ಹಮಾಸ್ ಉಗ್ರರು ಅಪಹರಿಸಿ, ಬೆತ್ತಲೆ ಪರೇಡ್ ಮಾಡಿದ್ದ ಜರ್ಮನ್ ಯುವತಿ ಶಾನಿ ಲೌಕ್ ಶವವಾಗಿ ಪತ್ತೆ
ಟೆಲ್ ಅವೀವ್: ಹಮಾಸ್ ಉಗ್ರರು ಅಪಹರಿಸಿ, ಬೆತ್ತಲೆಯಾಗಿ ಮೆರವಣಿಗೆ ನಡೆಸಿದ ಜರ್ಮನ್ ಯುವತಿ ಶವವಾಗಿ ಪತ್ತೆಯಾಗಿದ್ದಾಳೆಂದು ತಿಳಿದುಬಂದಿದೆ.
ಈ ವಿಚಾರವನ್ನು ಇಸ್ರೇಲ್ ಅಧಿಕಾರಿಗಳು ಹಾಗೂ ಆಕೆಯ ಕುಟುಂಬಸ್ಥರು ಖಚಿತಪಡಿಸಿದ್ದಾರೆ. ನನ್ನ ಸಹೋದರಿಯ ಮರಣವನ್ನು ನಾವು ಬಹಳ ದುಃಖದಿಂದ ಘೋಷಿಸುತ್ತೇವೆ ಶಾನಿ ಲೌಕ್ ಸಹೋದರಿ ಆದಿ ಲೌಕ್ ಅವರು ಹೇಳಿದ್ದಾರೆ.
ಅಕ್ಟೋಬರ್ 7ರಂದು ಹಮಾಸ್‌ನ ಅನಿರೀಕ್ಷಿತ ದಾಳಿಯ ಗುರಿಗಳಲ್ಲಿ ಒಂದಾದ ಗಾಜಾ ಗಡಿಯ ಬಳಿ ಸೂಪರ್‌ನೋವಾ ಸಂಗೀತ ಉತ್ಸವದಲ್ಲಿ ಶಾನಿ ಲೌಕ್ (23) ಭಾಗವಹಿಸಿದ್ದಳು. ಆಕೆಯನ್ನು ಉಗ್ರರು ಅಪಹರಿಸಿ, ಅರೆಬೆತ್ತಲೆಯಾಗಿಯೇ ಜೀಪಿನಲ್ಲಿ ಕೊಂಡೊಯ್ಯುತ್ತಿರುವ, ಥಳಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು.
ಅವಳು ನಾಪತ್ತೆಯಾದ ನಂತರ, ಶಾನಿ ಲೌಕ್ ಳನ್ನು ಮರಳಿ ಪಡೆಯಲು ಜರ್ಮನ್ ಮತ್ತು ಇಸ್ರೇಲ್ ಸರ್ಕಾರಗಳನ್ನು ಕೋರಿ ಆಕೆಯ ತಾಯಿ ರಿಕಾರ್ಡಾ ಲೌಕ್ ಮಾಡಿದ ಮನವಿಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.
“ನಮ್ಮ ಮಗಳು ಪ್ಯಾಲೆಸ್ಟೀನಿಯನ್ನರೊಂದಿಗೆ ಕಾರಿನಲ್ಲಿ ಪ್ರಜ್ಞಾಹೀನಳಾಗಿರುವುದನ್ನು ಮತ್ತು ಅವರು ಆಕೆಯನ್ನು ಕರೆದೊಯ್ಯುತ್ತಿರುವುದನ್ನು ಸ್ಪಷ್ಟವಾಗಿ ಕಾಣುವ ವೀಡಿಯೊವನ್ನು ನಮಗೆ ಕಳುಹಿಸಲಾಗಿದೆ” ಎಂದು ವೀಡಿಯೊದಲ್ಲಿ ಹೇಳಿದ್ದರು.
23 ವರ್ಷದ ಶಾನಿಯನ್ನು ಸೆರೆಹಿಡಿದ ನಂತರ ಪಿಕ್ ಅಪ್ ಟ್ರಕ್‌ನಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡಲಾಗಿತ್ತು.
ಭಯೋತ್ಪಾದಕ ದಾಳಿಯ ನಂತರದ ತಕ್ಷಣ ಹಂಚಿಕೊಳ್ಳಲಾದ ವೀಡಿಯೊಗಳಲ್ಲಿ, ಶಾನಿ ಪಿಕಪ್ ಟ್ರಕ್‌ನಲ್ಲಿ ಮುಖ ಅಡಿಯಾಗಿ ಮಲಗಿದ್ದಳು. ಶಾನಿಯನ್ನು ಆಕೆಯ ವಿಶಿಷ್ಟವಾದ ಹಚ್ಚೆಗಳಿಂದ ಗುರುತಿಸಲಾಗಿತ್ತು.
ಶಾನಿ ಲೌಕ್ ಸಾವಿನ ಸುದ್ದಿಯನ್ನು ಹಂಚಿಕೊಂಡಿರುವ ಇಸ್ರೇಲ್, “ಸಂಗೀತೋತ್ಸವದಿಂದ ಅಪಹರಿಸಲ್ಪಟ್ಟ ಮತ್ತು ಹಮಾಸ್ ಭಯೋತ್ಪಾದಕರಿಂದ ಗಾಜಾದಲ್ಲಿ ಚಿತ್ರಹಿಂಸೆ ಮತ್ತು ಮೆರವಣಿಗೆಗೆ ಒಳಗಾದ ಶಾನಿ, ಊಹಿಸಲಾಗದ ಭಯಾನಕ ಹಿಂಸೆಯನ್ನು ಅನುಭವಿಸಿದ್ದಾರೆ. ನಮ್ಮ ಹೃದಯಗಳು ಭಗ್ನಗೊಂಡಿವೆ” ಎಂದು ಹೇಳಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ