ಆದಿಪುರುಷ್ ವಿವಾದ: ನೇಪಾಳ ರಾಜಧಾನಿಯಲ್ಲಿ ಹಿಂದಿ ಚಲನಚಿತ್ರಗಳ ಪ್ರದರ್ಶನಕ್ಕೆ ನಿಷೇಧ

ಆದಿಪುರುಷ್ ಚಿತ್ರ ವಿವಾದ ಮುಂದುವರೆದಿರುವಂತೆಯೇ ಅತ್ತ ನೇಪಾಳದಲ್ಲಿ ಹಿಂದಿ ಚಿತ್ರಗಳಿಗೆ ನಿಷೇಧ ಹೇರಲಾಗಿದೆ.
ಆದಿಪುರುಷ್ ಚಿತ್ರದ ಪೋಸ್ಟರ್
ಆದಿಪುರುಷ್ ಚಿತ್ರದ ಪೋಸ್ಟರ್
Updated on

ಕಠ್ಮಂಡು: ಆದಿಪುರುಷ್ ಚಿತ್ರ ವಿವಾದ ಮುಂದುವರೆದಿರುವಂತೆಯೇ ಅತ್ತ ನೇಪಾಳದಲ್ಲಿ ಹಿಂದಿ ಚಿತ್ರಗಳಿಗೆ ನಿಷೇಧ ಹೇರಲಾಗಿದೆ.

ಪ್ರಭಾಸ್ ನಟನೆಯ ಅದಿ ಪುರುಷ್ ಚಿತ್ರದ ವಿರುದ್ಧ ಅಸಮಾಧಾನಗೊಂಡಿದ್ದ ನೇಪಾಳದಲ್ಲಿ ಇದೀಗ ಬಾಲಿವುಡ್ ಚಿತ್ರಗಳನ್ನೇ ನಿಷೇಧಿಸಲಾಗಿದೆ. ಅದಿ ಪುರುಷ್ ಚಿತ್ರದಲ್ಲಿ ಸೀತಾಮಾತೆಯನ್ನು "ಭಾರತದ ಮಗಳು" ಎಂದು ಉಲ್ಲೇಖಿಸಿರುವು ನೇಪಾಳದ ಆಕ್ರೋಶಕ್ಕೆ ಕಾರಣವಾಗಿದೆ. ಕಾರಣ ಸೀತೆ ನೇಪಾಳ ಜನಕಪುರಿಯಲ್ಲಿ ಜನಿಸಿದವಳಾಗಿದ್ದು, ಜನಕಪುರಿ ನೇಪಾಳದ ಪ್ರದೇಶವಾಗಿದೆ. ಹೀಗಾಗಿ ಸೀತೆ ನೇಪಾಳದ ಮಗಳಾಗಿದ್ದು ಇದೇ ಕಾರಣಕ್ಕೆ ಬಾಲಿವುಡ್ ವಿರುದ್ಧ ನೇಪಾಳ ಕೋಪಗೊಂಡಿದೆ.

ಇದೇ ವಿಚಾರವಾಗಿ ಮಾತನಾಡಿರುವ ಕಠ್ಮಂಡು ಮೇಯರ್ ಬಾಲೇಂದ್ರ ಶಾ, ಆದಿ ಪುರುಷ್ ಚಿತ್ರದಲ್ಲಿ ವಿವಾದಿತ ಸಂಭಾಷಣೆಯನ್ನು ತೆಗೆಯುವವರೆಗೂ ಕಠ್ಮಂಡು ಮೆಟ್ರೋಪಾಲಿಟನ್ ಸಿಟಿಯಲ್ಲಿ ಯಾವುದೇ ಹಿಂದಿ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ.. ಜಾನಕಿ, ಆಗ್ನೇಯ ನೇಪಾಳದ ಜನಕಪುರದಲ್ಲಿ ಜನಿಸಿದಳು.. ಹೀಗಾಗಿ ಆಕೆ ನೇಪಾಳದ ಮಗಳು ಎಂದು ಹೇಳಿದ್ದಾರೆ.

ಪೋಖರಾ ಮಹಾನಗರದ ಮೇಯರ್ ಧನರಾಜ್ ಆಚಾರ್ಯ ಅವರು ಇದೇ ರೀತಿಯ ಹೇಳಿಕೆ ನೀಡಿದ್ದು, ಸೋಮವಾರದಿಂದ "ಆದಿಪುರುಷ" ಪ್ರದರ್ಶನವನ್ನು ನಿಷೇಧಿಸಲಾಗಿದೆ. ಯಾವುದೇ ಚಿತ್ರ ಮಂದಿರದಲ್ಲಿ ಡೈಲಾಗ್ ಅನ್ನು ತೆಗೆದುಹಾಕದೆ ಪ್ರದರ್ಶಿಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಹೀಗಾಗಿ "ಆದಿಪುರುಷ" ಸೇರಿದಂತೆ ಎಲ್ಲಾ ಹಿಂದಿ ಚಲನಚಿತ್ರಗಳನ್ನು ನಿಷೇಧಿಸಲಾಗಿದೆ. ನೇಪಾಳ ರಾಜಧಾನಿ ಕಠ್ಮಂಡುವಿನ 17 ಹಾಲ್‌ಗಳಲ್ಲಿ ಯಾವುದೇ ಹಿಂದಿ ಚಿತ್ರ ಪ್ರದರ್ಶನವಾಗದಂತೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಇದರ ಹೊರತಾಗಿಯೂ ನೇಪಾಳದ ಹಲವು ಚಿತ್ರಮಂದಿರಗಳಲ್ಲಿ ಆದಿ ಪುರುಷ್ ಚಿತ್ರ ಪ್ರದರ್ಶನ ಮುಂದುವರೆದಿದೆ ಎಂದು ಹೇಳಲಾಗಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com