ಕೆನಡಾದಲ್ಲಿ ಭಾರತೀಯ ರಾಜತಾಂತ್ರಿಕರ ಹತ್ಯೆಗೆ ಕರೆ: ಗುರುದ್ವಾರದ ಮೇಲೆ ಬೆದರಿಕೆ ಪೋಸ್ಟರ್

ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ನಂತರ ಭಾರತ ಮತ್ತು ಕೆನಡಾ ನಡುವಿನ ಸಂಬಂಧದಲ್ಲಿ ಉದ್ವಿಗ್ನತೆ ಉಂಟಾಗಿದ್ದು ಏತನ್ಮಧ್ಯೆ, ಸರ್ರೆಯ ಗುರುದ್ವಾರದಲ್ಲಿ ಭಾರತೀಯ ರಾಜತಾಂತ್ರಿಕರ ಹತ್ಯೆಗೆ ಕರೆ ನೀಡುವ ಪೋಸ್ಟರ್‌ಗಳನ್ನು ಹಾಕಲಾಗಿದೆ.
ಕೆನಡಾ ಗುರುದ್ವಾರ
ಕೆನಡಾ ಗುರುದ್ವಾರ

ಒಟ್ಟಾವಾ(ಕೆನಡಾ): ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ನಂತರ ಭಾರತ ಮತ್ತು ಕೆನಡಾ ನಡುವಿನ ಸಂಬಂಧದಲ್ಲಿ ಉದ್ವಿಗ್ನತೆ ಉಂಟಾಗಿದ್ದು ಏತನ್ಮಧ್ಯೆ, ಸರ್ರೆಯ ಗುರುದ್ವಾರದಲ್ಲಿ ಭಾರತೀಯ ರಾಜತಾಂತ್ರಿಕರ ಹತ್ಯೆಗೆ ಕರೆ ನೀಡುವ ಪೋಸ್ಟರ್‌ಗಳನ್ನು ಹಾಕಲಾಗಿದೆ.

ಸ್ಥಳೀಯ ಅಧಿಕಾರಿಗಳು ಪೋಸ್ಟರ್ ಗಳನ್ನು ತೆಗೆದುಹಾಕಲು ಆದೇಶ ನೀಡಿದ್ದಾರೆ. ಮೂಲಗಳ ಪ್ರಕಾರ, ಸಮಸ್ಯೆಯ ಪ್ರಮಾಣವನ್ನು ಪರಿಗಣಿಸಿ ಅಧಿಕಾರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ. ಇದಲ್ಲದೆ, ಗುರುದ್ವಾರದಲ್ಲಿ ಯಾವುದೇ ಆಮೂಲಾಗ್ರ ಘೋಷಣೆಗೆ ಧ್ವನಿವರ್ಧಕಗಳನ್ನು ಬಳಸದಂತೆ ಎಚ್ಚರಿಕೆ ನೀಡಲಾಗಿದೆ.

ನಿಷೇಧಿತ ಖಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್) ಮುಖ್ಯಸ್ಥ ಮತ್ತು ಭಾರತದ ವಾಂಟೆಡ್ ಭಯೋತ್ಪಾದಕರ ಪಟ್ಟಿಯಲ್ಲಿ ಸೇರಿರುವ ಹರ್ದೀಪ್ ಸಿಂಗ್ ನಿಜ್ಜರ್ ನನ್ನು ಜೂನ್ 18 ರಂದು ಸರ್ರೆಯ ಗುರುದ್ವಾರದ ಹೊರಗೆ ಇಬ್ಬರು ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದಿದ್ದರು. ಆತನ ತಲೆಯ ಮೇಲೆ 10 ಲಕ್ಷ ರೂಪಾಯಿ ನಗದು ಬಹುಮಾನವಿತ್ತು.

ಭಾರತದಲ್ಲೂ ಕ್ರಮ
ಮೊನ್ನೆ ಶನಿವಾರ ಭಾರತದಲ್ಲಿಯೂ ಕ್ರಮ ಕೈಗೊಳ್ಳಲಾಗಿತ್ತು. ನಿಷೇಧಿತ ಸಂಘಟನೆ ‘ಸಿಖ್ಸ್ ಫಾರ್ ಜಸ್ಟಿಸ್’ (ಎಸ್‌ಎಫ್‌ಜೆ) ಮುಖ್ಯಸ್ಥ ಖಲಿಸ್ತಾನಿ ಭಯೋತ್ಪಾದಕ ಗುರುಪತ್‌ವಂತ್ ಸಿಂಗ್ ಪನ್ನು ಅವರ ಚಂಡೀಗಢ ಮತ್ತು ಅಮೃತಸರದಲ್ಲಿ ಮನೆ ಮತ್ತು ನಿವೇಶನ ಸೇರಿದಂತೆ ಸ್ಥಿರಾಸ್ತಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶನಿವಾರ ಮುಟ್ಟುಗೋಲು ಹಾಕಿಕೊಂಡಿದೆ. ಈ ಕ್ರಮ ಕೆನಡಾ ಸೇರಿದಂತೆ ವಿವಿಧ ದೇಶಗಳಿಂದ ಕಾರ್ಯಾಚರಿಸುತ್ತಿರುವ ಭಯೋತ್ಪಾದಕ ಮತ್ತು ಪ್ರತ್ಯೇಕತಾವಾದಿ ಜಾಲಗಳ ವಿರುದ್ಧ ದೇಶದ ಕಠಿಣ ಕ್ರಮವನ್ನು ಬಲಪಡಿಸುತ್ತದೆ ಎಂದು ಎನ್ಐಎ ವಕ್ತಾರರು ತಿಳಿಸಿದ್ದಾರೆ. 

ಮೊಹಾಲಿಯ ಎಸ್‌ಎಎಸ್ ನಗರದಲ್ಲಿರುವ ಎನ್‌ಐಎ ವಿಶೇಷ ನ್ಯಾಯಾಲಯವು ಜಪ್ತಿ ಮಾಡುವ ಆದೇಶಗಳನ್ನು ಅನುಸರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ವಶಪಡಿಸಿಕೊಂಡ ಆಸ್ತಿಗಳಲ್ಲಿ ಅಮೃತಸರದ ಖಾನ್‌ಕೋಟ್ ಗ್ರಾಮದಲ್ಲಿ 46 ಕನಾಲ್ (5.7 ಎಕರೆ) ಕೃಷಿ ಭೂಮಿ ಮತ್ತು ಚಂಡೀಗಢದ ಸೆಕ್ಟರ್ 15/ಸಿ ಪ್ರದೇಶದಲ್ಲಿ ನಾಲ್ಕನೇ ಒಂದು ಭಾಗದ ಮನೆ ಸೇರಿದೆ ಎಂದು ಎನ್‌ಐಎ ಅಧಿಕಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com