ಶೆಹಬಾಜ್-ಭುಟ್ಟೋ ಬೇಡ.. ಇಮ್ರಾನ್ ಖಾನ್ ಅಂತೂ ಬೇಡ್ವೇ ಬೇಡ: ಮೋದಿ ಭಾರತ ಬೇಕು: ಪಾಕ್ ಪ್ರಜೆಯ ಹೇಳಿಕೆ ವೈರಲ್
ಆರ್ಥಿಕ ಸಂಕಷ್ಟದಿಂದ ನಲುಗುತ್ತಿರುವ ಪಾಕಿಸ್ತಾನದಲ್ಲಿ ಸರ್ಕಾರದ ವಿರುದ್ಧ ಅಲ್ಲಿನ ಪ್ರಜೆಗಳು ತಿರುಗಿ ಬೀಳುತ್ತಿದ್ದು, ನಮಗೆ ಭಾರತದಲ್ಲಿರುವಂತೆ ಉತ್ತಮ ಆಡಳಿತ ಬೇಕು ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ.
Published: 25th February 2023 06:51 PM | Last Updated: 25th February 2023 07:42 PM | A+A A-

ಪಾಕ್ ಪ್ರಜೆಯ ಹೇಳಿಕೆ
ನವದೆಹಲಿ: ಆರ್ಥಿಕ ಸಂಕಷ್ಟದಿಂದ ನಲುಗುತ್ತಿರುವ ಪಾಕಿಸ್ತಾನದಲ್ಲಿ ಸರ್ಕಾರದ ವಿರುದ್ಧ ಅಲ್ಲಿನ ಪ್ರಜೆಗಳು ತಿರುಗಿ ಬೀಳುತ್ತಿದ್ದು, ನಮಗೆ ಭಾರತದಲ್ಲಿರುವಂತೆ ಉತ್ತಮ ಆಡಳಿತ ಬೇಕು ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ.
ಪಾಕಿಸ್ತಾನದ ಖ್ಯಾತ ಯೂಟ್ಯೂಬರ್ ಸನಾ ಅಮ್ಜದ್ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಪಾಕಿಸ್ತಾನದ ಪ್ರಜೆಯೋರ್ವ ನಮಗೆ ಶೆಹಬಾಜ್ ಷರೀಫ್, ಭುಟ್ಟೋ, ಇಮ್ರಾನ್ ಖಾನ್ ಬೇಡ, ಪ್ರಧಾನಿ ನರೇಂದ್ರ ಮೋದಿ ಬೇಕು ಎಂದು ಹೇಳಿದ್ದಾರೆ.
ಪಾಕಿಸ್ತಾನವು ಭಾರತದಿಂದ ವಿಭಜನೆಯಾಗದೆ ಉಳಿದಿದ್ದರೆ, ತನ್ನ ದೇಶದ ಜನರು ಅಗತ್ಯ ವಸ್ತುಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿ ಮಾಡಲು ಮತ್ತು ತಮ್ಮ ಮಕ್ಕಳಿಗೆ ಪ್ರತಿ ರಾತ್ರಿಯೂ ಆಹಾರ ನೀಡಲು ಸಾಧ್ಯವಾಗುತ್ತಿತ್ತು. ಭಾರತದಿಂದ ಪಾಕಿಸ್ತಾನ ಬೇರ್ಪಡಬಾರದಿತ್ತು.
ಇದನ್ನೂ ಓದಿ: ಮುಂಬೈ ದಾಳಿಕೋರರು ಪಾಕ್‌ನಲ್ಲಿ ಓಡಾಡಿಕೊಂಡಿದ್ದಾರೆ ಎಂದಿದ್ದ ಜಾವೇದ್ ಅಖ್ತರ್ ವಿರುದ್ಧ ಪಾಕಿಸ್ತಾನದಲ್ಲಿ ಟೀಕೆ
ಪಾಕಿಸ್ತಾನದಲ್ಲಿ ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು ಈ ಕುರಿತು ಸನಾ ಅಮ್ಜದ್ ಕೇಳಿದೆ ಪ್ರಶ್ನೆಗೆ ಉತ್ತರಿಸಿದ ಪಾಕ್ ಪ್ರಜೆ, ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆಗಳು ಏರಿಕೆಯಾಗುತ್ತಿವೆ. ಹಾಲು, ಪೆಟ್ರೋಲ್, ಮಾಂಸ ಸೇರಿದಂತೆ ತರಕಾರಿ ಬೆಲೆಗಳು ಗಗನಕ್ಕೇರಿವೆ, ಇಲ್ಲಿ ಜೀವನ ನಡೆಸುವುದು ಕಷ್ಟವಾಗಿದೆ ಎಂದು ಹೇಳಿದ್ದಾರೆ.
1947ರಲ್ಲಿ ಭಾರತದಿಂದ ಪಾಕಿಸ್ತಾನ ಬೇರೆಯಾಗದಿದ್ದರೇ, ನಾವು ಕೂಡ ಇಂದು 20 ರೂಗೆ ಟೊಮೊಟೊ, 150ರೂ ಕೋಳಿ ಮಾಂಸ, 30ರೂಗೆ ಹಾಲು ಮತ್ತು 100 ರೂಗೆ ಪೆಟ್ರೋಲ್ ಖರೀದಿಸಬಹುದಿತ್ತು ಎಂದು ಹೇಳಿದ್ದಾರೆ.
ಅಂತೆಯೇ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಎಲ್ಲರೂ ಗೌರವಿಸುತ್ತಾರೆ, ಅವರು ಕೂಡ ನಮ್ಮ ದೇಶಕ್ಕೆ ಪ್ರಧಾನಿಯಾಗಲಿ ಎಂದು ಮನವಿ ಮಾಡುತ್ತೇನೆ.
ಇದನ್ನೂ ಓದಿ: ಪಾಕಿಸ್ತಾನ ಈಗಾಗಲೇ ದಿವಾಳಿಯಾಗಿದೆ: ರಕ್ಷಣಾ ಸಚಿವರ ಘೋಷಣೆ
ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆ ಭಾರತ ಮಾತ್ರವಲ್ಲದೇ ಪಾಕಿಸ್ತಾನದಲ್ಲಿ ಪರ ಮತ್ತು ವಿರೋಧದ ಚರ್ಚೆಗಳು ನಡೆಯುತ್ತಿವೆ.
ಇನ್ನು ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಈರುಳ್ಳಿ 220ರೂಗೆ, ಪೆಟ್ರೋಲ್ 280ರೂ, ಚಿಕನ್ ಬೆಲೆ 385 ರೂಗೆ ಏರಿಕೆಯಾಗಿದೆ. ಗೋದಿ ಹಿಟ್ಟಿನ ಬೆಲೆ ಕೂಡ ಗಗನಕ್ಕೇರಿದ್ದು, ಗೋದಿ-ಮೈದಾ ಹಿಟ್ಟಿನ ಅಭಾವ ಪಾಕ್ ಪ್ರಜೆಗಳನ್ನು ಹೈರಾಣಾಗಿಸಿದೆ.