Israel-Gaza Conflict: 25 ಒತ್ತೆಯಾಳುಗಳ ಬಿಡುಗಡೆ ಮಾಡಿದ ಹಮಾಸ್: ವರದಿ

ಇಸ್ರೇಲ್ ಮತ್ತು ಗಾಜಾ ಸಂಘರ್ಷ ಮುಂದುವರೆದಿರುವಂತೆಯೇ ಅಂತಾರಾಷ್ಟ್ರೀಯ ಸಮುದಾಯದ ಮಧ್ಯ ಪ್ರವೇಶದ ಬಳಿಕ ಯುದ್ಧ ಆರಂಭವಾಗಿ 2 ತಿಂಗಳ ಬಳಿಕ ಹಮಾಸ್ ಉಗ್ರ ಸಂಘಟನೆ 25 ಮಂದಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ ಎಂದು ತಿಳಿದುಬಂದಿದೆ.
ಇಸ್ರೇಲ್ ಸೇನಾ ಪಡೆ (ಸಂಗ್ರಹ ಚಿತ್ರ)
ಇಸ್ರೇಲ್ ಸೇನಾ ಪಡೆ (ಸಂಗ್ರಹ ಚಿತ್ರ)
Updated on

ಟೆಲ್ ಅವೀವ್: ಇಸ್ರೇಲ್ ಮತ್ತು ಗಾಜಾ ಸಂಘರ್ಷ ಮುಂದುವರೆದಿರುವಂತೆಯೇ ಅಂತಾರಾಷ್ಟ್ರೀಯ ಸಮುದಾಯದ ಮಧ್ಯ ಪ್ರವೇಶದ ಬಳಿಕ ಯುದ್ಧ ಆರಂಭವಾಗಿ 2 ತಿಂಗಳ ಬಳಿಕ ಹಮಾಸ್ ಉಗ್ರ ಸಂಘಟನೆ 25 ಮಂದಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಹಮಾಸ್ ವಕ್ತಾರರು ಮಾಹಿತಿ ನೀಡಿದ್ದಾರೆ ಎಂದು ಏಜೆನ್ಸಿ ಫ್ರಾನ್ಸ್ ಪ್ರೆಸ್ (AFP) ಸುದ್ದಿ ಸಂಸ್ಥೆ ವರದಿ ಮಾಡಿದೆ. ವರದಿಯಲ್ಲಿರುವಂತೆ 13 ಮಂದಿ ಇಸ್ರೇಲಿ ಪ್ರಜೆಗಳು ಮತ್ತು 12 ಮಂದಿ ಥಾಯ್ಲೆಂಡ್ ಪ್ರಜೆಗಳು ಸೇರಿದಂತೆ ಒಟ್ಟು 25 ಮಂದಿ ಒತ್ತೆಯಾಳುಗಳನ್ನು ಹಮಾಸ್ ಸಂಘಟನೆ ಬಿಡುಗಡೆ ಮಾಡಿದೆ ಎನ್ನಲಾಗಿದೆ. ಈ 25 ಒತ್ತೆಯಾಳುಗಳನ್ನು ಶುಕ್ರವಾರ ಈಜಿಪ್ಟ್ ನ ರಾಫಾ ಗಡಿ ಮೂಲಕ ಇಸ್ರೇಲ್‌ಗೆ ಮರಳಲು ರೆಡ್‌ಕ್ರಾಸ್‌ಗೆ ಹಸ್ತಾಂತರಿಸಲಾಗಿದೆ. ಅವರನ್ನು ರೆಡ್ ಕ್ರಾಸ್ ಸಿಬ್ಬಂದಿಗಳು ಈಜಿಪ್ಟಿಗೆ ಹಸ್ತಾಂತರಿಸಲಿದ್ದಾರೆ ಎಂದು ಹೇಳಲಾಗಿದೆ.

ಹಮಾಸ್‌ನ ಮಿಲಿಟರಿ ವಿಭಾಗದ ಮೂಲವು ಹಸ್ತಾಂತರವನ್ನು ದೃಢಪಡಿಸಿದ್ದು, ಇದು ಕದನ ವಿರಾಮ ಒಪ್ಪಂದದ ಅಡಿಯಲ್ಲಿ ಬಿಡುಗಡೆಯಾಗುತ್ತಿರುವ ಮೊದಲು ಮೊದಲ ಗುಂಪು ಎಂದು ಹೇಳಿದೆ.  ಇಸ್ರೇಲಿ ಮತ್ತು ಹಮಾಸ್ ನಡುವಿನ ಕದನ ವಿರಾಮ ಬೆಳಿಗ್ಗೆ ಗಾಜಾ ಪಟ್ಟಿಯಲ್ಲಿ ಜಾರಿಗೆ ಬಂದ ನಂತರ 13 ಮಹಿಳೆಯರು ಮತ್ತು ಮಕ್ಕಳ ಒತ್ತೆಯಾಳುಗಳ ಮೊದಲ ಗುಂಪು ಶುಕ್ರವಾರ ಇಸ್ರೇಲ್‌ಗೆ ಹಿಂತಿರುಗಲಿದೆ.

ಗಾಜಾದ ಹಮಾಸ್ ಆಡಳಿತಗಾರರೊಂದಿಗೆ ಮಾಡಿಕೊಂಡ ಒಪ್ಪಂದದ ನಿಯಮಗಳ ಅಡಿಯಲ್ಲಿ ಇಸ್ರೇಲ್ ಜೈಲುಗಳಿಂದ ಮೂರು ಪಟ್ಟು ಹೆಚ್ಚು ಪ್ಯಾಲೇಸ್ಟಿನಿಯನ್ ಕೈದಿಗಳನ್ನು, ಮಹಿಳೆಯರು ಮತ್ತು ಹದಿಹರೆಯದವರನ್ನು ಬಿಡುಗಡೆ ಮಾಡಲು ಇಸ್ರೇಲ್ ಕೂಡ ಸಜ್ಜಾಗಿದೆ. 

ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ದಾಳಿ ಮಾಡಿದ್ದ ಹಮಾಸ್ ಬಂಡುಕೋರರು ಸುಮಾರು 1200 ಮಂದಿಯನ್ನು ಕೊಂದು 240 ಇಸ್ರೇಲಿ ಮತ್ತು ವಿದೇಶಿ ಪ್ರಜೆಗಳನ್ನು ಒತ್ತೆಯಾಳುಗಳಾಗಿರಿಸಿಕೊಂಡಿದ್ದರು. ಈ ದಾಳಿ ಬೆನ್ನಲ್ಲೇ ಗಾಜಾಪಟ್ಟಿಯಲ್ಲಿ ಯುದ್ಧ ಆರಂಭಿಸಿದ್ದ ಇಸ್ರೇಲ್ ಸೇನಾ ಪಡೆಗಳು ಹಮಾಸ್ ಬಂಡುಕೋರರ ನೆಲೆಗಳನ್ನು ಧ್ವಂಸಗೊಳಿಸುತ್ತಿದೆ. ಈ ದಾಳಿಯಲ್ಲಿ ಸುಮಾರು 15 ಸಾವಿರಕ್ಕೂ ಅಧಿಕ ಪ್ಯಾಲೆಸ್ತೀನಿಯನ್ನರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಮೂಲಗಳು ಆರೋಪಿಸಿದೆ.

ಹಮಾಸ್-ಇಸ್ರೇಲ್ ಯುದ್ಧದಲ್ಲಿ ಅಮಾಯಕ ಪ್ಯಾಲೆಸ್ತೀನಿಯನ್ನರು ಸಾವನ್ನಪ್ಪುತ್ತಿರುವ ಹಿನ್ನಲೆಯಲ್ಲಿ ಜಾಗತಿಕ ಸಮುದಾಯ ಹಮಾಸ್ ಮತ್ತು ಇಸ್ರೇಲ್ ನಡುವೆ ಸಂಧಾನಕ್ಕೆ ಮುಂದಾಗಿತ್ತು. ಇದೀಗ ತಾತ್ಕಾಲಿಕ ಕದನ ವಿರಾಮಕ್ಕೆ ಇಸ್ರೇಲ್ ಮತ್ತು ಹಮಾಸ್ ಒಪ್ಪಿಗೆ ಸೂಚಿಸಿವೆ ಎಂದು ಹೇಳಲಾಗಿದೆ.

ಕದನ ವಿರಾಮದ ಒಪ್ಪಂದವಾಗಿ ಎರಡೂ ಕಡೆಯಿಂದ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಲಾಗಿದ್ದು, ಇದರ ಆರಂಭಿಕ ಹೆಜ್ಜೆಯಾಗಿ ಹಮಾಸ್ ತನ್ನ ವಶದಲ್ಲಿದ್ದ 25 ಮಂದಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com