Israel-Gaza Conflict: 3ನೇ ಹಂತದಲ್ಲಿ 17 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್‌

ಕದನ ವಿರಾಮ ಒಪ್ಪಂದದಂತೆ 3ನೇ ಹಂತದಲ್ಲಿ 14 ಇಸ್ರೇಲಿ ಮತ್ತು ಅಮೆರಿಕಾದ ಓರ್ವ ಪ್ರಜೆ ಸೇರಿ ಒಟ್ಟು 17 ಮಂದಿ ಒತ್ತೆಯಾಳುಗಳನ್ನು ಹಮಾಸ್‌ ಬಂಡುಕೋರರು ಬಿಡುಗಡೆ ಮಾಡಿದ್ದಾರೆ.
ರೆಡ್‌ಕ್ರಾಸ್ ಬೆಂಗಾವಲು ಪಡೆ
ರೆಡ್‌ಕ್ರಾಸ್ ಬೆಂಗಾವಲು ಪಡೆ

ಜೆರುಸಲೇಂ: ಕದನ ವಿರಾಮ ಒಪ್ಪಂದದಂತೆ 3ನೇ ಹಂತದಲ್ಲಿ 14 ಇಸ್ರೇಲಿ ಮತ್ತು ಅಮೆರಿಕಾದ ಓರ್ವ ಪ್ರಜೆ ಸೇರಿ ಒಟ್ಟು 17 ಮಂದಿ ಒತ್ತೆಯಾಳುಗಳನ್ನು ಹಮಾಸ್‌ ಬಂಡುಕೋರರು ಬಿಡುಗಡೆ ಮಾಡಿದ್ದಾರೆ.

ನಾಲ್ಕು ದಿನಗಳ ಕದನ ವಿರಾಮದ ಹಿನ್ನೆಲೆಯಲ್ಲಿ ಮೂರನೇ ಹಂತದ ಒತ್ತೆಯಾಳುಗಳ ಬಿಡುಗಡೆಯನ್ನು ಹಮಾಸ್ ಮಾಡಿದ್ದೂ ಅದಕ್ಕೆ ಪ್ರತಿಯಾಗಿ ಇಸ್ರೇಲ್ 39 ಪ್ಯಾಲೇಸ್ಟಿನಿಯನ್ ಕೈದಿಗಳನ್ನು ಬಿಡುಗಡೆ ಮಾಡಿದೆ.

ಹಮಾಸ್ 14 ಇಸ್ರೇಲಿಗಳು ಮತ್ತು ನಾಲ್ಕು ವಿದೇಶಿ ಪ್ರಜೆಗಳ ಮೂರನೇ ಬ್ಯಾಚ್ ಅನ್ನು ರೆಡ್ ಕ್ರಾಸ್ ಸಂಸ್ಥೆಗೆ ಹಸ್ತಾಂತರಿಸಿದೆ ಎಂದು ಹೇಳಿದೆ.

ಈ ನಡುವೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರು, ಗಾಜಾ ಪಟ್ಟಿಗೆ ತೆರಳಿ ಸೈನಿಕರಿಗೆ ಸ್ಫೂರ್ತಿ ತುಂಬಿದರು. ಈ ವೇಳೆ ಮಾತನಾಡಿದ ಅವರು, ಮೊದಲು ಹಮಾಸ್​ ಅನ್ನು ನಾಶ ಮಾಡುವುದು ಹಾಗೂ ಎರಡನೆಯದು ಎಲ್ಲಾ ಇಸ್ರೇಲಿ ಒತ್ತೆಯಾಳುಗಳನ್ನು ಮರಳಿ ತರುವುದು ನಮ್ಮ ಮೂಲ ಉದ್ದೇಶ ಎಂದು ಹೇಳಿದರು.

ಇಸ್ರೇಲ್ ಮತ್ತು ಹಮಾಸ್ ನಡುವೆ ನಾಲ್ಕು ದಿನಗಳ ಕದನ ವಿರಾಮ ಶುಕ್ರವಾರ (ನವೆಂಬರ್ 24) ರಂದು ಪ್ರಾರಂಭವಾಯಿತು. ಇದರಂತೆ ಹಮಾಸ್ ಹಾಗೂ ಇಸ್ರೇಲ್‌ ನಡುವಿನ ಒಪ್ಪಂದದನ್ವಯ 3 ಹಾಗೂ 1ರ ಅನುಪಾತದಲ್ಲಿ ಒತ್ತೆಯಾಳುಗಳ ಬಿಡುಗಡೆ ಪ್ರಕ್ರಿಯೆ ನಡೆಯುತ್ತಿದೆ. ಅಂದರೆ ಹಂತ, ಹಂತವಾಗಿ ಹಮಾಸ್‌ ಬಂಡುಕೋರರಿಂದ 50 ಒತ್ತೆಯಾಳುಗಳ ಬಿಡುಗಡೆ ಹಾಗೂ ಪ್ರತಿಯಾಗಿ ಇಸ್ರೇಲ್‌ನಿಂದ 150 ಪ್ಯಾಲೆಸ್ಟೀನ್‌ ಕೈದಿಗಳ ಬಿಡುಗಡೆ ಕುರಿತಂತೆ ಒಪ್ಪಂದ ಆಗಿತ್ತು.

ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಇಸ್ರೇಲ್​ ಮೇಲೆ 5 ಸಾವಿರಕ್ಕೂ ಅಧಿಕ ರಾಕೆಟ್​ಗಳಿಂದ ದಾಳಿ ನಡೆಸಿದ್ದರು. ಅದಕ್ಕೆ ಪ್ರತಿಯಾಗಿ ಇಸ್ರೇಲ್ ಗಾಜಾದಲ್ಲಿ ದಾಳಿ ಆರಂಭಿಸಿತ್ತು. ಹಮಾಸ್​ನ್ನು ಹತ್ತಿಕ್ಕುವವರೆಗೂ ಯುದ್ಧವನ್ನು ನಿಲ್ಲಿಸುವುದಿಲ್ಲ ಎಂದು ಇಸ್ರೇಲ್ ಹೇಳಿತ್ತು. ಅಷ್ಟೇ ಅಲ್ಲದೆ, ಯುದ್ಧವನ್ನು ನಾವು ಪ್ರಾರಂಭಿಸಿಲ್ಲ ಆದರೆ ಅಂತ್ಯ ನಮ್ಮಿಂದಲೇ ಆಗಲಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com