ಗಾಜಾ ಅಲ್ ಶಿಫಾ ಆಸ್ಪತ್ರೆ ಉಗ್ರರ ಅಡಗುದಾಣ ಎಂಬ ಆರೋಪಕ್ಕೆ ಪುರಾವೆ ನೀಡಿದ ಇಸ್ರೇಲ್!

ಗಾಜಾದ ಅಲ್ ಶಿಫಾ ಆಸ್ಪತ್ರೆಯನ್ನು ಇಸ್ರೇಲ್ ಹಮಾಸ್ ಉಗ್ರರ ಅಡಗುದಾಣ ಎಂದು ಆರೋಪಿಸಿತ್ತು. ಈಗ ಅದಕ್ಕೆ ಸಂಬಂಧಿಸಿದ ಪುರಾವೆಗಳನ್ನು ಯಹೂದಿಗಳ ರಾಷ್ಟ್ರ ಬಹಿರಂಗಗೊಳಿಸಿದೆ.
ಹಮಾಸ್ ಟನಲ್ ನಲ್ಲಿ ಇಸ್ರೇಲಿ ಯೋಧರು
ಹಮಾಸ್ ಟನಲ್ ನಲ್ಲಿ ಇಸ್ರೇಲಿ ಯೋಧರು

ನವದೆಹಲಿ: ಗಾಜಾದ ಅಲ್ ಶಿಫಾ ಆಸ್ಪತ್ರೆಯನ್ನು ಇಸ್ರೇಲ್ ಹಮಾಸ್ ಉಗ್ರರ ಅಡಗುದಾಣ ಎಂದು ಆರೋಪಿಸಿತ್ತು. ಈಗ ಅದಕ್ಕೆ ಸಂಬಂಧಿಸಿದ ಪುರಾವೆಗಳನ್ನು ಯಹೂದಿಗಳ ರಾಷ್ಟ್ರ ಬಹಿರಂಗಗೊಳಿಸಿದೆ.
 
ವಿದೇಶಿ ಪತ್ರಕರ್ತರ ಗುಂಪಿಗೆ ಆಸ್ಪತ್ರೆಯ ಕಟ್ಟಡದ ಅಡಿಯಲ್ಲಿರುವ ಭೂಗತ ವ್ಯವಸ್ಥೆಯನ್ನು ಇಸ್ರೇಲ್ ಸಾಕ್ಷಿ ಸಮೇತ ತೆರೆದು ಇಟ್ಟಿದೆ.

ಇಸ್ರೇಲ್ ಸೇನೆ ಗಾಜಾದ ಅಲ್ ಶಿಫಾ ಆಸ್ಪತ್ರೆಯನ್ನು ಸುತ್ತುವರೆದಿದ್ದು, ಅಲ್ಲಿ ಟನಲ್ ಒಳಪ್ರವೇಶಿಸಿದ ಪತ್ರಕರ್ತರಿಗೆ ಇಸ್ರೇಲಿ ಸೇನೆ ಭದ್ರತೆ ಒದಗಿಸಿತ್ತು. 

ಈ ನೆಲಮಾಳಿಗೆ 150 ಮೀಟರ್ ಉದ್ದ ಇದ್ದು,  ಸರಣಿ ನೆಲಮಾಳಿಗೆ ಬಂಕರ್ ಗಳನ್ನು ಒಳಗೊಂಡಿತ್ತು ಎಂದು ಇಸ್ರೇಲಿ ಯೋಧರು ಹೇಳಿದ್ದಾರೆ.

ಸುರಂಗದ ಕೊನೆಯಲ್ಲಿರುವ ಕ್ವಾರ್ಟರ್ಸ್, ಏರ್ ಕಂಡಿಷನರ್, ಅಡುಗೆಮನೆ, ಸ್ನಾನಗೃಹ ಮತ್ತು  ಬಿಳಿ ಟೈಲ್‌ನಿಂದ ವಿನ್ಯಾಸಗೊಳಿಸಲಾದ ಕೋಣೆಯಲ್ಲಿ ಜೋಡಿ ಲೋಹದ ಹಾಸಿಗೆಗಳನ್ನು ಹೊಂದಿತ್ತು. ಅವು ಬಳಕೆಯಲ್ಲಿಲ್ಲದೇ ಇರುವುದು ಕಂಡುಬಂದಿದೆ ಎಂದು ಇಸ್ರೇಲಿ ಪಡೆಗಳು ಹೇಳಿವೆ.

ಅಕ್ಟೋಬರ್ 7 ರಂದು ಇಸ್ರೇಲ್ ಹಮಾಸ್ ವಿರುದ್ಧ ಯುದ್ಧ ಘೋಷಿಸಿದಾಗಿನಿಂದ, ಇಸ್ಲಾಮಿಕ್ ಉಗ್ರಗಾಮಿ ಗುಂಪು ಗಾಜಾದ ಆಸ್ಪತ್ರೆಗಳನ್ನು ಮಿಲಿಟರಿ ಬಳಕೆಗೆ ಗುರಾಣಿಯಾಗಿ ಬಳಕೆ ಮಾಡುತ್ತಿವೆ ಎಂದು ಆರೋಪಿಸಿದೆ. ಇಸ್ರೇಲಿ ಪಡೆಗಳು ಶಿಫಾಗೆ ವಿಶೇಷ ಗಮನ ನೀಡಿದೆ. ಆಸ್ಪತ್ರೆಯ ವಿಸ್ತಾರವಾದ ಮೈದಾನದ ಕೆಳಗೆ ಹಮಾಸ್ ಕಮಾಂಡ್ ಸೆಂಟರ್‌ಗಳು ಮತ್ತು ಬಂಕರ್‌ಗಳನ್ನು ಮರೆ ಮಾಡಿದೆ ಎಂದು ಇರೇಲ್ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com