ಹೆಣ್ಣುಮಕ್ಕಳ ಶಿಕ್ಷಣವನ್ನು ಸ್ಥಗಿತಗೊಳಿಸುವ ಉದ್ದೇಶದಿಂದ ಇರಾನ್‌ನಲ್ಲಿ ವಿದ್ಯಾರ್ಥಿನಿಯರಿಗೆ ವಿಷಪ್ರಾಶನ!

ಬಾಲಕಿಯರ ಶಿಕ್ಷಣವನ್ನು ಸ್ಥಗಿತಗೊಳಿಸುವ ಉದ್ದೇಶದಿಂದ 'ಕೆಲವರು' ಪವಿತ್ರ ನಗರವಾದ ಕೋಮ್‌ನಲ್ಲಿ ಶಾಲಾ ಬಾಲಕಿಯರಿಗೆ ವಿಷವುಣಿಸಲಾಗುತ್ತಿದೆ ಎಂದು ಇರಾನ್ ಉಪ ಮಂತ್ರಿಯೊಬ್ಬರು ಭಾನುವಾರ ಹೇಳಿದ್ದಾರೆ ಎಂದು ರಾಜ್ಯ ಮಾಧ್ಯಮ ವರದಿ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಟೆಹ್ರಾನ್: ಬಾಲಕಿಯರ ಶಿಕ್ಷಣವನ್ನು ಸ್ಥಗಿತಗೊಳಿಸುವ ಉದ್ದೇಶದಿಂದ 'ಕೆಲವರು' ಪವಿತ್ರ ನಗರವಾದ ಕೋಮ್‌ನಲ್ಲಿ ಶಾಲಾ ಬಾಲಕಿಯರಿಗೆ ವಿಷವುಣಿಸಲಾಗುತ್ತಿದೆ ಎಂದು ಇರಾನ್ ಉಪ ಮಂತ್ರಿಯೊಬ್ಬರು ಭಾನುವಾರ ಹೇಳಿದ್ದಾರೆ ಎಂದು ರಾಜ್ಯ ಮಾಧ್ಯಮ ವರದಿ ಮಾಡಿದೆ.

ನವೆಂಬರ್ ಅಂತ್ಯದಿಂದ ಟೆಹ್ರಾನ್‌ನ ದಕ್ಷಿಣದ ಕೋಮ್‌ನಲ್ಲಿ ಶಾಲಾಮಕ್ಕಳಲ್ಲಿ ನೂರಾರು ಉಸಿರಾಟದ ಸೋಂಕು ಪ್ರಕರಣಗಳು ವರದಿಯಾಗಿವೆ. ಇವರಿಗೆ ಸಣ್ಣ ಪ್ರಮಾಣದಲ್ಲಿ ವಿಷಪ್ರಾಶನ ಮಾಡಿಸಲಾಗಿದೆ. ಈ ಪೈಕಿ ಕೆಲವರಿಗೆ ಆಸ್ಪತ್ರೆಯ ಚಿಕಿತ್ಸೆಯ ಅಗತ್ಯವಿದೆ.

ಭಾನುವಾರ ಉಪ ಆರೋಗ್ಯ ಸಚಿವ ಯುನೆಸ್ ಪನಾಹಿ, ಉದ್ದೇಶಪೂರ್ವಕವಾಗಿಯೇ ವಿಷವನ್ನು ನೀಡಲಾಗಿದೆ ಎಂದು ದೃಢಪಡಿಸಿದರು.

ಕೋಮ್ ಶಾಲೆಗಳಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ವಿಷವಿಕ್ಕಿದ ನಂತರ, ಕೆಲವು ಜನರು ಎಲ್ಲಾ ಶಾಲೆಗಳನ್ನು, ವಿಶೇಷವಾಗಿ ಬಾಲಕಿಯರ ಶಾಲೆಗಳನ್ನು ಮುಚ್ಚಬೇಕೆಂದು ಬಯಸಿದ್ದಾರೆ ಎಂದು ಕಂಡುಬಂದಿದೆ ಎಂದು ಐಆರ್‌ಎನ್ಎ ರಾಜ್ಯ ಸುದ್ದಿ ಸಂಸ್ಥೆ ಪನಾಹಿ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ.

ಫೆಬ್ರುವರಿ 14 ರಂದು, ಅನಾರೋಗ್ಯದಿಂದ ಬಳಲುತ್ತಿದ್ದ ವಿದ್ಯಾರ್ಥಿಗಳ ಪೋಷಕರು ನಗರದ ಗವರ್ನರೇಟ್ ಹೊರಗೆ ಜಮಾಯಿಸಿ ಅಧಿಕಾರಿಗಳಿಂದ 'ವಿವರಣೆಯನ್ನು' ಕೇಳಿದ್ದಾರೆ ಎಂದು ಐಆರ್‌ಎನ್ಎ ವರದಿ ಮಾಡಿದೆ.

ಮರುದಿನ ಸರ್ಕಾರದ ವಕ್ತಾರ ಅಲಿ ಬಹದೋರಿ ಜಹ್ರೋಮಿ, ಗುಪ್ತಚರ ಮತ್ತು ಶಿಕ್ಷಣ ಸಚಿವಾಲಯಗಳು ವಿಷಕಾರಕ ಅಂಶಗಳಿಗೆ ಕಾರಣವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿವೆ ಎಂದು ಹೇಳಿದರು.

ಕಳೆದ ವಾರ, ಪ್ರಾಸಿಕ್ಯೂಟರ್ ಜನರಲ್ ಮೊಹಮ್ಮದ್ ಜಾಫರ್ ಮೊಂಟಜೆರಿ ಈ ಘಟನೆಗಳ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದರು.

ದೇಶದಲ್ಲಿ ಜಾರಿಯಲ್ಲಿರುವ ಮಹಿಳೆಯರಿಗಾಗಿ ಕಟ್ಟುನಿಟ್ಟಾದ ಡ್ರೆಸ್ ಕೋಡ್ ನಿಯಮವನ್ನು ಉಲ್ಲಂಘಿಸಿದ ಆರೋಪದ ಮೇಲೆ 22 ವರ್ಷದ ಇರಾನಿನ ಕುರ್ದ್ ಮಹ್ಸಾ ಅಮಿನಿ ಕಸ್ಟಡಿಯಲ್ಲಿಯೇ ಸಾವಿಗೀಡಾಗಿದ್ದರು. ಇದೇ ವಿಚಾರವಾಗಿ ಡಿಸೆಂಬರ್ 16 ರಿಂದ ಇರಾನ್‌ ಪ್ರತಿಭಟನೆಗಳಿಂದ ತತ್ತರಿಸಿ ಹೋಗಿದೆ. ಇದೀಗ ಹೊಸ ವಿಚಾರ ಅಲ್ಲಿ ಆತಂಕಕ್ಕೆ ಕಾರಣವಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com