ಅಮೇರಿಕಾದಲ್ಲಿನ ದ್ವೇಷ ಅಪರಾಧಗಳು, ಮಾನವ ಹಕ್ಕುಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಭಾರತ!

ಅಮೇರಿಕಾದಲ್ಲಿ ನಡೆಯುತ್ತಿರುವ ದ್ವೇಷ ಪೂರಿತ ಅಪರಾಧಗಳು, ಮಾನವ ಹಕ್ಕುಗಳ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ ಎಂದು ಬೈಡನ್ ಆಡಳಿತದ ಪ್ರಮುಖ ಅಧಿಕಾರಿಗಳು ತಿಳಿಸಿದ್ದಾರೆ.
ಯುಎಸ್
ಯುಎಸ್
Updated on

ವಾಷಿಂಗ್ ಟನ್: ಅಮೇರಿಕಾದಲ್ಲಿ ನಡೆಯುತ್ತಿರುವ ದ್ವೇಷ ಪೂರಿತ ಅಪರಾಧಗಳು, ಮಾನವ ಹಕ್ಕುಗಳ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ ಎಂದು ಬೈಡನ್ ಆಡಳಿತದ ಪ್ರಮುಖ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದೊಂದಿಗೆ ಅಮೇರಿಕಾದ ದ್ವಿಪಕ್ಷೀಯ ಸಂಬಂಧ ಗಾಢವಾಗುತ್ತಿರುವ ಹಿನ್ನೆಲೆಯಲ್ಲಿ ಭಾರತ ಎತ್ತಿರುವ ಅಂಶಗಳು ಅಮೇರಿಕಾದ ರಾಷ್ಟ್ರೀಯ ಭದ್ರತೆಗೆ ಪ್ರಮುಖವಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಉದಯೋನ್ಮುಖ ಭಾರತದೊಂದಿಗೆ ನಾವು ವ್ಯವಹರಿಸುತ್ತಿದ್ದು, ಅಮೇರಿಕಾದ ರಾಷ್ಟ್ರೀಯ ಭದ್ರತೆ ಹಾಗೂ ಆರ್ಥಿಕ ಸಮೃದ್ಧಿಗಳಿಗೆ ಇದು ಪ್ರಮುಖವಾದ ಅಂಶವಾಗಿದೆ. ಇದೇ ವೇಳೆ ಓರ್ವ ನೈಜ ಪಾಲುದಾರ, ಸ್ನೇಹಿತನಾಗಿರುವ ಭಾರತದೊಂದಿಗೆ ನಾವು ವ್ಯತ್ಯಾಸಗಳಿರುವ ಕ್ಷೇತ್ರಗಳ ಬಗ್ಗೆ ಪ್ರಾಮಾಣಿಕವಾಗಿ ಮತ್ತು ರಚನಾತ್ಮಕವಾಗಿ ಮಾತನಾಡುತ್ತೇವೆ, ಭಾರತ ಖಂಡಿತವಾಗಿಯೂ ನಮ್ಮೊಂದಿಗೆ ಅದನ್ನೇ ಮಾಡುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಭಾರತ ಅಮೇರಿಕಾದಲ್ಲಿನ ಮಾನವ ಹಕ್ಕುಗಳು ಹಾಗೂ ಧಾರ್ಮಿಕ ಪ್ರೇರಿತ ದ್ವೇಷದ ಅಪರಾಧಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ನಾವು ಸಹ ಆಗಗ್ಗೆ ಭಾರತದಲ್ಲಿನ ಮಾನವ ಹಕ್ಕುಗಳ ವಿಚಾರವಾಗಿ ವಿಷಯ ಪ್ರಸ್ತಾಪಿಸಿದ್ದೇವೆ. ಇದು ಪರಸ್ಪರ ಗೌರವದ ವಾತಾವರಣದಲ್ಲೇ ನಡೆಯುತ್ತಿದೆ ಎಂದು ಅಮೇರಿಕಾ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಭಾರತವು ಉತ್ಸಾಹಭರಿತ ನಾಗರಿಕ ಸಮಾಜವಾಗಿದ್ದು, ಮುಕ್ತ ಪತ್ರಿಕಾ ಮತ್ತು ಸ್ವತಂತ್ರ ನ್ಯಾಯಾಂಗದೊಂದಿಗೆ ನಿಜವಾದ ಪ್ರಜಾಪ್ರಭುತ್ವವಾಗಿದೆ ಎಂದು ಅಮೆರಿಕಾ ಅಧಿಕಾರಿಗಳು ಭಾರತವನ್ನು ಹಾಡಿ ಹೊಗಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com