ಚೀನಾದಲ್ಲಿ ಒಂದು ತಿಂಗಳಲ್ಲಿ ಸುಮಾರು 60,000 ಮಂದಿ ಕೋವಿಡ್ ಗೆ ಬಲಿ

ಕೋವಿಡ್ ಸಾಂಕ್ರಾಮಿಕ ರೋಗದ ಸ್ಥಿತಿಯ ಬಗ್ಗೆ ಅಂಕಿಅಂಶ ಬಿಡುಗಡೆ ಮಾಡಲು ಚೀನಾ ಸರ್ಕಾರ ವಿಫಲವಾಗಿದೆ ಎಂಬ ದೂರುಗಳ ಬೆನ್ನಲ್ಲೇ ಡಿಸೆಂಬರ್ ಆರಂಭದಿಂದ ಇಲ್ಲಿವರೆಗೆ ಸುಮಾರು 60,000 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೀಜಿಂಗ್: ಕೋವಿಡ್ ಸಾಂಕ್ರಾಮಿಕ ರೋಗದ ಸ್ಥಿತಿಯ ಬಗ್ಗೆ ಅಂಕಿಅಂಶ ಬಿಡುಗಡೆ ಮಾಡಲು ಚೀನಾ ಸರ್ಕಾರ ವಿಫಲವಾಗಿದೆ ಎಂಬ ದೂರುಗಳ ಬೆನ್ನಲ್ಲೇ ಡಿಸೆಂಬರ್ ಆರಂಭದಿಂದ ಇಲ್ಲಿವರೆಗೆ ಸುಮಾರು 60,000 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ ಎಂದು ಶನಿವಾರ ವರದಿಯಾಗಿದೆ.

ಕೋವಿಡ್ ನಿಂದ ಉಂಟಾದ ಉಸಿರಾಟದ ಸಮಸ್ಯೆಯಿಂದ 5,503 ಸಾವುಗಳು ಮತ್ತು ಕೋವಿಡ್ ನೊಂದಿಗೆ ಇತರ ಕಾಯಿಲೆಗಳಿಂದ ಬಳಲುತ್ತಿದ್ದ 54,435 ಸಾವುಗಳು ವರದಿಯಾಗಿವೆ.

ಈ ಎಲ್ಲಾ ಸಾವುಗಳು ಆಸ್ಪತ್ರೆಗಳಲ್ಲಿ ಸಂಭವಿಸಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಹೇಳಿದೆ. ಅಲ್ಲದೆ ಕೋವಿಡ್ ನಿಂದ ಇನ್ನೂ ಹೆಚ್ಚಿನ ಜನ ಮನೆಯಲ್ಲಿ ಸಾವನ್ನಪ್ಪಿರುವ ಸಾಧ್ಯತೆ ಇದೆ.

ಸಾವನ್ನಪ್ಪಿದವರ ಸರಾಸರಿ ವಯಸ್ಸು 80.3 ವರ್ಷಗಳಾಗಿದ್ದು, ಸಾವನ್ನಪ್ಪಿದವರಲ್ಲಿ ಶೇ. 90 ರಷ್ಟು ಜನ 65 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಎಂದು ಹಾಂಗ್ ಕಾಂಗ್ ಮೂಲದ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

ಪ್ರಸ್ತುತ ದೇಶವನ್ನು ವ್ಯಾಪಿಸುತ್ತಿರುವ ಕೋವಿಡ್ ಸೋಂಕಿನಿಂದ ಸಂಭವಿಸುತ್ತಿರುವ ಸಾವುಗಳ ಸಂಖ್ಯೆಯನ್ನು ಚೀನಾ "ಹೆಚ್ಚು ಕಡಿಮೆ ವರದಿ ಮಾಡುತ್ತಿದೆ" ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಬುಧವಾರ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com