ರಷ್ಯಾ ಬಂಡಾಯ ಶಮನ: ಮಾಸ್ಕೋದತ್ತ ತೆರಳದಂತೆ ತನ್ನ ಸೈನಿಕರಿಗೆ ಆದೇಶಿಸಿದ ವ್ಯಾಗ್ನರ್ ಮುಖ್ಯಸ್ಥ

ರಷ್ಯಾದಲ್ಲಿ ರಕ್ತಪಾತ ತಪ್ಪಿಸಲು ಮಾಸ್ಕೋದತ್ತ ತೆರಳದಂತೆ ಮತ್ತು ಉಕ್ರೇನ್‌ನಲ್ಲಿರುವ ಬೇಸ್ ಕ್ಯಾಂಪ್ ಗೆ ವಾಪಸ್ ಆಗುವಂತೆ ತನ್ನ ಸೈನಿಕರಿಗೆ ಆದೇಶ ನೀಡಿರುವುದಾಗಿ ವ್ಯಾಗ್ನರ್ ಪಡೆಯ ಮುಖ್ಯಸ್ಥ ಶನಿವಾರ ಹೇಳಿದ್ದಾರೆ.
ವ್ಯಾಗ್ನರ್ ಸೇನೆ
ವ್ಯಾಗ್ನರ್ ಸೇನೆ

ಮಾಸ್ಕೋ: ರಷ್ಯಾದಲ್ಲಿ ರಕ್ತಪಾತ ತಪ್ಪಿಸಲು ಮಾಸ್ಕೋದತ್ತ ತೆರಳದಂತೆ ಮತ್ತು ಉಕ್ರೇನ್‌ನಲ್ಲಿರುವ ಬೇಸ್ ಕ್ಯಾಂಪ್ ಗೆ ವಾಪಸ್ ಆಗುವಂತೆ ತನ್ನ ಸೈನಿಕರಿಗೆ ಆದೇಶ ನೀಡಿರುವುದಾಗಿ ವ್ಯಾಗ್ನರ್ ಪಡೆಯ ಮುಖ್ಯಸ್ಥ ಶನಿವಾರ ಹೇಳಿದ್ದಾರೆ.

ಖಾಸಗಿ ಸೇನೆ ವಾಗ್ನರ್ ನ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ಅವರ ಈ ಹೇಳಿಕೆಯು ಹೆಚ್ಚುತ್ತಿರುವ ಬಂಡಾಯವನ್ನು ಶಮನಗೊಳಿಸುವ ಸೂಚನೆ ನೀಡಿದೆ. 

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧವೇ ತಿರುಗಿಬಿದ್ದಿರುವ ರಷ್ಯಾದ ಖಾಸಗಿ ಸೇನಾಪಡೆ ವ್ಯಾಗ್ನರ್ ಗ್ರೂಪ್ ಮುಖ್ಯಸ್ಥ ಪ್ರಿಗೊಜಿನ್, ಪುಟಿನ್ ಕಠಿಣ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.

ಪ್ರಿಗೊಜಿನ್ ಅವರು ಮಾಸ್ಕೋದಿಂದ ಕೇವಲ 200 ಕಿಲೋಮೀಟರ್(120 ಮೈಲುಗಳು) ದೂರದಲ್ಲಿರುವಾಗ, "ರಷ್ಯಾದಲ್ಲಿ ರಕ್ತಪಾತ" ತಪ್ಪಿಸಲು ತನ್ನ ಖಾಸಗಿ ಸೇನೆ ವಾಪಸ್ ಪಡೆಯಲು ನಿರ್ಧರಿಸಿದರು.

ಇದಕ್ಕು ಮುನ್ನ ದಕ್ಷಿಣ ರಷ್ಯಾದ ಸೇನಾ ಕೇಂದ್ರ ಕಚೇರಿಯನ್ನು ವಶಪಡಿಸಿಕೊಂಡಿರುವುದಾಗಿ ಹೇಳಿದ್ದ ವಾಗ್ನರ್, ತಮಗೆ ಸ್ಥಳೀಯರ ಬೆಂಬಲವೂ ಇದೆ ಎಂದು ತಿಳಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com