
ಚೀನಾ
ಬೀಜಿಂಗ್: ರಷ್ಯಾ- ಉಕ್ರೇನ್ ಕದನ ವಿರಾಮಕ್ಕೆ, ಶಾಂತಿ ಮಾತುಕತೆಗೆ ಚೀನಾ ಕರೆ ನೀಡಿದೆ.
ರಷ್ಯಾದೊಂದಿಗೆ ಚೀನಾದ ನಿಕಟ ಸಂಬಂಧದ ವಿರುದ್ಧ ಎಚ್ಚರಿಕೆ ನೀಡಿರುವ ಚೀನಾದ ಶಾಂತಿ ಮಾತುಕತೆಯ ಕರೆಯನ್ನು ಪಶ್ಚಿಮದ ರಾಷ್ಟ್ರಗಳು ತಿರಸ್ಕರಿಸಿವೆ
12 ಅಂಶಗಳನ್ನೊಳಗೊಂಡ ಪತ್ರದಲ್ಲಿ ರಾಜಕೀಯ ಸಂಧಾನಕ್ಕೆ ಕರೆ ನೀಡಲಾಗಿದ್ದು, ಚೀನಾ ರಷ್ಯಾಕ್ಕೆ ಶಸ್ತ್ರಾಸ್ತ್ರ ನೀಡಲು ಯೋಚಿಸುತ್ತಿದೆ ಎಂಬ ಪಶ್ಚಿಮದ ಆರೋಪಗಳನ್ನು ಚೀನಾ ನಿರಾಕರಿಸಿದೆ. ಚೀನಾ ಇದೇ ವೇಳೆ ಅಣ್ವಸ್ತ್ರ ಬಳಕೆಯ ವಿರುದ್ಧವೂ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ. ಇತ್ತೀಚೆಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅಣ್ವಸ್ತ್ರ ಬಳಕೆ ಬಗ್ಗೆ ಮಾತನಾಡಿದ್ದರು.
ಇದನ್ನೂ ಓದಿ: ರಷ್ಯಾ-ಉಕ್ರೇನ್ 'ಬಿಕ್ಕಟ್ಟೇ' ಅಥವಾ 'ಯುದ್ಧ ವೇ? ಏನನ್ನಬೇಕು! ಜಿ-20 ನಾಯಕರ ಚರ್ಚೆ
ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿರುವ ರಷ್ಯಾದ ಬೆಂಬಲಕ್ಕೆ ನಿಂತರೆ ನಿರ್ಬಂಧ ಎದುರಿಸಬೇಕಾಗುತ್ತದೆ ಎಂದು ಅಮೇರಿಕಾ ಚೀನಾಗೆ ಎಚ್ಚರಿಕೆ ನೀಡಿತ್ತು.