ಪಾಕಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿ; 10 ವರ್ಷದ ಬಾಲಕ ಸಾವು, ಇಬ್ಬರು ಸೈನಿಕರು ಹುತಾತ್ಮ

ಬುಧವಾರ ವಾಯುವ್ಯ ಪಾಕಿಸ್ತಾನದ ಭದ್ರತಾ ಚೆಕ್‌ಪಾಯಿಂಟ್ ಅನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದು, ಕನಿಷ್ಠ ಇಬ್ಬರು ಸೈನಿಕರು ಮತ್ತು 10 ವರ್ಷದ ಬಾಲಕ ಸಾವಿಗೀಡಾಗಿದ್ದಾರೆ. ಘಟನೆಯಲ್ಲಿ ಇತರ 14 ನಾಗರಿಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಪೇಶಾವರ: ಬುಧವಾರ ವಾಯುವ್ಯ ಪಾಕಿಸ್ತಾನದ ಭದ್ರತಾ ಚೆಕ್‌ಪಾಯಿಂಟ್ ಅನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದು, ಕನಿಷ್ಠ ಇಬ್ಬರು ಸೈನಿಕರು ಮತ್ತು 10 ವರ್ಷದ ಬಾಲಕ ಸಾವಿಗೀಡಾಗಿದ್ದಾರೆ. ಘಟನೆಯಲ್ಲಿ ಇತರ 14 ನಾಗರಿಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಫ್ಘಾನಿಸ್ತಾನದ ಗಡಿಯಲ್ಲಿರುವ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಮಿರಾನ್ ಶಾ ಎಂಬ ಪಟ್ಟಣದಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಈ ಪ್ರದೇಶವು ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ ಎಂದೂ ಕರೆಯಲ್ಪಡುವ ಉಗ್ರಗಾಮಿ ಪಾಕಿಸ್ತಾನಿ ತಾಲಿಬಾನ್ ಗುಂಪಿನ ಹಿಂದಿನ ಭದ್ರಕೋಟೆಯಾಗಿದೆ.

ದಾಳಿಯಲ್ಲಿ ಕನಿಷ್ಠ 14 ನಾಗರಿಕರು ಮತ್ತು ಕೆಲವು ಸೈನಿಕರು ಗಾಯಗೊಂಡಿದ್ದಾರೆ. ಬಾಂಬ್ ದಾಳಿ ನಡೆಸಿದವರಿಗಾಗಿ ಭದ್ರತಾ ಪಡೆಗಳು ಶೋಧ ನಡೆಸುತ್ತಿವೆ. ದಾಳಿಯಲ್ಲಿ ಕನಿಷ್ಠ ಇಬ್ಬರು ಸೈನಿಕರು ಹುತಾತ್ಮರಾಗಿದ್ದರೆ, 10 ವರ್ಷದ ಮೊಹಮ್ಮದ್ ಖಾಸಿಮ್ ಸಾವಿಗೀಡಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿ ರಶೀದ್ ಖಾನ್ ತಿಳಿಸಿದ್ದಾರೆ.

ಸೇನೆಯಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ತಕ್ಷಣಕ್ಕೆ ದಾಳಿಯ ಹೊಣೆಯನ್ನು ಯಾರೊಬ್ಬರೂ ಹೊತ್ತುಕೊಂಡಿಲ್ಲ. ಆದರೆ, ಕಾನೂನುಬಾಹಿರ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನದ ಮೇಲೆ ಅನುಮಾನಗಳು ದಟ್ಟವಾಗಿವೆ.

ಪ್ರತ್ಯೇಕ ಗುಂಪಾಗಿದ್ದರೂ, ಇದು ಎರಡು ದಶಕಗಳ ಯುದ್ಧದ ನಂತರ ದೇಶದಿಂದ ಅಮೆರಿಕ ಮತ್ತು NATO ಪಡೆಗಳನ್ನು ಹಿಂತೆಗೆದುಕೊಂಡ ನಂತರ ಆಗಸ್ಟ್, 2021 ರಲ್ಲಿ ಅಫ್ಘಾನಿಸ್ತಾನವನ್ನು  ವಶಪಡಿಸಿಕೊಂಡ ತಾಲಿಬಾನಿನ ನಿಕಟ ಮಿತ್ರನಾಗಿ ಉಳಿದಿದೆ.

ಅಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡಿರುವುದು ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನಕ್ಕೆ ಧೈರ್ಯ ತುಂಬಿದೆ. ಇದು ಇತ್ತೀಚಿನ ತಿಂಗಳುಗಳಲ್ಲಿ ದಾಳಿಗಳನ್ನು ಹೆಚ್ಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com