ಆಸ್ಟ್ರೇಲಿಯಾದಲ್ಲಿ ಖಲಿಸ್ತಾನ್ ಬೆಂಬಲಿಗರ ಗೂಂಡಾಗಿರಿ: ಭಾರತೀಯ ವಿದ್ಯಾರ್ಥಿ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆ!

ಆಸ್ಟ್ರೇಲಿಯಾದಲ್ಲಿ ಖಲಿಸ್ತಾನ್ ಬೆಂಬಲಿಗರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಭಾರತೀಯ ವಿದ್ಯಾರ್ಥಿಗಳ ಮೇಲೆ ಕಬ್ಬಿಣದ ರಾಡ್ ಗಳಿಂದ ಥಳಿಸಿದ್ದಾರೆ. 
ಖಲಿಸ್ಥಾನಿ ಬೆಂಬಲಿಗರಿಂದ ಹಲ್ಲೆ
ಖಲಿಸ್ಥಾನಿ ಬೆಂಬಲಿಗರಿಂದ ಹಲ್ಲೆ

ಆಸ್ಟ್ರೇಲಿಯಾದಲ್ಲಿ ಖಲಿಸ್ತಾನ್ ಬೆಂಬಲಿಗರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಭಾರತೀಯ ವಿದ್ಯಾರ್ಥಿಗಳ ಮೇಲೆ ಕಬ್ಬಿಣದ ರಾಡ್ ಗಳಿಂದ ಥಳಿಸಿದ್ದಾರೆ. 

ನಾಲ್ವರು ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿ ಕಬ್ಬಿಣದ ರಾಡ್‌ಗಳಿಂದ ಹೊಡೆದಿದ್ದಾರೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ವಿದ್ಯಾರ್ಥಿಯನ್ನು ಥಳಿಸಿದ ನಂತರ ದಾಳಿಕೋರರು ಖಲಿಸ್ತಾನ್ ವಿಚಾರವನ್ನು ವಿರೋಧಿಸಿದರೆ ಇದೇ ಪಾಠ ಕಲಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಖಲಿಸ್ತಾನ್ ಬೆಂಬಲಿಗರ ಅಟ್ಟಹಾಸ ಹೆಚ್ಚಾಗಿದ್ದು, ಇದೀಗ ನಡುರಸ್ತೆಯಲ್ಲೇ ಭಾರತೀಯರನ್ನೇ ಟಾರ್ಗೆಟ್ ಮಾಡಲು ಆರಂಭಿಸಿದ್ದಾರೆ. ವಿಧ್ವಂಸಕ ಕೃತ್ಯವೆಂದರೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ 23 ವರ್ಷದ ಭಾರತೀಯ ವಿದ್ಯಾರ್ಥಿಗೆ ಕೆಲವು ಬೆಂಬಲಿಗರು ಥಳಿಸಿದ್ದಾರೆ. ವಿದ್ಯಾರ್ಥಿಯ ತಲೆ, ಕಾಲು ಮತ್ತು ಕೈಗೆ ಗಂಭೀರ ಗಾಯಗಳಾಗಿವೆ.

ವಿದ್ಯಾರ್ಥಿಯು ಕೆಲಸಕ್ಕೆ ಹೋಗುತ್ತಿದ್ದಾಗ ಸಿಡ್ನಿಯ ಪಶ್ಚಿಮ ಉಪನಗರ ಮೇರಿಲ್ಯಾಂಡ್ಸ್‌ನಲ್ಲಿ "ಖಲಿಸ್ತಾನ್ ಜಿಂದಾಬಾದ್" ಎಂದು ಘೋಷಣೆ ಕೂಗುತ್ತಿದ್ದ ದುಷ್ಕರ್ಮಿಗಳು ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆಸ್ಟ್ರೇಲಿಯಾ ಟುಡೇ ನ್ಯೂಸ್ ಪೋರ್ಟಲ್ ವರದಿ ಮಾಡಿದೆ. 

ಸಂತ್ರಸ್ತ ವಿದ್ಯಾರ್ಥಿ ಅರೆಕಾಲಿಕ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಕಾರು ಹತ್ತಿದ ಕೂಡಲೇ ಹೊರಗೆ ಎಳೆದೊಯ್ದು ಕಬ್ಬಿಣದ ಸರಳುಗಳಿಂದ ಥಳಿಸಿದ್ದಾರೆ ಎಂದು ಹೇಳಿದರು. ಇಬ್ಬರು ದಾಳಿಕೋರರು ದಾಳಿಯ ವಿಡಿಯೋ ರೆಕಾರ್ಡಿಂಗ್ ಕೂಡ ಮಾಡಿದ್ದಾರೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಅವರು "ಖಲಿಸ್ತಾನ್ ಜಿಂದಾಬಾದ್" ಎಂಬ ಘೋಷಣೆಯನ್ನು ಪದೇ ಪದೇ ಹೇಳುತ್ತಿದ್ದರು.

ಹಲ್ಲೆ ನಂತರ ಖಲಿಸ್ತಾನ್ ವಿಷಯವನ್ನು ವಿರೋಧಿಸಿದರೆ ಇದೇ ರೀತಿಯ ಪಾಠವನ್ನು ಕಲಿಸುತ್ತೇವೆ ಎಂದು ದಾಳಿಕೋರರು ವಿದ್ಯಾರ್ಥಿಗೆ ಬೆದರಿಕೆ ಹಾಕಿದ್ದಾರೆ. ಘಟನೆಯ ಬಗ್ಗೆ ನ್ಯೂ ಸೌತ್ ವೇಲ್ಸ್ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಭಾರತೀಯ ವಿದ್ಯಾರ್ಥಿಯನ್ನು ವೆಸ್ಟ್‌ಮೀಡ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವರದಿ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com