26/11ರ ಮುಂಬೈ ದಾಳಿಗೆ 15 ವರ್ಷ: ಲಷ್ಕರ್-ಎ-ತಯ್ಬಾವನ್ನು 'ಭಯೋತ್ಪಾದಕ ಸಂಘಟನೆ' ಎಂದು ಘೋಷಿಸಿದ ಇಸ್ರೇಲ್

ಇಸ್ರೇಲಿಯನ್ನರು ಸೇರಿದಂತೆ 160ಕ್ಕೂ ಹೆಚ್ಚು ರಾಷ್ಟ್ರಗಳ ಜನರ ಸಾವಿಗೆ ಕಾರಣವಾದ ಮುಂಬೈ ಮೇಲಿನ 26/11ರ ಭಯೋತ್ಪಾದಕ ದಾಳಿಗೆ 15 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಇಸ್ರೇಲ್ ಮಂಗಳವಾರ ಪಾಕಿಸ್ತಾನ ಮೂಲದ ಲಷ್ಕರ್-ಎ-ತಯ್ಬಾವನ್ನು 'ಭಯೋತ್ಪಾದಕ ಸಂಘಟನೆ' ಎಂದು ಘೋಷಿಸಿದೆ.
2008ರ ನವೆಂಬರ್ 26ರ ಭಯೋತ್ಪಾದಕ ದಾಳಿಯ ನಂತರ ಭದ್ರತಾ ಕಾರ್ಯಾಚರಣೆಯ ಸಮಯದಲ್ಲಿ ದಕ್ಷಿಣ ಮುಂಬೈನ ತಾಜ್ ಹೋಟೆಲ್‌ನಿಂದ ಹೊಗೆ ಹೊರಹೊಮ್ಮುತ್ತಿದೆ.
2008ರ ನವೆಂಬರ್ 26ರ ಭಯೋತ್ಪಾದಕ ದಾಳಿಯ ನಂತರ ಭದ್ರತಾ ಕಾರ್ಯಾಚರಣೆಯ ಸಮಯದಲ್ಲಿ ದಕ್ಷಿಣ ಮುಂಬೈನ ತಾಜ್ ಹೋಟೆಲ್‌ನಿಂದ ಹೊಗೆ ಹೊರಹೊಮ್ಮುತ್ತಿದೆ.

ಜೆರುಸಲೇಂ/ನವದೆಹಲಿ: ಇಸ್ರೇಲಿಯನ್ನರು ಸೇರಿದಂತೆ 160ಕ್ಕೂ ಹೆಚ್ಚು ರಾಷ್ಟ್ರಗಳ ಜನರ ಸಾವಿಗೆ ಕಾರಣವಾದ ಮುಂಬೈ ಮೇಲಿನ 26/11ರ ಭಯೋತ್ಪಾದಕ ದಾಳಿಗೆ 15 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಇಸ್ರೇಲ್ ಮಂಗಳವಾರ ಪಾಕಿಸ್ತಾನ ಮೂಲದ ಲಷ್ಕರ್-ಎ-ತಯ್ಬಾವನ್ನು 'ಭಯೋತ್ಪಾದಕ ಸಂಘಟನೆ' ಎಂದು ಘೋಷಿಸಿದೆ.

'ಮುಂಬೈ ಭಯೋತ್ಪಾದನಾ ದಾಳಿಯ 15ನೇ ವರ್ಷದ ಸ್ಮರಣಾರ್ಥವಾಗಿ ಇಸ್ರೇಲ್ ದೇಶವು ಲಷ್ಕರ್-ಎ-ತಯ್ಬಾವನ್ನು ಭಯೋತ್ಪಾದಕ ಸಂಘಟನೆಯ ಪಟ್ಟಿಗೆ ಸೇರಿಸಿದೆ' ಎಂದು ಇಸ್ರೇಲ್ ರಾಯಭಾರ ಕಚೇರಿ ದೆಹಲಿಯಲ್ಲಿ ಹೇಳಿಕೆಯಲ್ಲಿ ತಿಳಿಸಿದೆ.

'ಈ ಕ್ರಮದ ಹಿಂದೆ ಭಾರತ ಸರ್ಕಾರದ ಯಾವುದೇ ಪಾತ್ರವಿಲ್ಲ. ಇಸ್ರೇಲ್ ಎಲ್ಲಾ ಅಗತ್ಯ ಕಾರ್ಯವಿಧಾನಗಳನ್ನು ಔಪಚಾರಿಕವಾಗಿ ಪೂರ್ಣಗೊಳಿಸಿದೆ ಮತ್ತು ಲಷ್ಕರ್-ಎ-ತಯ್ಬಾವನ್ನು ಇಸ್ರೇಲಿ ಅಕ್ರಮ ಭಯೋತ್ಪಾದಕ ಸಂಘಟನೆಗಳ ಪಟ್ಟಿಗೆ ಸೇರಿಸಲು ಅಗತ್ಯವಿರುವ ಎಲ್ಲಾ ಪರಿಶೀಲನೆ ಮತ್ತು ನಿಬಂಧನೆಗಳನ್ನು ಪೂರೈಸಿದೆ' ಎಂದು ಹೇಳಿಕೆ ತಿಳಿಸಿದೆ.

2008ರ ನವೆಂಬರ್ 26ರಂದು ಪಾಕಿಸ್ತಾನದಿಂದ ಸಮುದ್ರ ಮಾರ್ಗದಲ್ಲಿ ಪಾಕಿಸ್ತಾನದ 10 ಭಯೋದ್ಪಾದಕರು ದಕ್ಷಿಣ ಮುಂಬೈ ಪ್ರದೇಶಗಳನ್ನು ಪ್ರವೇಶಿಸಿದರು. ಚಾಬಾದ್ ಹೌಸ್ ಮತ್ತು ಯಹೂದಿ ಕೇಂದ್ರ ಸೇರಿದಂತೆ ಹಲವಾರು ಸ್ಥಳಗಳ ಮೇಲೆ ದಾಳಿ ಮಾಡಿದರು. ದಾಳಿಯಲ್ಲಿ 18 ಭದ್ರತಾ ಸಿಬ್ಬಂದಿ ಸೇರಿದಂತೆ 166 ಜನರು ಮೃತಪಟ್ಟಿದ್ದರು. 

ಈ ವೇಳೆ 60 ಗಂಟೆ ಕಾರ್ಯಾಚರಣೆ ನಡೆದಿತ್ತು. ಘಟನೆಯಲ್ಲಿ ಒಂಬತ್ತು ಉಗ್ರರನ್ನು ಹತರಾಗಿದ್ದರು. ದಾಳಿಯಲ್ಲಿ ಜೀವಂತವಾಗಿ ಸಿಕ್ಕಿಬಿದ್ದಿದ್ದ ಉಗ್ರ ಅಜ್ಮಲ್ ಕಸಬ್‌ನನ್ನು 2021ರ ನವೆಂಬರ್ 21ರಂದು ಗಲ್ಲು ಶಿಕ್ಷೆಗೆ ಗುರಿಪಡಿಸಲಾಗಿತ್ತು. 

'ಲಷ್ಕರ್-ಎ-ತಯ್ಬಾ ಮಾರಣಾಂತಿಕ ಮತ್ತು ಖಂಡನೀಯ ಭಯೋತ್ಪಾದಕ ಸಂಘಟನೆಯಾಗಿದ್ದು, ನೂರಾರು ಭಾರತೀಯ ನಾಗರಿಕರ ಹತ್ಯೆಗೆ ಮತ್ತು ಇತರರ ಹತ್ಯೆಗೆ ಕಾರಣವಾಗಿದೆ. 2008ರ ನವೆಂಬರ್ 26ರಂದು ಸಂಘಟನೆ ನಡೆಸಿದ ಹೇಯ ಕೃತ್ಯವು ಶಾಂತಿಯನ್ನು ಬಯಸುವ ಎಲ್ಲಾ ರಾಷ್ಟ್ರಗಳು ಮತ್ತು ಸಮಾಜಗಳಲ್ಲಿ ಇನ್ನೂ ಹಸಿರಾಗಿದೆ' ಎಂದು ಹೇಳಿಕೆ ಸೇರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com