ಗರ್ಲ್ ಫ್ರೆಂಡ್ ಪಡೆಯಲು, 5 ಇಂಚು ಎತ್ತರ ಬೆಳೆಯಲು 1.35 ಕೋಟಿ ಖರ್ಚು ಮಾಡಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಭೂಪ

ಗರ್ಲ್ ಫ್ರೆಂಡ್ ಪಡೆಯಲು ಅಮೆರಿಕದ ಮಿನ್ನೇಸೋಟದ ವ್ಯಕ್ತಿಯೊಬ್ಬ ತನ್ನ ಎತ್ತರವನ್ನು ಐದು ಇಂಚುಗಳಷ್ಟು ಹೆಚ್ಚಿಸಿಕೊಳ್ಳಲು ಎರಡು ಕಾಲುಗಳನ್ನು ಉದ್ದಗೊಳಿಸುವ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದು, ಇದಕ್ಕಾಗಿ ಆತ ಬರೊಬ್ಬರಿ  $1,70,000 (ರೂ. 1.35 ಕೋಟಿ) ವೆಚ್ಚ ಮಾಡಿದ್ದಾನೆ.
ಶಸ್ತ್ರಚಿಕಿತ್ಸೆಗೆ ಒಳಗಾದ ಗಿಬ್ಸನ್
ಶಸ್ತ್ರಚಿಕಿತ್ಸೆಗೆ ಒಳಗಾದ ಗಿಬ್ಸನ್
Updated on

ವಾಷಿಂಗ್ಟನ್: ಗರ್ಲ್ ಫ್ರೆಂಡ್ ಪಡೆಯಲು ಅಮೆರಿಕದ ಮಿನ್ನೇಸೋಟದ ವ್ಯಕ್ತಿಯೊಬ್ಬ ತನ್ನ ಎತ್ತರವನ್ನು ಐದು ಇಂಚುಗಳಷ್ಟು ಹೆಚ್ಚಿಸಿಕೊಳ್ಳಲು ಎರಡು ಕಾಲುಗಳನ್ನು ಉದ್ದಗೊಳಿಸುವ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದು, ಇದಕ್ಕಾಗಿ ಆತ ಬರೊಬ್ಬರಿ  $1,70,000 (ರೂ. 1.35 ಕೋಟಿ) ವೆಚ್ಚ ಮಾಡಿದ್ದಾನೆ.

41 ವರ್ಷದ ಮತ್ತು 5.5 ಅಡಿ ಎತ್ತರದ ಮೋಸೆಸ್ ಗಿಬ್ಸನ್ ತನ್ನ ಕಡಿಮೆ ಎತ್ತರದಿಂದಾಗಿಯೇ ಗರ್ಲ್ ಫ್ರೆಂಡ್ ಪಡೆಯಲು ವಿಫಲನಾಗಿದ್ದ. ಇದೇ ಕಾರಣಕ್ಕಾಗಿ ಆತ ತನ್ನ ಎತ್ತರವನ್ನು 5 ಇಂಚಿ ಹೆಚ್ಚಿಸಿಕೊಳ್ಳ ಬಯಸಿದ್ದ. ಇದಕ್ಕಾಗಿ ಆತ ಅಮೆರಿಕ ಪಾರಂಪರಿಕ ವೈದ್ಯ ಸೇರಿದಂತೆ ಹಲವರನ್ನು ಸಂಪರ್ಕಿಸಿದ್ದ. ಈ ವೇಳೆ ಆತನೊಂದಿಗೆ ಚರ್ಚಿಸಿದ್ದ ವೈದ್ಯರು ಆತನ ಬಯಕೆಗೆ ಅನುಗುಣವಾಗಿ ಆತನ ಎತ್ತರ ಹೆಚ್ಚಿಸಲು ಚಿಕಿತ್ಸೆ ನೀಡಿದರು. ಮಾತ್ರೆ ಚಿಕಿತ್ಸೆಯಿಂದ ಆತನ ಎತ್ತರ ಸಾಧ್ಯವಾಗಲಿಲ್ಲ. 

ಹೀಗಾಗಿ ಅಂತಿಮವಾಗಿ ವೈದ್ಯರು  ಒಂದು ದುಬಾರಿ ಶಸ್ತ್ರ ಚಿಕಿತ್ಸೆ ಹೇಳಿದ್ದರು. ಅದರಂತೆ ಆತ ಕೂಡ ಆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಒಪ್ಪಿಗೆ ನೀಡಿದ್ದ. ಆದರೆ ಇದಕ್ಕಾಗಿ ಸುಮಾರು 75,000 ಡಾಲರ್ ವೆಚ್ಚವಾಗುತ್ತದೆ ಎಂದು ಹೇಳಿದ್ದಾರೆ. ಅದರಂತೆ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಗಿಬ್ಸನ್ ಪಾರ್ಟ್ ಟೈಮ್ ನಲ್ಲಿ ಉಬರ್ ಚಾಲಕನಾಗಿ ಕೆಲಸ ಮಾಡಿ ಮೂರು ವರ್ಷಗಳ ಅವಧಿಯಲ್ಲಿ 75 ಸಾವಿರ ಡಾಲರ್ ಹಣ ಹೊಂದಿಸಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾನೆ. ಶಸ್ತ್ರಚಿಕಿತ್ಸೆ ಕೂಡ ಯಶಸ್ವಿಯಾಗಿದ್ದು ಇನ್ನು ಕೆಲವು ದಿನಗಳ ಅಂತರದಲ್ಲಿ ಆತ ಸಾಮಾನ್ಯನಂತೆ ಓಡಾಡುತ್ತಾನೆ ಎಂದು ವೈದ್ಯರು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಗಿಬ್ಸನ್, ಗರ್ಲ್ ಫ್ರೆಂಡ್ ವಿಚಾರವಾಗಿ ನಾನು ಅದೃಷ್ಟವಂತನಲ್ಲ. ನನ್ನ ಎತ್ತರದ ಕಾರಣದಿಂದಾಗಿಯೇ ಹಲವರು ನನ್ನ ತೊರೆದರು. ನನ್ನ ಆತ್ಮವಿಶ್ವಾಸ ಕುಂದಿಹೋಗಿ ನನ್ನ ಡೇಟಿಂಗ್ ಜೀವನದ ಮೇಲೆ ಪರಿಣಾಮ ಬೀರಿತು. ನಾನು ಎತ್ತರ ಕಾಣಲು ನನ್ನ ಶೂಗಳಲ್ಲಿ ವಸ್ತುಗಳನ್ನು ಹಾಕುತ್ತಿದೆ. ಅದು ಅಷ್ಟು ಪರಿಣಾಮಕಾರಿಯಾಗಿರಲಿಲ್ಲ.  ಹೀಗಾಗಿ ಶಸ್ತ್ರಚಿಕಿತ್ಸೆಗೆ ಒಳಗಾದೆ ಎಂದು ಹೇಳಿದ್ದಾರೆ.

ಗಿಬ್ಸನ್ ಗೆ ಇದು 2ನೇ ಶಸ್ತ್ಪ ಚಿಕಿತ್ಸೆ
ಇನ್ನು ಗಿಬ್ಸನ್ 2016ರಲ್ಲಿ ಮೊದಲ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಸುಮಾರು 3 ಇಂಚು ಉದ್ದವಾಗಿದ್ದರು. ಇದೀಗ ಮತ್ತೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಮತ್ತೆ ಎತ್ತರ ಹೆಚ್ಚಿಸಿಕೊಳ್ಳುವ ವಿಶ್ವಾಸಹೊಂದಿದ್ದಾರೆ. 'ಮೊದಲ ಶಸ್ತ್ರ ಚಿಕಿತ್ಸೆ ಬಳಿಕ ನನ್ನ ಎತ್ತರ ಕೊಂಚ ಹೆಚ್ಚಾಗಿತ್ತು, ಅದರಿಂದ ನಾನು ಸ್ವಲ್ಪ ಮಟ್ಟಿಗೆ ಸಂತೋಷಪಟ್ಟಿದ್ದೇನೆ, ಆದರೆ ಅದನ್ನು ಪೂರ್ಣಗೊಳಿಸಲು ಎರಡನೆಯದನ್ನು ಮಾಡಬೇಕೆಂದು ನಾನು ಯಾವಾಗಲೂ ನನ್ನ ಮನಸ್ಸಿನಲ್ಲಿತ್ತು. ಈಗ ನನ್ನ ಬಳಿ ಹಣವಿದೆ ಮತ್ತು ನಾನು ನನ್ನ ಪ್ರಯಾಣವನ್ನು ಮುಗಿಸುತ್ತೇನೆ ಎಂದು ಹೇಳಿದ್ದಾರೆ.

ಇದೇ ಮಾರ್ಚ್ ನಲ್ಲಿ ಗಿಬ್ಸನ್ ಸುಮಾರು $98,000 ವ್ಯಯಿಸಿ 2ನೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಇದೀಗ ನನ್ನ ಎತ್ತರ 5.10ಕ್ಕೆ ಏರಿಕೆಯಾಗಿದ್ದು, ಇದರಿಂದ ನಾನು ತುಂಬಾ ಸಂತಸದಿಂದ್ದೇನೆ. ಈ ಎತ್ತರವನ್ನು 5.11 ಹೆಚ್ಚಿಸಲು ಅವಕಾಶವಿದ್ದರೆ ನಾನು ಇನ್ನೂ ಖುಷಿ ಪಡುತ್ತೇನೆ ಎಂದು ಗಿಬ್ಸನ್ ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com