ಪೋರ್ನ್ ಸ್ಟಾರ್ ಗೆ ಹಣ: ನನ್ನ ಬಂಧಿಸುತ್ತಾರೆ ಎಂದು ಪ್ರತಿಭಟನೆಗೆ ಕರೆ ನೀಡಿದ ಡೊನಾಲ್ಡ್ ಟ್ರಂಪ್

ನೀಲಿ ಚಿತ್ರತಾರೆಗೆ ಹಣ ಸಂದಾಯ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಬಂಧನವಾಗಲಿದೆ ಎಂದು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪೋಸ್ಟ್ ಮಾಡಿದ್ದು, ತಮ್ಮ ಕಾರ್ಯಕರ್ತರಿಗೆ ಪ್ರತಿಭಟನೆ ನಡೆಸುವಂತೆ ಕರೆ ನೀಡಿದ್ದಾರೆ.
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ನೀಲಿ ಚಿತ್ರತಾರೆಗೆ ಹಣ ಸಂದಾಯ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಬಂಧನವಾಗಲಿದೆ ಎಂದು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪೋಸ್ಟ್ ಮಾಡಿದ್ದು, ತಮ್ಮ ಕಾರ್ಯಕರ್ತರಿಗೆ ಪ್ರತಿಭಟನೆ ನಡೆಸುವಂತೆ ಕರೆ ನೀಡಿದ್ದಾರೆ.

ಇಬ್ಬರ ನಡುವಿನ ಸಂಬಂಧದ ಗುಟ್ಟು ಬಹಿರಂಗಪಡಿಸದಿರಲು ನೀಲಿಚಿತ್ರ ತಾರೆಯೊಬ್ಬರಿಗೆ 2016ರ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಹಣ ಸಂದಾಯ ಮಾಡಿದ ಆರೋಪವನ್ನು ಟ್ರಂಪ್‌ ಎದುರಿಸುತ್ತಿದ್ದು, ಇದೇ ಪ್ರಕರಣದಲ್ಲಿ ಮುಂದಿನ ಮಂಗಳವಾರ ನನ್ನ ಬಂಧನವಾಗಬಹುದು ಎಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಶನಿವಾರ ಹೇಳಿದ್ದಾರೆ.

ಈ ಪ್ರಕರಣದಲ್ಲಿ ತಮ್ಮ ಬಂಧನವಾಗಲಿದ್ದು, ಇದರ ವಿರುದ್ಧ ಪ್ರತಿಭಟನೆ ನಡೆಸುವಂತೆ ತಮ್ಮ ಬೆಂಬಲಿಗರಿಗೆ ಟ್ರಂಪ್ ಕರೆ ನೀಡಿದ್ದಾರೆ. ಮ್ಯಾನ್‌ಹ್ಯಾಟನ್ ಜಿಲ್ಲಾ ಅಟಾರ್ನಿ ಕಚೇರಿಯಿಂದ ಸೋರಿಕೆಯಾದ ಮಾಹಿತಿ ಉಲ್ಲೇಖಿಸಿ, ತಮ್ಮ ಸಾಮಾಜಿಕ ಮಾಧ್ಯಮದ ‘ಟ್ರೂತ್‌’ನಲ್ಲಿ ಪೋಸ್ಟ್‌ ಪ್ರಕಟಿಸಿರುವ ಟ್ರಂಪ್‌, ‘ರಿಪಬ್ಲಿಕನ್‌ನ ಪ್ರಮುಖ ಅಭ್ಯರ್ಥಿ ಮತ್ತು ಅಮೆರಿಕದ ಮಾಜಿ ಅಧ್ಯಕ್ಷರನ್ನು ಮುಂದಿನ ಮಂಗಳವಾರ ಬಂಧಿಸಲಾಗುತ್ತಿದೆ. ಪ್ರತಿಭಟಿಸಿ, ನಮ್ಮ ರಾಷ್ಟ್ರವನ್ನು ಉಳಿಸಿ’ ಎಂದು ಬರೆದುಕೊಂಡಿದ್ದಾರೆ.

ಟ್ರಂಪ್‌ ಜತೆಗಿನ ಸಂಬಂಧವನ್ನು ಬಹಿರಂಗಪಡಿಸದಿರಲು ನೀಲಿಚಿತ್ರ ತಾರೆ ಸ್ಟಾರ್ಮಿ ಡೇನಿಯಲ್ಸ್‌ (ನಿಜವಾದ ಹೆಸರು ಸ್ಟೆಫನಿ ಕ್ಲಿಫರ್ಡ್‌)ಗೆ 1,30,000 ಡಾಲರ್‌ (₹1,07 ಕೋಟಿ) ನೀಡಲಾಗಿತ್ತು ಎನ್ನಲಾಗಿದೆ. 2016ರ ಅಧ್ಯಕ್ಷೀಯ ಚುನಾವಣೆಗೆ ಕೆಲವೇ ವಾರಗಳ ಹಿಂದೆ ಈ ಹಣ ಸಂದಾಯವಾಗಿದ್ದು, ಇದರ ತನಿಖೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಟ್ರಂಪ್ ವಿರುದ್ಧ ದೋಷಾರೋಪ ಹೊರಿಸುವ ಬಗ್ಗೆ ಪ್ರಾಸಿಕ್ಯೂಟರ್‌ಗಳು ಚಿಂತನೆ ನಡೆಸುತ್ತಿದ್ದಾರೆ. ಒಂದು ವೇಳೆ ದೋಷಾರೋಪಣೆ ಹೊರಿಸಿದರೆ, ಅಪರಾಧದ ಆರೋಪ ಹೊತ್ತ ಮೊದಲ ಮಾಜಿ ಅಧ್ಯಕ್ಷ ಟ್ರಂಪ್‌ ಆಗಲಿದ್ದಾರೆ.

ಹಾಗೇನಾದರೂ ದೋಷಾರೋಪ ಹೊರಿಸಿದರೆ ನಮ್ಮ ಕಕ್ಷಿದಾರ (ಟ್ರಂಪ್‌) ವಿಚಾರಣೆ ಎದುರಿಸಲಿದ್ದಾರೆ ಎಂದು ಟ್ರಂಪ್ ಅವರ ವಕೀಲರು ಶುಕ್ರವಾರ ಸಂಜೆ ಸಿಎನ್‌ಬಿಸಿಗೆ ತಿಳಿಸಿದ್ದಾರೆ. ಡೇನಿಯಲ್ಸ್ ಜೊತೆ ಸಂಬಂಧ ಹೊಂದಿದ್ದನ್ನು ಟ್ರಂಪ್ ನಿರಾಕರಿಸುತ್ತಲೇ ಬಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com