ಅಮೇರಿಕಾದ ಹೆಚ್-1 ಬಿ ವೀಸಾದಾರರಿಗೆ ಕೆನಡಾದಿಂದ ಹೊಸ ಉದ್ಯೋಗ ಪರವಾನಗಿ; ಭಾರತೀಯರಿಗೆ ಲಾಭ

ಅಮೇರಿಕಾದಲ್ಲಿರುವ ಹೆಚ್-1 ಬಿ ವೀಸಾದಾರರ ಪೈಕಿ 10 ಸಾವಿರ ಮಂದಿಗೆ ತನ್ನಲ್ಲಿ ಬಂದು ಉದ್ಯೋಗ ಮಾಡಲು ಅವಕಾಶವಾಗುವಂತೆ ಕೆನಡಾ ಸರ್ಕಾರ ಹೊಸ ಪರವಾನಗಿ ಘೋಷಿಸಿದೆ.
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಟೊರಂಟೊ: ಅಮೇರಿಕಾದಲ್ಲಿರುವ ಹೆಚ್-1 ಬಿ ವೀಸಾದಾರರ ಪೈಕಿ 10 ಸಾವಿರ ಮಂದಿಗೆ ತನ್ನಲ್ಲಿ ಬಂದು ಉದ್ಯೋಗ ಮಾಡಲು ಅವಕಾಶವಾಗುವಂತೆ ಕೆನಡಾ ಸರ್ಕಾರ ಹೊಸ ಪರವಾನಗಿ ಘೋಷಿಸಿದೆ. ಕೆನಡಾ ಸರ್ಕಾರದ ಈ ನಡೆಯಿಂದಾಗಿ ಭಾರತೀಯ ಮೂಲದ ಸಾವಿರಾರು ಟೆಕ್ ವೃತ್ತಿಪರರಿಗೆ ಲಾಭವಾಗಲಿದೆ.

ಹೊಸದಾಗಿ ಪರಿಚಯವಾಗುತ್ತಿರುವ ತಂತ್ರಜ್ಞಾನಗಳ ವೈವಿಧ್ಯದ ಜಾಗತಿಕ ನಾಯಕನಾಗಲು ಕೆನಡಾ ಗುರಿ ಹೊಂದಿದ್ದು, ಅಮೇರಿಕಾದ ಟೆಕ್ ದೈತ್ಯ ಸಂಸ್ಥೆಗಳಲ್ಲಿ ನೌಕರಿ ಕಳೆದುಕೊಂಡ ವೃತ್ತಿಪರರನ್ನು ತನ್ನತ್ತ ಸೆಳೆಯುವ ಸಲುವಾಗಿ ಕೆನಡಾ ಈ ರೀತಿಯ ನಿರ್ಧಾರಗಳನ್ನು ಪ್ರಕಟಿಸುತ್ತಿದೆ.

ಹೆಚ್-1 ಬಿ ವೀಸಾ ವಲಸೆಯೇತರ ವೀಸಾ ಆಗಿದ್ದು, ಈ ವೀಸಾ ಅಮೇರಿಕಾ ಸಂಸ್ಥೆಗಳಿಗೆ, ತಾಂತ್ರಿಕ ಪರಿಣತಿಯ ಅಗತ್ಯವಿರುವ ವಿಶೇಷ ಉದ್ಯೋಗಗಳಿಗೆ ವಿದೇಶಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಅನುವುಮಾಡಿಕೊಡುತ್ತದೆ. ಈ ವೀಸಾ ಆಧಾರದಲ್ಲೇ ಈ ರೀತಿಯ ಹುದ್ದೆಗಳಿಗೆ ಭಾರತ ಹಾಗೂ ಚೀನಾಗಳಿಂದ ಅಮೇರಿಕಾದ ಸಂಸ್ಥೆಗಳು ಸಾವಿರಾರು ಮಂದಿ ನೌಕರರನ್ನು ನೇಮಕಾತಿ ಮಾಡಿಕೊಳ್ಳುತ್ತವೆ.

ಇದನ್ನೂ ಓದಿ: ಅಮೆರಿಕ ಪ್ರವಾಸದಲ್ಲಿ ಪ್ರಧಾನಿ ಮೋದಿ: ಹೆಚ್-1ಬಿ ವೀಸಾ ನಿಯಮ ಸಡಿಲಗೊಳಿಸಲು ಅಮೆರಿಕ ಚಿಂತನೆ
 
ಕೆನಡಾ ಸರ್ಕಾರದ ಹೊಸ ಘೋಷಣೆಯಿಂದಾಗಿ ಅಮೇರಿಕಾದ ಹೆಚ್-1 ಬಿ ವೀಸಾದಾರರಿಗೆ ಕೆನಡಾಗೆ ಬಂದು ಕೆಲಸ ಮಾಡಲು ಅವಕಾಶವಾಗಲಿದ್ದು, ಅಧ್ಯಯನಕ್ಕೂ ನೆರವು ಸಿಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com