮೆರಿಕ-ಚೀನಾ (ಸಂಗ್ರಹ ಚಿತ್ರ)

ಜರ್ಮನಿ: ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿರುವ ರಷ್ಯಾದ ಬೆಂಬಲಕ್ಕೆ ನಿಂತರೆ ನಿರ್ಬಂಧ ಎದುರಿಸಬೇಕಾಗುತ್ತದೆ ಎಂದು ಅಮೇರಿಕಾ ಚೀನಾಗೆ ಎಚ್ಚರಿಕೆ ನೀಡಿದೆ. 

ಅಮೇರಿಕಾ ಸಚಿವ ಆಂಟೊನಿ ಬ್ಲಿಂಕನ್ ಚೀನಾಗೆ ಎಚ್ಚರಿಕೆ ನೀಡಿದ್ದು, ಇದೇ ವೇಳೆ ಚೀನಾದ ಸ್ಪೈ ಬಲೂನ್ ಬಗ್ಗೆಯೂ ಮಾತನಾಡಿದ್ದಾರೆ. ಅಮೇರಿಕಾದ ಸಾರ್ವಭೌಮತ್ವವನ್ನು ಚೀನಾ ಉಲ್ಲಂಘನೆ ಮಾಡುತ್ತಿದೆ ಎಂದು ಅಮೇರಿಕಾ ಆರೋಪಿಸಿದೆ.

ಜರ್ಮನಿಯಲ್ಲಿ ನಡೆದ ಭದ್ರತಾ ಸಮ್ಮೇಳನದ ಪಾರ್ಶ್ವದಲ್ಲಿ ಚೀನಾ ರಾಜತಾಂತ್ರಿಕ ಅಧಿಕಾರಿ ವಾಂಗ್ ಯೀ ಅವರನ್ನು ಭೇಟಿ ಮಾಡಿರುವ ಅಮೇರಿಕಾ ಸಚಿವ ಆಂಟೋನಿ ಬ್ಲಿಂಕೆನ್, ಚೀನಾ ಅಧಿಕಾರಿಯೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. 

ದ್ವಿಪಕ್ಷಿಯ ಮಾತುಕತೆ ವೇಳೆ ಅಮೇರಿಕಾ ಸಾರ್ವಭೌಮತ್ವ ಉಲ್ಲಂಘನೆ ಬಗ್ಗೆ ಮಾತನಾಡಿದ್ದು, ಇಂತಹ ಘಟನೆಗಳು ಮರುಕಳಿಸಬಾರದು ಎಂದು ಹೇಳಿದ್ದಾರೆ.

ಚೀನಾದ ಸ್ಪೈ ಬಲೂನ್ ಗಳನ್ನು ಅಮೇರಿಕಾ ಇತ್ತೀಚೆಗೆ ಹೊಡೆದುರುಳಿಸಿತ್ತು. ಈ ಬಳಿಕ ಚೀನಾ-ಅಮೇರಿಕಾ ಸಂಬಂಧಗಳು ಹದಗೆಟ್ಟಿದೆ. 

ಇದೇ ವೇಳೆ ಬ್ಲಿಂಕೆನ್ ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆಯೂ ಪ್ರಸ್ತಾಪಿಸಿದ್ದು,  ಒಂದು ವೇಳೆ ಚೀನಾ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾವನ್ನು ಬೆಂಬಲಿಸಿದ್ದೇ ಆದಲ್ಲಿ ಅದು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ. ಇನ್ನು ಬ್ಲಿಂಕೆನ್ ಉತ್ತರಕೊರಿಯಾದಿಂದ ನಡೆದಿರುವ ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆಯನ್ನೂ ಖಂಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com