ಇಸ್ಲಾಮಾಬಾದ್: ಪಾಕಿಸ್ತಾನ ಸರ್ಕಾರ ತಾಲಿಬಾನ್ ಹೊಸ ಸವಾಲೆಸೆದಿದ್ದು, ಶೀಘ್ರದಲ್ಲೇ ಪಾಕ್ ನಲ್ಲಿ ಹೊಸ ಕ್ಯಾಬಿನೆಟ್‌ನೊಂದಿಗೆ ಸರ್ಕಾರ ರಚಿಸುವುದಾಗಿ ತೆಹ್ರೀಕ್-ಎ-ತಾಲಿಬಾನ್ (TTP) ಸಂಘಟನೆ ಘೋಷಣೆ ಮಾಡಿದೆ.
ಪಾಕಿಸ್ತಾನ ಸರ್ಕಾರ ತನ್ನ ರಾಷ್ಟ್ರದ ಮುಸ್ಲಿಮರಿಗೆ ಸರಿಯಾದ ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿರುವ ಟಿಟಿಪಿ ಸರ್ಕಾರ ಸಾರ್ವಭೌಮತ್ವವನ್ನು (Sovereignty) ಪ್ರಶ್ನಿಸುವಂತೆ ಮಾಡುತ್ತಿದೆ. ಹೀಗೆಯೇ ಮುಂದುವರಿದರೆ, ಟಿಟಿಪಿ ರಕ್ಷಣೆಯಿಂದ ಹಿಡಿದು ಶಿಕ್ಷಣದವರೆಗೆ ತನ್ನದೇ ಆದ ಸಚಿವ ಸಂಪುಟವನ್ನು ಘೋಷಿಸಿ ಸರ್ಕಾರ ರಚಿಸಿ ಆಡಳಿತ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಭಾರತ- ಪಾಕಿಸ್ತಾನ ಪರಮಾಣು ಸ್ಥಾವರಗಳ ಪಟ್ಟಿ ವಿನಿಮಯ
ಅಂತೆಯೇ ಟಿಟಿಪಿ ತನ್ನ ಸಡಿಲವಾದ ನಿಯಂತ್ರಣದಲ್ಲಿರುವ ಪ್ರದೇಶಗಳನ್ನು ಎರಡು ವಲಯಗಳಾಗಿ ವಿಂಗಡಿಸಿದ್ದು, ಪೇಶಾವರ್, ಮಲಕಾಂಡ್, ಮರ್ದಾನ್, ಮತ್ತು ಗಿಲ್ಗಿಟ್-ಬಲೂಚಿಸ್ತಾವನ್ನು ಉತ್ತರ ಮತ್ತು ಡೇರಾ, ಇಸ್ಮಾಯಿಲ್ ಖಾನ್, ಬನ್ನು ಮತ್ತು ಕೊಹತ್ ಸೇರಿದಂತೆ ಕೆಲ ಪ್ರದೇಶಗಳನ್ನು ದಕ್ಷಿಣ ಪ್ರಾಂತ್ಯವನ್ನಾಗಿ ವಿಂಗಡಿಸಿದೆ.
ಪಾಕ್ ಸೇನಾ ನಿರ್ಮಾಣಗಳ ಮೇಲೆ ಟಿಟಿಪಿ 148 ಬಾರಿ ದಾಳಿ
ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ ತನ್ನ ಬೆಂಬಲಿಗರೊಂದಿಗೆ ಒಂದು ವರ್ಷದಲ್ಲಿ ಪಾಕಿಸ್ತಾನದ ರಕ್ಷಣಾ ಪಡೆಗಳ ಮೇಲೆ 148 ಬಾರಿ ದಾಳಿ ಮಾಡಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಯಶಸ್ಸು ಕಂಡು ಸರ್ಕಾರ ರಚಿಸಿದ ಬಳಿಕ ಪಾಕಿಸ್ತಾನದ ಕಡೆ ಕಣ್ಣಿಟ್ಟಿದೆ. 2021ರಲ್ಲಿ ಟಿಟಿಪಿ ಪೊಲೀಸರ ಮೇಲೆ ಸಾಕಷ್ಟು ಬಾರಿ ಭಯೋತ್ಪಾದಕ ದಾಳಿಗಳನ್ನು ನಡೆಸಿದೆ. ಬಲೂಚಿಸ್ತಾನ್ ಪ್ರದೇಶದ ಖೈಬರ್ ಪಖ್ತುಂಖ್ವಾ ಮತ್ತು ಕ್ವೆಟ್ಟಾದಲ್ಲಿನ ಸೇನಾ ಪ್ರಧಾನ ಕಚೇರಿಯ ಮೇಲೂ ದಾಳಿ ನಡೆಸಿ ಶಕ್ತಿ ಪ್ರದರ್ಶಿಸಿದೆ.
ಇದೀಗ ದೇಶದ ಬುಡಕಟ್ಟು ಪ್ರದೇಶಗಳಲ್ಲಿ ತಮ್ಮ ಭಯೋತ್ಪಾದಕ ಕಾರ್ಯಾಚರಣೆಯನ್ನು ವಿಸ್ತರಿಸಲು ಇತರ ಉಗ್ರಗಾಮಿ ಗುಂಪುಗಳು ಟಿಟಿಪಿಯೊಂದಿಗೆ ಕೈಜೋಡಿಸುತ್ತಿವೆ ಎಂದು ಖಾಮಾ ಪ್ರೆಸ್ ವರದಿ ಮೂಲಕ ಆರೋಪ ಮಾಡಿದೆ.
Advertisement