ಪಾಕಿಸ್ತಾನಕ್ಕಿಂತ ಭಾರತದಲ್ಲಿ ಮುಸ್ಲಿಮರು ಚೆನ್ನಾಗಿ ಜೀವನ ನಡೆಸುತ್ತಾರೆ, ಅವರ ಸಂಖ್ಯೆ ಭಾರತದಲ್ಲಿ ಬೆಳೆಯುತ್ತಲೇ ಇದೆ: ನಿರ್ಮಲಾ ಸೀತಾರಾಮನ್

ಭಾರತ ದೇಶವು ವಿಶ್ವದಲ್ಲಿ ಎರಡನೇ ಅತಿದೊಡ್ಡ ಮುಸ್ಲಿಂ ಜನಸಂಖ್ಯೆಯ ನೆಲೆಯಾಗಿದೆ. ಅಲ್ಪಸಂಖ್ಯಾತರ ವಿಷಯಗಳಲ್ಲಿ ದೇಶವನ್ನು ದೂಷಿಸುವವರಿಗೆ ಇಲ್ಲಿನ ವಾಸ್ತವ ಸಂಗತಿಗಳ ಬಗ್ಗೆ ಯಾವುದೇ ಅರಿವು ಇಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ವಾಷಿಂಗ್ಟನ್ ಡಿಸಿಯಲ್ಲಿ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ವಾಷಿಂಗ್ಟನ್ ಡಿಸಿಯಲ್ಲಿ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ವಾಷಿಂಗ್ಟನ್: ಭಾರತ ದೇಶವು ವಿಶ್ವದಲ್ಲಿ ಎರಡನೇ ಅತಿದೊಡ್ಡ ಮುಸ್ಲಿಂ ಜನಸಂಖ್ಯೆಯ ನೆಲೆಯಾಗಿದೆ. ಅಲ್ಪಸಂಖ್ಯಾತರ ವಿಷಯಗಳಲ್ಲಿ ದೇಶವನ್ನು ದೂಷಿಸುವವರಿಗೆ ಇಲ್ಲಿನ ವಾಸ್ತವ ಸಂಗತಿಗಳ ಬಗ್ಗೆ ಯಾವುದೇ ಅರಿವು ಇಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಅವರು ನಿನ್ನೆ ವಾಷಿಂಗ್ಟನ್ ಡಿಸಿಯ ಪೀಟರ್ಸನ್ ಇನ್ಸ್ಟಿಟ್ಯೂಟ್ ಫಾರ್ ಇಂಟರ್ನ್ಯಾಷನಲ್ ಎಕನಾಮಿಕ್ಸ್ ನಲ್ಲಿ ಫೈರ್ಸೈಡ್ ಚಾಟ್ ನಲ್ಲಿ ಸಭಿಕರನ್ನು ಉದ್ದೇಶಿಸಿ ಮಾತನಾಡುತ್ತಾ, ಭಾರತದಲ್ಲಿ ಮಾತ್ರ ಮುಸ್ಲಿಂ ಜನಸಂಖ್ಯೆಯು ಸಂಖ್ಯೆಯಲ್ಲಿ ಬೆಳೆಯುತ್ತಿದೆ. 

1947ರಿಂದೀಚೆಗೆ ಭಾರತದಲ್ಲಿ ಮುಸ್ಲಿಂ ಧರ್ಮೀಯರ ಸಂಖ್ಯೆ ಬೆಳೆಯುತ್ತಿದ್ದರೆ, ಅತ್ತ ಅದೇ ಸಮಯದಲ್ಲಿ ಹುಟ್ಟಿಕೊಂಡ ರಾಷ್ಟ್ರ ಪಾಕಿಸ್ತಾನದಲ್ಲಿ ಅಲ್ಲಿನ ಅಲ್ಪಸಂಖ್ಯಾತರು ನಶಿಸುತ್ತಿದ್ದಾರೆ. ಭಾರತದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ಮತ್ತು ಭಾರತದ ಬಗ್ಗೆ ಪಾಶ್ಚಾತ್ಯರಿಗೆ ಋಣಾತ್ಮಕ ಗ್ರಹಿಕೆಗಳಿವೆ, ಆದರೆ ವಾಸ್ತವ ಸಂಗತಿ ಬೇರೆಯಾಗಿದೆ. ಭಾರತದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ, ಅವರ ಜೀವನ ಅಷ್ಟೊಂದು ಕಷ್ಟಕರವಾಗಿದ್ದರೆ ಸ್ವಾತಂತ್ರ್ಯ ನಂತರ ಅವರ ಜನಸಂಖ್ಯೆ ಅಷ್ಟೊಂದು ಬೆಳೆಯುತ್ತಿತ್ತೆ, ಕಡಿಮೆಯಾಗಬೇಕಿತ್ತಲ್ಲವೇ ಎಂದು ನಿರ್ಮಲಾ ಸೀತಾರಾಮನ್ ಕೇಳಿದರು.

ಪಾಕಿಸ್ತಾನದಲ್ಲಿ ಮುಹಾಜಿರ್‌ಗಳು, ಶಿಯಾಗಳು ಮತ್ತು ಇತರ ಅಲ್ಪಸಂಖ್ಯಾತ ಗುಂಪುಗಳ ಮೇಲೆ ಹಿಂಸಾಚಾರ, ದೌರ್ಜನ್ಯಗಳು ನಡೆಯುತ್ತಿವೆ, ಆದರೆ ಭಾರತದಲ್ಲಿ, ಮುಸ್ಲಿಂ ಸಮುದಾಯಗಳು ನೆಮ್ಮದಿಯಿಂದ ತಮ್ಮ ಬದುಕನ್ನು, ದಿನನಿತ್ಯದ ವ್ಯವಹಾರಗಳನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. 

ಭಾರತ ಎರಡು ಪಾಕಿಸ್ತಾನಗಳಾಗಿ ಇಬ್ಭಾಗವಾಯಿತು. ಪಾಕಿಸ್ತಾನ ತನ್ನನ್ನು ತಾನೇ ಇಸ್ಲಾಂ ರಾಷ್ಟ್ರ ಎಂದು ಘೋಷಿಸಿಕೊಂಡಿತು. ಆದರೆ ಅಲ್ಲಿನ ಅಲ್ಪಸಂಖ್ಯಾತರ ಹಿತ ರಕ್ಷಣೆ ಮಾಡುವುದಾಗಿ ಹೇಳಿತು. ಪಾಕಿಸ್ತಾನದಲ್ಲಿ ಪ್ರತಿ ಅಲ್ಪಸಂಖ್ಯಾತರು ಸಂಖ್ಯೆಯಲ್ಲಿ ಕ್ಷೀಣಿಸುತ್ತಿದ್ದಾರೆ ಅಥವಾ ನಾಶವಾಗಿದ್ದಾರೆ. ಕೆಲವು ಮುಸ್ಲಿಂ ಪಂಗಡಗಳು ಸಹ ನಾಶವಾಗಿವೆ ಎಂದು ಹೇಳಿದರು.

ಭಾರತದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ದೇಶದ ವಿಷಯವಾಗಿದೆ ಮತ್ತು ಪ್ರತಿಯೊಂದು ಪ್ರಾಂತ್ಯ ರಾಜ್ಯದಲ್ಲಿ ಸರ್ಕಾರವನ್ನು ಆಯ್ಕೆ ಮಾಡಲಾಗುತ್ತದೆ. ಆಯಾ ರಾಜ್ಯಗಳ ಕಾನೂನು, ಸುವ್ಯವಸ್ಥೆಯನ್ನು ರಾಜ್ಯ ಸರ್ಕಾರಗಳು ನೋಡಿಕೊಳ್ಳುತ್ತವೆ. ಮುಸ್ಲಿಮರ ವಿರುದ್ಧ ಭಾರತದಲ್ಲಿ ಹಿಂಸಾಚಾರ ನಡೆಯುತ್ತಿದೆ ಎಂಬುದು ಸುಳ್ಳು, ಜಗತ್ತಿನಾದ್ಯಂತ ಈ ಕಲ್ಪನೆಯಿದೆ ಎಂದರು.

ಭಾರತ ಸರ್ಕಾರ ಮೇಲೆ ಸುಮ್ಮನೆ ಆಪಾದನೆ ಮಾಡಲಾಗುತ್ತದೆ. 2014ರಿಂದ ಇಲ್ಲಿಯವರೆಗೆ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆಯು ಕ್ಷೀಣಿಸಿದೆಯೇ, ಯಾವುದೇ ಒಂದು ನಿರ್ದಿಷ್ಟ ಸಮುದಾಯದಲ್ಲಿ ಸಾಲಗಳು ಅಸಮಾನವಾಗಿ ಹೆಚ್ಚಾಗಿದೆಯೇ,  ಇಂತಹ ಸುಳ್ಳು ಸುದ್ದಿಗಳು, ವರದಿಗಳನ್ನು ಹಬ್ಬಿಸುವವರು ಭಾರತಕ್ಕೆ ಬಂದು ನೋಡಿ, ಅಲ್ಲಿನ ವಾಸ್ತವ ಸತ್ಯಸಂಗತಿ ನೋಡಿ ಆಮೇಲೆ ಮಾತನಾಡಲಿ ಎಂದರು. 

ಪ್ರಪಂಚದ ಸುಮಾರು ಶೇಕಡಾ 62ರಷ್ಟು ಮುಸ್ಲಿಮರು ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ವಾಸವಾಗಿದ್ದು (ಟರ್ಕಿಯಿಂದ ಇಂಡೋನೇಷಿಯಾವರೆಗೆ) ಒಂದು ಶತಕೋಟಿಗೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯು ಇಂಡೋನೇಷ್ಯಾದಲ್ಲಿದೆ, ಇದು ವಿಶ್ವದ ಶೇಕಡಾ 12.7 ರಷ್ಟು ಮುಸ್ಲಿಮರನ್ನು ಹೊಂದಿರುವ ದೇಶವಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com