ಸರ್ಕಾರದ ಕೋವಿಡ್ ನೀತಿಗೆ ಟೀಕೆ; ವಿಮರ್ಶಕರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಿದ ಚೀನಾ

ಸರ್ಕಾರದ ಕೋವಿಡ್ ನೀತಿಗಳನ್ನು ಟೀಕಿಸಿದ 1,000ಕ್ಕೂ ಹೆಚ್ಚು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಚೀನಾ ತೆಗೆದುಹಾಕಿದೆ. ಈ ಪೈಕಿ ಕೆಲವು ಲಕ್ಷಾಂತರ ಮಂದಿ ಅನುಯಾಯಿಗಳನ್ನು ಹೊಂದಿದ್ದವು.
ಚೀನಾದ ಸಾಮಾಜಿಕ ಮಾಧ್ಯಮ ವೈಬೊ
ಚೀನಾದ ಸಾಮಾಜಿಕ ಮಾಧ್ಯಮ ವೈಬೊ
Updated on

ಲಂಡನ್: ಸರ್ಕಾರದ ಕೋವಿಡ್ ನೀತಿಗಳನ್ನು ಟೀಕಿಸಿದ 1,000ಕ್ಕೂ ಹೆಚ್ಚು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಚೀನಾ ತೆಗೆದುಹಾಕಿದೆ. ಈ ಪೈಕಿ ಕೆಲವು ಲಕ್ಷಾಂತರ ಮಂದಿ ಅನುಯಾಯಿಗಳನ್ನು ಹೊಂದಿದ್ದವು.

ಚೀನಾದ ಕೋವಿಡ್ ತಜ್ಞರ ವಿರುದ್ಧ ವೈಯಕ್ತಿಕ ದಾಳಿ ಎಂದು ವಿವರಿಸಿ ಖಾತೆಗಳನ್ನು ಅಮಾನತುಗೊಳಿಸಲಾಗಿದೆ ಅಥವಾ ನಿಷೇಧಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ವೈಬೊ ಹೇಳಿರುವುದಾಗಿ ಬಿಬಿಸಿ ವರದಿ ಮಾಡಿದೆ.

ಡಿಸೆಂಬರ್‌ನಲ್ಲಿ ಚೀನಾ ತನ್ನ ಕಟ್ಟುನಿಟ್ಟಾದ ಶೂನ್ಯ ಕೋವಿಡ್ ನೀತಿಯನ್ನು ರದ್ದುಗೊಳಿಸಿತು. ಬಳಿಕ ಸೋಂಕು ಪ್ರಕರಣಗಳು ಮತ್ತು ಸಾವುಗಳು ತ್ವರಿತ ಉಲ್ಬಣವನ್ನು ಕಂಡಿದೆ.

ಆನ್‌ಲೈನ್ ಟೀಕೆಗಳು ಇತ್ತೀಚಿನವರೆಗೂ ಲಾಕ್‌ಡೌನ್‌ಗಳು ಸೇರಿದಂತೆ ಜನರು ವಾರಗಳವರೆಗೆ ಪ್ರತ್ಯೇಕವಾಗಿ ಮನೆಯಲ್ಲಿಯೇ ಇರಬೇಕಾಗಿದ್ದವುಗಳು ಸೇರಿದಂತೆ ಕೋವಿಡ್ ನಿಯಮಗಳ ಕಟ್ಟುನಿಟ್ಟಾದ ಜಾರಿಯ ಮೇಲೆ ಕೇಂದ್ರೀಕೃತವಾಗಿದ್ದವು.

ಆದರೆ, ಇತ್ತೀಚಿನ ಪೋಸ್ಟ್‌ಗಳು ಕೇವಲ ವಾರಗಳ ಹಿಂದೆ ಸರ್ಕಾರದ ನೀತಿಗಳನ್ನು ಬೆಂಬಲಿಸುವ ಮೂಲಕ ಕೋವಿಡ್ ನಿರ್ಬಂಧಗಳನ್ನು ಕೈಬಿಡುವ ಹಠಾತ್ ನಿರ್ಧಾರವನ್ನು ಸಮರ್ಥಿಸಿಕೊಂಡ ತಜ್ಞರನ್ನು ಕೂಡ ಗುರಿಯಾಗಿರಿಸಿಕೊಂಡಿವೆ ಎಂದು ಬಿಬಿಸಿ ವರದಿ ಮಾಡಿದೆ.

ತಜ್ಞರು, ವಿದ್ವಾಂಸರು ಮತ್ತು ವೈದ್ಯಕೀಯ ಕಾರ್ಯಕರ್ತರ ಮೇಲಿನ ದಾಳಿ ಸೇರಿದಂತೆ ಸುಮಾರು 13,000 ಉಲ್ಲಂಘನೆಗಳನ್ನು ಗುರುತಿಸಿದೆ. 1,120 ಖಾತೆಗಳಿಗೆ ತಾತ್ಕಾಲಿಕ ಅಥವಾ ಶಾಶ್ವತ ನಿಷೇಧವನ್ನು ವಿಧಿಸಲಾಗಿದೆ ಎಂದು ವೈಬೊ ಹೇಳಿದೆ.

ಚೀನಾದಲ್ಲಿ ಹೇರಲಾಗಿದ್ದ ಕೋವಿಡ್ ವಿರುದ್ಧದ ನೀತಿಯ ವಿರುದ್ಧ ಐತಿಹಾಸಿಕ ಪ್ರತಿಭಟನೆಗಳ ನಂತರ ದೇಶದಲ್ಲಿ ಶೂನ್ಯ ಕೋವಿಡ್‌ ನೀತಿಯನ್ನು ಸಡಿಲಗೊಳಿಸಲಾಗಿತ್ತು. ಅದಾದ ಬಳಿಕ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏಕಾಏಕಿ ಉಲ್ಬಣ ಮತ್ತು ಸಾವಿನ ಸಂಖ್ಯೆಯು ಏರಿಕೆಯಾಗಿರುವ ವರದಿಯಾಗಿತ್ತು.

ಆದರೆ, ಚೀನಾ ತನ್ನ ದೈನಂದಿನ ಪ್ರಕರಣಗಳ ಮಾಹಿತಿಯನ್ನು ಪ್ರಕಟಿಸುವುದನ್ನು ನಿಲ್ಲಿಸಿದೆ ಮತ್ತು ತನ್ನದೇ ಆದ ಕಟ್ಟುನಿಟ್ಟಾದ ಮಾನದಂಡಗಳನ್ನು ಬಳಸಿಕೊಂಡು ಡಿಸೆಂಬರ್‌ನಿಂದ ಕೋವಿಡ್‌ನಿಂದ ಆದ ಕೇವಲ 22 ಸಾವುಗಳನ್ನು ಘೋಷಿಸಿದೆ.

ಭಾನುವಾರದಿಂದ, ಚೀನಾ ವಿದೇಶದಿಂದ ಬರುವ ಪ್ರಯಾಣಿಕರ ಕಡ್ಡಾಯ ಕ್ವಾರಂಟೈನ್‌ ಅಗತ್ಯವನ್ನು ಕೈಬಿಡಲಿದೆ. ಅಂದರೆ ಅನೇಕ ಚೀನೀಯರು ಕೂಡ ಸುಮಾರು ಮೂರು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ವಿದೇಶಕ್ಕೆ ಪ್ರಯಾಣಿಸಲು ಸಾಧ್ಯವಾಗುತ್ತದೆ ಎಂದು ಬಿಬಿಸಿ ವರದಿ ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com