ಪಾಕಿಸ್ತಾನ: ಇಸ್ಲಾಮಾಬಾದ್‌ನ ಪಾರ್ಕ್‌ನಲ್ಲಿ ಯುವತಿ ಮೇಲೆ ಅತ್ಯಾಚಾರ ನಡೆಸಿದ ಶಸ್ತ್ರಸಜ್ಜಿತ ವ್ಯಕ್ತಿಗಳು
ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಇಸ್ಲಾಮಾಬಾದ್‌ನ ಎಫ್-9 ಪ್ರದೇಶದಲ್ಲಿ ಬಂದೂಕು ತೋರಿಸಿ ಯುವತಿ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
Published: 05th February 2023 11:58 AM | Last Updated: 05th February 2023 11:58 AM | A+A A-

ಸಾಂದರ್ಭಿಕ ಚಿತ್ರ
ಇಸ್ಲಾಮಾಬಾದ್: ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಇಸ್ಲಾಮಾಬಾದ್‌ನ ಎಫ್-9 ಪ್ರದೇಶದಲ್ಲಿ ಬಂದೂಕು ತೋರಿಸಿ ಯುವತಿ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಗುರುವಾರ ರಾತ್ರಿ ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಎಫ್-9 ಪಾರ್ಕ್‌ನಲ್ಲಿದ್ದ ಸಂತ್ರಸ್ತೆಯ ಮೇಲೆ ಕೃತ್ಯ ಎಸಗಿದ್ದಾರೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.
ಎಫ್‌ಐಆರ್ ಪ್ರಕಾರ, ಬಂದೂಕು ಹಿಡಿದಿದ್ದ ದುಷ್ಕರ್ಮಿಗಳು ಗನ್‌ಪಾಯಿಂಟ್‌ನಲ್ಲಿ ಯುವತಿಯನ್ನು ಹತ್ತಿರದ ಪೊದೆಗೆ ಕರೆದೊಯ್ದಿದ್ದಾರೆ. ಯುವತಿ ತನ್ನನ್ನು ಬಿಡುವಂತೆ ಮನವಿ ಮಾಡಿದಾಗ ದಾಳಿಕೋರರು ಆಕೆಯನ್ನು ಥಳಿಸಿದ್ದಾರೆ. ಸಂತ್ರಸ್ತೆ ಧ್ವನಿ ಎತ್ತಲು ಪ್ರಯತ್ನಿಸಿದಾಗ ದಾಳಿಕೋರರು ಹೊಡೆದಿದ್ದಾರೆ ಮತ್ತು ಬೆದರಿಕೆಯೊಡ್ಡಿದ್ದಾರೆ. ಅಲ್ಲದೆ, ತಮ್ಮ ಸ್ನೇಹಿತರನ್ನೂ ಅಲ್ಲಿಗೆ ಕರೆಸಿಕೊಂಡಿದ್ದಾರೆ. ಆಕೆಯ ಓಡಿಹೋಗುವ ಪ್ರಯತ್ನವನ್ನೂ ವಿಫಲಗೊಳಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.
ಅಲ್ಲಿಂದ ತೆರಳಲು ಮುಂದಾದ ಆರೋಪಿಗಳು 'ನನ್ನ ಎಲ್ಲಾ ವಸ್ತುಗಳನ್ನು ಹಿಂದಿರುಗಿಸಿದರು ಮತ್ತು ಸುಮ್ಮನಿರಲು ನನಗೆ 1,000 ರೂಗಳನ್ನು ನೀಡಿದರು ಮತ್ತು ರಾತ್ರಿಯ ಸಮಯದಲ್ಲಿ ಉದ್ಯಾನದಲ್ಲಿ ಇರಬಾರದು ಎಂದು ಸಂತ್ರಸ್ತೆಗೆ ಹೇಳಿದರು ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.
ಮಹಿಳೆಯ ಫೋರೆನ್ಸಿಕ್ ತಪಾಸಣೆಯು 24 ವರ್ಷದ ಸಂತ್ರಸ್ತೆಯ ದೇಹದಲ್ಲಿ ಲೈಂಗಿಕ ದೌರ್ಜನ್ಯದ ಗುರುತುಗಳು ಕಂಡುಬಂದಿವೆ ಎಂದು ದೃಢಪಡಿಸಿದೆ.
ಈ ಸುದ್ದಿ ಹರಡುತ್ತಿದ್ದಂತೆ, ದೇಶದ ರಾಜಧಾನಿಯಲ್ಲಿ ನಡೆದ ಘಟನೆ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಟ್ವಿಟರ್‌ನಲ್ಲಿ ಈ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಓರ್ವ ಟ್ವಿಟರ್ ಬಳಕೆದಾರರು, 'ಇಸ್ಲಾಮಾಬಾದ್‌ನಲ್ಲಿ ನಡೆದದ್ದು ಹೇಯ ಘಟನೆ. ಎಫ್9 ಪಾರ್ಕ್‌ನಲ್ಲಿ ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಯುವತಿ ಮೇಲೆ ಅತ್ಯಾಚಾರವೆಸಗಿದ್ದಾರೆ. ಅಲ್ಲದೆ, ಅತ್ಯಾಚಾರದ ನಂತರ ಸಂಜೆ ವೇಳೆ ಪಾರ್ಕ್‌ನಲ್ಲಿ ಇರಬೇಡಿ ಎಂದಿದ್ದಾರೆ. ಪಾಕಿಸ್ತಾನ ಯಾವ ದೇಶವಾಗಿದೆ? ಶಸ್ತ್ರಸಜ್ಜಿತರು ಪಾರ್ಕ್‌ಗೆ ಹೇಗೆ ಪ್ರವೇಶಿಸಿದರು ಮತ್ತು ಏಕೆ ಯಾವುದೇ ಪೊಲೀಸ್ ಸಿಬ್ಬಂದಿ ಅವರನ್ನು ಹಿಡಿಯಲಿಲ್ಲವೇ? ದಯವಿಟ್ಟು ಅವರನ್ನು ಹುಡುಕಿ ಮತ್ತು ಬಂಧಿಸಿ' ಎಂದಿರುವುದಾಗಿ ಜಿಯೋ ನ್ಯೂಸ್ ವರದಿ ಮಾಡಿದೆ.