ಅಮೆರಿಕ ಮೇಲೆ ಬೇಹುಗಾರಿಕೆ ಆರೋಪ: ವರದಿಯ ಸತ್ಯಾಸತ್ಯತೆ ಪರಿಶೀಲಿಸಲಾಗುತ್ತಿದೆ ಎಂದ ಚೀನಾ

ಅಮೆರಿಕಾದ ವಾಯವ್ಯ ಪ್ರದೇಶದಲ್ಲಿ ಬಲೂನ್ ಹಾರಿಸಿ ಬೇಹುಗಾರಿಕೆ ನಡೆಸುತ್ತಿದೆ ಎಂಬ ಅಮೆರಿಕ ಆರೋಪ ಬಂದ ಬೆನ್ನಲ್ಲೇ, ಪತ್ತೇದಾರಿ ಬಲೂನ್ ಹಾರಿಸಿದೆ ಎಂಬ ಹೇಳಿಕೆ  ಬೆನ್ನಲ್ಲೇ ಪರಿಶೀಲಿಸುತ್ತೇವೆ ಎಂದು ಚೀನಾ ಹೇಳಿದೆ
ಅಮೆರಿಕದಲ್ಲಿ ಕಂಡುಬಂದ ಬಲೂನ್
ಅಮೆರಿಕದಲ್ಲಿ ಕಂಡುಬಂದ ಬಲೂನ್

ಬೀಜಿಂಗ್: ಅಮೆರಿಕಾದ ವಾಯವ್ಯ ಪ್ರದೇಶದಲ್ಲಿ ಬಲೂನ್ ಹಾರಿಸಿ ಬೇಹುಗಾರಿಕೆ ನಡೆಸುತ್ತಿದೆ ಎಂಬ ಅಮೆರಿಕ ಆರೋಪ ಬಂದ ಬೆನ್ನಲ್ಲೇ, ಪತ್ತೇದಾರಿ ಬಲೂನ್ ಹಾರಿಸಿದೆ ಎಂಬ ಹೇಳಿಕೆ ಬೆನ್ನಲ್ಲೇ ಪರಿಶೀಲಿಸುತ್ತೇವೆ ಎಂದು ಚೀನಾ ಹೇಳಿದೆ 

ಅಮೆರಿಕದ ಉನ್ನತ ರಾಜತಾಂತ್ರಿಕ ಆಂಟೋನಿ ಬ್ಲಿಂಕೆನ್ ಅವರು ಬೀಜಿಂಗ್‌ಗೆ ಅಪರೂಪದ ಭೇಟಿ ನೀಡುವ ಕೆಲವೇ ದಿನಗಳ ಮೊದಲು ಉಭಯ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚಾಗಿದ್ದು, ವಾಯುವ್ಯ ಯುನೈಟೆಡ್ ಸ್ಟೇಟ್ಸ್‌ನ ಮೇಲೆ ಹಾರುತ್ತಿರುವ ಚೀನಾದ ಪತ್ತೇದಾರಿ ಬಲೂನ್ ಅನ್ನು ಪತ್ತೆಹಚ್ಚಲಾಗುತ್ತಿದೆ ಎಂದು ಅಮೆರಿಕ ಹೇಳಿತ್ತು. 

ವರದಿಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್ ನಿಯಮಿತ ಬ್ರೀಫಿಂಗ್‌ಗೆ ಹೇಳಿದ್ದಾರೆ. ಸತ್ಯಗಳು ಸ್ಪಷ್ಟವಾಗುವವರೆಗೆ, ಊಹೆಗಳನ್ನು ಮಾಡುವುದು ಮತ್ತು ಸಮಸ್ಯೆಯನ್ನು ಪ್ರಚೋದಿಸುವುದು ಸರಿಯಲ್ಲ ಎಂದು ಕೂಡ ಹೇಳಿದ್ದಾರೆ.

ಚೀನಾ ಜವಾಬ್ದಾರಿಯುತ ದೇಶವಾಗಿದೆ, ಯಾವಾಗಲೂ ಅಂತಾರಾಷ್ಟ್ರೀಯ ಕಾನೂನಿಗೆ ಕಟ್ಟುನಿಟ್ಟಾಗಿ ಬದ್ಧವಾಗಿದೆ. ಯಾವುದೇ ಸಾರ್ವಭೌಮ ರಾಷ್ಟ್ರದ ಭೂಪ್ರದೇಶ ಅಥವಾ ವಾಯುಪ್ರದೇಶವನ್ನು ಉಲ್ಲಂಘಿಸುವ ಉದ್ದೇಶ ನಮಗಿಲ್ಲ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com