ಇಸ್ರೇಲ್ ನಲ್ಲಿ ಹಮಾಸ್ ಉಗ್ರರು ಪರೇಡ್ ನಡೆಸಿದ್ದ ಯುವತಿ ಜರ್ಮನ್ ಸಿಟಿಜನ್?; 'ಮಗಳ ಮೃತದೇಹವನ್ನಾದರೂ ನೀಡಿ': ತಾಯಿ ಆಕ್ರಂದನ

ಇಸ್ರೇಲ್ ಮೇಲಿನ ದಾಳಿ ವೇಳೆ ಹಮಾಸ್ ಉಗ್ರರು ಪರೇಡ್ ನಡೆಸಿದ್ದ ಯುವತಿ ಇಸ್ರೇಲಿಗಳಲ್ಲ... ಬದಲಿಗೆ ಆಕೆ ಜರ್ಮನ್ ಸಿಟಿಜನ್.. ಕನಿಷ್ಠ ಆಕೆಯ ಮೃತದೇಹವನ್ನಾದರೂ ನೀಡಿ ಎಂದು ಹಮಾಸ್ ಉಗ್ರರಿಗೆ ಮಹಿಳೆಯೊಬ್ಬರು ಮನವಿ ಮಾಡಿದ್ದಾರೆ.
ಯುವತಿ ಮೇಲೆ ಹಮಾಸ್ ಉಗ್ರರ ದುಷ್ಕೃತ್ಯ
ಯುವತಿ ಮೇಲೆ ಹಮಾಸ್ ಉಗ್ರರ ದುಷ್ಕೃತ್ಯ
Updated on

ಟೆಲ್ ಅವೀವ್: ಇಸ್ರೇಲ್ ಮೇಲಿನ ದಾಳಿ ವೇಳೆ ಹಮಾಸ್ ಉಗ್ರರು ಪರೇಡ್ ನಡೆಸಿದ್ದ ಯುವತಿ ಇಸ್ರೇಲಿಗಳಲ್ಲ... ಬದಲಿಗೆ ಆಕೆ ಜರ್ಮನ್ ಸಿಟಿಜನ್.. ಕನಿಷ್ಠ ಆಕೆಯ ಮೃತದೇಹವನ್ನಾದರೂ ನೀಡಿ ಎಂದು ಹಮಾಸ್ ಉಗ್ರರಿಗೆ ಮಹಿಳೆಯೊಬ್ಬರು ಮನವಿ ಮಾಡಿದ್ದಾರೆ.

ಹೌದು.. ಇಸ್ರೇಲ್ ಮೇಲಿನ ದಾಳಿಯ ಸಂದರ್ಭದಲ್ಲಿ ಪ್ಯಾಲೆಸ್ತೀನ್ ಉಗ್ರಗಾಮಿ ಸಂಘಟನೆ ಹಮಾಸ್‌ನಿಂದ ಪರೇಡ್ ನಡೆಸಿದ ಯುವತಿಯನ್ನು ಜರ್ಮನ್ ಪ್ರಜೆ ಎಂದು ಗುರುತಿಸಲಾಗಿದ್ದು, ಇಸ್ರೇಲ್‌ನಲ್ಲಿ ನಡೆದ ಸಂಗೀತೋತ್ಸವಕ್ಕೆ ಭೇಟಿ ನೀಡಿದ್ದ ಶಾನಿ ಲೌಕ್ ಎಂಬಾಕೆಯನ್ನು ಹಮಾಸ್ ಬಂಡುಕೋರರು ಇಸ್ರೇಲ್ ಮಹಿಳೆ ಎಂದು ತಪ್ಪಾಗಿ ಭಾವಿಸಿ ಆಕೆಯನ್ನು ಕೊಂದು ಪರೇಡ್ ನಡೆಸಿದ್ಜಾರೆ. ಈ ಕುರಿತ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು. ವೈರಲ್ ಆಗುತ್ತಿವೆ.

ಇಸ್ರೇಲ್ ಮೇಲಿನ ದಾಳಿಯ ಸಂದರ್ಭದಲ್ಲಿ ಹಮಾಸ್‌ನಿಂದ ಪರೇಡ್ ನಡೆಸಿದ ಸಂತ್ರಸ್ಥೆಯನ್ನು ಜರ್ಮನ್ ಪ್ರಜೆ ಶಾನಿ ಲೌಕ್ ಎಂದು ಗುರುತಿಸಲಾಗಿದೆ, ಅವರು ಇಸ್ರೇಲಿ ಸಂಗೀತ ಉತ್ಸವಕ್ಕೆ ಭೇಟಿ ನೀಡಿದ್ದರು. ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪು ಶನಿಯ ಭಾಗಶಃ ಬಟ್ಟೆಯಿಲ್ಲದ ದೇಹವನ್ನು ತೆರೆದ ಟ್ರಕ್‌ನಲ್ಲಿ ಮೆರವಣಿಗೆ ಮಾಡುವುದನ್ನು ಚಿತ್ರಿಸುವ ಗೊಂದಲದ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗಿತ್ತು. ಆದರೆ ಈ ವಿಡಿಯೋ ವೈರಲ್ ಆಗುತ್ತಲೇ ಆಕೆ ತನ್ನ ಮಗಳು ಎಂದು ಹೇಳಿಕೊಂಡಿರುವ ಜರ್ಮನ್ ಮಹಿಳೆಯೊಬ್ಬರು ಆಕೆಯ ಮೃತದೇಹವನ್ನಾದರೂ ನೀಡಿ ಎಂದು ಹಮಾಸ್ ಉಗ್ರರಿಗೆ ಮನವಿ ಮಾಡಿದ್ದಾರೆ.

ಈ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಮಹಿಳೆ, 'ಇಸ್ರೇಲ್ ಮೇಲಿನ ದಾಳಿಯ ಸಂದರ್ಭದಲ್ಲಿ ಹಮಾಸ್ ಪರೇಡ್ ನಡೆಸಿದ ಯುವತಿ ಜರ್ಮನ್ ಪ್ರಜೆಯಾಗಿದ್ದು, ಇಸ್ರೇಲ್‌ನಲ್ಲಿ ನಡೆದ ಸಂಗೀತೋತ್ಸವಕ್ಕೆ ಭೇಟಿ ನೀಡಿದ್ದಳು. ಆಕೆಯ ಹೆಸರು ಶಾನಿ ಲೌಕ್ ಎಂದು. ಆಕೆ ಇಸ್ರೇಲಿಗಳಲ್ಲ.. ದಯಮಾಡಿ ಕನಿಷ್ಠ ಅವಳನ್ನು (ದೇಹ) ಹಿಂದಿರುಗಿಸುವಂತೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ. 

ಮಹಿಳೆ ಶವದ ಮೇಲೆ ಹಮಾಸ್ ಉಗ್ರರ ರಾಕ್ಷಸೀ ಕೃತ್ಯ
ಇನ್ನು ಹಮಾಸ್ ಉಗ್ರಗಾಮಿಗಳು ಮೃತ ಮಹಿಳೆಯ ಶವವನ್ನು ಜೀಪ್ ನಲ್ಲಿ ಹೇರಿಕೊಂಡು ಆಕೆಯ ಶವದ ಮೇಲೆ ಕಾಲಿರಿಸಿಕೊಂಡು ಕೂತಿದ್ದರು. ಅಲ್ಲದೆ  ನಗರದೊಳಗೆ ಸಾರ್ವಜನಿಕವಾಗಿ ಅರೆನಗ್ನ ಮೃತದೇಹ ಪ್ರದರ್ಶಿಸಿದರು, ಪ್ಯಾಲೇಸ್ಟಿನಿಯನ್ ನಾಗರಿಕರು ಸತ್ತವರ ಕಡೆಗೆ ಉಗುಳುವುದು ಮತ್ತು ಕಪಾಳಮೋಕ್ಷ ಸೇರಿದಂತೆ ಅವಹೇಳನಕಾರಿ ಕ್ರಮಗಳಲ್ಲಿ ತೊಡಗಿರುವ ದೃಶ್ಯಗಳು ವಿಡಿಯೋದಲ್ಲಿ ಕಾಣಸಿಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com