ದ್ವಿಪಕ್ಷೀಯ ಸಂಬಂಧ ಹದಗೆಟ್ಟರೂ, ಎಸ್ ಸಿಒ ಸಭೆಯಲ್ಲಿ ಭಾಗಿಯಾಗಲು ಪಾಕ್ ರಕ್ಷಣಾ ಸಚಿವರಿಗೆ ಭಾರತ ಆಹ್ವಾನ

ಭಾರತ-ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿರುವುದರ ನಡುವೆ ಭಾರತ ಪಾಕಿಸ್ತಾನದ ರಕ್ಷಣಾ ಸಚಿವ ಖಾವಾಜ ಆಸೀಫ್ ಅವರನ್ನು ಶಾಂಘೈ ಸಹಕಾರ ಸಂಘಟನೆ ಸಭೆಯಲ್ಲಿ ಭಾಗಿಯಾಗಲು ಆಹ್ವಾನ ನೀಡಿದೆ
ಭಾರತ-ಪಾಕ್
ಭಾರತ-ಪಾಕ್

ನವದೆಹಲಿ: ಭಾರತ-ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿರುವುದರ ನಡುವೆ ಭಾರತ ಪಾಕಿಸ್ತಾನದ ರಕ್ಷಣಾ ಸಚಿವ ಖಾವಾಜ ಆಸೀಫ್ ಅವರನ್ನು ಶಾಂಘೈ ಸಹಕಾರ ಸಂಘಟನೆ ಸಭೆಯಲ್ಲಿ ಭಾಗಿಯಾಗಲು ಆಹ್ವಾನ ನೀಡಿದೆ ಎಂದು ಕೆಲವು ಮಾಧ್ಯಮಗಳು ವರದಿ ಪ್ರಕಟಿಸಿವೆ.
 
ಭಾರತ ಎಸ್ ಸಿಒದ ಅಧ್ಯಕ್ಷತೆಯನ್ನು ವಹಿಸಿದ್ದು, ಚೀನಾ, ಭಾರತ, ಕಜಕ್ ಸ್ಥಾನ, ಕಿರ್ಜಗಿಸ್ತಾನ, ರಷ್ಯಾ, ಪಾಕಿಸ್ತಾನ, ತಜಕಿಸ್ಥಾನ, ಉಜ್ಬೇಕಿಸ್ತಾನಗಳು ಸದಸ್ಯ ರಾಷ್ಟ್ರಗಳಾಗಿವೆ.
 
ಅಧ್ಯಕ್ಷತೆ ವಹಿಸಿರುವ ಭಾರತ ಸರಣಿ ಸಭೆಗಳನ್ನು ನಡೆಸಲಿದೆ. ದಿ ಎಕ್ಸ್ ಪ್ರೆಸ್ ಟ್ರಿಬ್ಯೂನ್ ಈ ಬಗ್ಗೆ ವರದಿ ಪ್ರಕಟಿಸಿದ್ದು, ರಾಜತಾಂತ್ರಿಕ ಮೂಲಗಳ ಪ್ರಕಾರ, ಭಾರತ ಸರ್ಕಾರ ಪಾಕ್ ವಿದೇಶಾಂಗ ಕಚೇರಿಯೊಂದಿಗೆ ಔಪಚಾರಿಕ ಆಹ್ವಾನವನ್ನು ಹಂಚಿಕೊಂದಿದೆ ಎಂದು ಹೇಳಿದೆ.
 
ಪಾಕ್ ಮಾಧ್ಯಮದ ವರದಿಯ ಬಗ್ಗೆ ಭಾರತ ಸರ್ಕಾರದಿಂದ ತಕ್ಷಣಕ್ಕೆ ಪ್ರತಿಕ್ರಿಯೆ ಲಭ್ಯವಾಗದೇ ಇರುವುದು ಗಮನಾರ್ಹ ಸಂಗತಿಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com