ಇಸ್ರೇಲ್-ಹಮಾಸ್ ಯುದ್ಧ: ಗಾಜಾದಲ್ಲಿ ಸಾವಿನ ಸಂಖ್ಯೆ 3,478ಕ್ಕೆ ಏರಿಕೆ

ಇಸ್ರೇಲ್-ಹಮಾಸ್ ನಡುವಿನ ಯುದ್ಧ ಪರಿಣಾಮ ಗಾಜಾದಲ್ಲಿ ಮೃತಪಟ್ಟವರ ಸಂಖ್ಯೆ 3,478ಕ್ಕೆ ಏರಿಕೆಯಾಗಿದ್ದು, 12,000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ಹಮಾಸ್ ನಿಯಂತ್ರಿತ ಆರೋಗ್ಯ ಸಚಿವಾಲಯ ಬುಧವಾರ ಹೇಳಿದೆ.
ಗಾಜಾ ನಗರದ ಅಲ್-ಶಿಫಾ ಆಸ್ಪತ್ರೆ ಬಳಿ ಕುಳಿತಿರುವ ಗಾಯಗೊಂಡ ಪ್ಯಾಲೆಸ್ಟೀನಿಯರು.
ಗಾಜಾ ನಗರದ ಅಲ್-ಶಿಫಾ ಆಸ್ಪತ್ರೆ ಬಳಿ ಕುಳಿತಿರುವ ಗಾಯಗೊಂಡ ಪ್ಯಾಲೆಸ್ಟೀನಿಯರು.

ಜೆರುಸಲೇಂ: ಇಸ್ರೇಲ್-ಹಮಾಸ್ ನಡುವಿನ ಯುದ್ಧ ಪರಿಣಾಮ ಗಾಜಾದಲ್ಲಿ ಮೃತಪಟ್ಟವರ ಸಂಖ್ಯೆ 3,478ಕ್ಕೆ ಏರಿಕೆಯಾಗಿದ್ದು, 12,000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ಹಮಾಸ್ ನಿಯಂತ್ರಿತ ಆರೋಗ್ಯ ಸಚಿವಾಲಯ ಬುಧವಾರ ಹೇಳಿದೆ.

ಸಂಘರ್ಷ ವೇಳೆ ಹಮಾಸ್ ನಡೆಸಿದ ದಾಳಿಯಲ್ಲಿ ಕನಿಷ್ಠ 1,300 ಮಂದಿ ಇಸ್ರೇಲಿಗಳು ಹತ್ಯೆಗೀಡಾಗಿದ್ದು, ಕನಿಷ್ಠ 199 ಮಂದಿ ಹಮಾಸ್'ನ ಒತ್ತೆಯಾಳುಗಳಾಗಿದ್ದಾರೆಂದು ತಿಳಿದುಬಂದಿದೆ.

ದಕ್ಷಿಣ ಗಾಜಾದಲ್ಲಿರುವ ಅಲ್ ಅಹ್ಲಿ ಆಸ್ಪತ್ರೆಯ ಮೇಲೆ ಮಂಗಳವಾರ ವೈಮಾನಿಕ ದಾಳಿ ನಡೆದಿತ್ತು. ಘಟನೆಯಲ್ಲಿ 500ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಈ ದಾಳಿಯನ್ನು ಜೋರ್ಡಾನ್, ಸಿರಿಯಾ, ಸೌದಿ ಅರೇಬಿಯಾ, ಇರಾಕ್, ಈಜಿಪ್ಟ್ ಮತ್ತು ಇತರ ಅರಬ್ ರಾಷ್ಟ್ರಗಳು ಖಂಡಿಸಿದ್ದವು.

ಆರಂಭದಲ್ಲಿ ಈ ವೈಮಾನಿಕ ದಾಳಿಯನ್ನು ಇಸ್ರೇಲ್ ಪಡೆ ನಡೆಸಿತ್ತು ಎಂದು ಹೇಳಲಾಗುತ್ತಿತ್ತು. ಆದರೆ, ಈ ಆರೋಪವನ್ನು ಇಸ್ರೇಲ್ ನಿರಾಕರಿಸಿದೆ.

ಗಾಜಾ ಆಸ್ಪತ್ರೆಯಲ್ಲಿ ನಡೆದ ವೈಮಾನಿಕ ದಾಳಿ ಹಿಂದೆ ಉಗ್ರಗಾಮಿಗಳ ಕೈವಾಡವಿದ್ದು, ನಮ್ಮ ಬಳಿ ಸಾಕ್ಷಿಯಿದೆ ಎಂದು ಹೇಳಿದೆ.

ನಮ್ಮ ರಾಡಾರ್ ವ್ಯವಸ್ಥೆಯು ಗಾಜಾದಲ್ಲಿ ಭಯೋತ್ಪಾದಕರು ಹಾರಿಸಿ ಕ್ಷಿಪಣಿಗಳನ್ನು ಪತ್ತೆ ಮಾಡಿದ್ದು, ಹಮಾಸ್ ಉಗ್ರರು ವೈಮಾನಿಕ ದಾಳಿ ನಡೆಸಿ, ಆರೋಪವನ್ನು ಇಸ್ರೇಲ್ ಮೇಲೆ ಹೊರಿಸಿದೆ ಎಂದು ತಿಳಿಸಿದೆ.

ವೈಮಾನಿಕ ದಾಳಿಯನ್ನು ಈಜಿಪ್ಟ್ ಅಧ್ಯಕ್ಷ ಅಬ್ದೆಲ್-ಫತ್ತಾಹ್ ಎಲ್-ಸಿಸ್ಸಿ ಅವರು ಖಂಡಿಸಿದ್ದು, ಇದು ಅಂತರರಾಷ್ಟ್ರೀಯ ಕಾನೂನು ಮತ್ತು ಮಾನವೀಯತೆಯ ಸ್ಪಷ್ಟ ಉಲ್ಲಂಘನೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com