
ವಾಷಿಂಗ್ಟನ್ ಡಿಸಿ: ಕುಶಲ, ನುರಿತ ಉದ್ಯೋಗಿಗಳು ಕೆಲಸಕ್ಕೆಂದು ಅಮೆರಿಕಕ್ಕೆ ಹೋಗಲು ಅಥವಾ ಅಲ್ಲಿಯೇ ಉಳಿದುಕೊಳ್ಳಲು ಸಹಾಯವಾಗಲು ಜೊ ಬೈಡನ್ ಸರ್ಕಾರವು ಹೆಚ್-1ಬಿ ವೀಸಾ(H-1B visa) ನಿಯಮವನ್ನು ಸಡಿಲಗೊಳಿಸುತ್ತದೆ ಎಂದು ರಾಯ್ಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಅಮೆರಿಕ ಪ್ರವಾಸದ ನಡುವೆ ಈ ಬೆಳವಣಿಗೆ ನಡೆದಿದೆ. ಹೆಚ್-1ಬಿ ವೀಸಾದಡಿ ಕಡಿಮೆ ಸಂಖ್ಯೆಯ ಭಾರತೀಯರು ಮತ್ತು ಇತರ ವಿದೇಶಿ ಉದ್ಯೋಗಿಗಳು ಇತರ ರಾಷ್ಟ್ರಗಳಿಗೆ ಪ್ರಯಾಣಿಸುವ ಅಗತ್ಯವಿಲ್ಲದೇ ಯುಎಸ್‌ನಲ್ಲಿ ಆ ವೀಸಾಗಳನ್ನು ನವೀಕರಿಸಲು ಸಾಧ್ಯವಾಗುತ್ತದೆ ಎಂದು ಯುಎಸ್ ಸ್ಟೇಟ್ ಡಿಪಾರ್ಟ್‌ಮೆಂಟ್ ಪ್ರಕಟಿಸುವ ಸಾಧ್ಯತೆಯಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.
ಇಲ್ಲಿಯವರೆಗೆ ಅಮೆರಿಕದಲ್ಲಿರುವ ಹೆಚ್ಚಿನ ಶೇಕಡಾವಾರು H-1B ವೀಸಾ ಹೊಂದಿರುವವರು ಮತ್ತು ಅರ್ಜಿದಾರರು ಭಾರತದವರಾಗಿದ್ದಾರೆ. 2022 ರ ಆರ್ಥಿಕ ವರ್ಷದಲ್ಲಿ ಸುಮಾರು 4,42,000 H1-B ನೌಕರರಲ್ಲಿ ಭಾರತೀಯ ನಾಗರಿಕರು ಶೇಕಡಾ 73ರಷ್ಟು ಮಂದಿ ಇದ್ದಾರೆ.
Advertisement