ಗಾಜಾ ಯುದ್ಧ: 4 ಸಾವಿರ ಮಕ್ಕಳು ಸೇರಿ ಸಾವನ್ನಪ್ಪಿದವರ ಸಂಖ್ಯೆ 10,812 ಕ್ಕೆ ಏರಿಕೆ

ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಇಸ್ರೇಲ್- ಹಮಾಸ್ ನಡುವಿನ ಸಂಘರ್ಷ ಮುಂದುವರೆದಿದ್ದು, ಒಟ್ಟು 10,812 ಮಂದಿ ಸಾವನ್ನಪ್ಪಿದ್ದಾರೆ.
ಇಸ್ರೇಲ್-ಹಮಾಸ್ ಸಂಘರ್ಷದಿಂದ ಉಂಟಾದ ಪರಿಸ್ಥಿತಿಯ ದೃಶ್ಯ (ಸಂಗ್ರಹ ಚಿತ್ರ)
ಇಸ್ರೇಲ್-ಹಮಾಸ್ ಸಂಘರ್ಷದಿಂದ ಉಂಟಾದ ಪರಿಸ್ಥಿತಿಯ ದೃಶ್ಯ (ಸಂಗ್ರಹ ಚಿತ್ರ)

ಗಾಜಾ: ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಇಸ್ರೇಲ್- ಹಮಾಸ್ ನಡುವಿನ ಸಂಘರ್ಷ ಮುಂದುವರೆದಿದ್ದು, ಒಟ್ಟು 10,812 ಮಂದಿ ಸಾವನ್ನಪ್ಪಿದ್ದಾರೆ.

ಈ ಸಂಘರ್ಷದಲ್ಲಿ 4,412 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ. ಇಸ್ರೇಲ್ ಗಾಜಾ ಪಟ್ಟಿ ಮೇಲೆ ವೈಮಾನಿಕ ದಾಳಿ ಆರಂಭಿಸಿ ಈಗ ಭೂಸೇನೆ ಕಾರ್ಯಾಚರಣೆಯನ್ನು ಮುಂದುವರೆಸುತ್ತಿದೆ.  ಅ.07 ರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ನಡೆಸಿ ಹಬ್ಬದ ಕಾರ್ಯಕ್ರಮದಲ್ಲಿ ತೊಡಗಿದ್ದ 1,400 ಮಂದಿಯನ್ನು ಹತ್ಯೆ ಮಾಡಿತ್ತು 240 ಮಂದಿಯನ್ನು ಒತ್ತೆಯಾಳುಗಳನ್ನಾಗಿರಿಸಿಕೊಂಡಿತ್ತು. 

ಹಮಾಸ್ ನ ದಾಳಿಗೆ ಇಸ್ರೇಲ್ ಪ್ರತಿದಾಳಿ ನಡೆಸುತ್ತಿದೆ. ಇದೇ ವೇಳೆ ಉತ್ತರ ಗಾಜಾ ಭಾಗದಲ್ಲಿ ನಾಗರಿಕರಿಗೆ ಯುದ್ಧಗ್ರಸ್ತ ಪ್ರದೇಶದಿಂದ ಹೊರಹೋಗುವುದಕ್ಕೆ ಅವಕಾಶ ನೀಡಲು ಇಸ್ರೆಲ್ ನಾಲ್ಕು ಗಂಟೆಗಳ ಕಾಲ ಸೇನಾ ಕಾರ್ಯಾಚರಣೆಗಳಿಗೆ ವಿರಾಮ ನೀಡಲಿದೆ ಎಂದು ಅಮೇರಿಕಾ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com