ಮನೆಗೆ ನುಗ್ಗಿದ ಬಂದೂಕುಧಾರಿಗಳಿಂದ ಶೂಟೌಟ್: 6 ತಿಂಗಳ ಮಗು ಸೇರಿದಂತೆ ಆರು ಜನರ ಹತ್ಯೆ

ತುಲಾರೆ ಕೌಂಟಿಯ ಮನೆಯೊಂದಕ್ಕೆ ನುಗ್ಗಿದ ಇಬ್ಬರು ಬಂದೂಕುಧಾರಿಗಳು, 17 ವರ್ಷದ ತಾಯಿ ಮತ್ತು ಅವರ 6 ತಿಂಗಳ ಮಗು ಸೇರಿದಂತೆ ಮನೆಯಲ್ಲಿದ್ದ ಆರು ಜನರನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕ್ಯಾಲಿಫೋರ್ನಿಯಾ: ಗೋಶನ್ ನಗರದ ಮನೆಯೊಂದಕ್ಕೆ ನುಗ್ಗಿದ ಇಬ್ಬರು ಬಂದೂಕುಧಾರಿಗಳು, 17 ವರ್ಷದ ತಾಯಿ ಮತ್ತು ಅವರ 6 ತಿಂಗಳ ಮಗು ಸೇರಿದಂತೆ ಮನೆಯಲ್ಲಿದ್ದ ಆರು ಜನರನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗುಂಡಿನ ಸದ್ದು ಕೇಳಿದ ಸ್ಥಳೀಯರೊಬ್ಬರು ನಮಗೆ ದೂರು ನೀಡಿದ್ದರು. ಸೋಮವಾರ ಮುಂಜಾನೆ 4 ಗಂಟೆಗೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿದಾಗ ತನ್ನ ತೋಳಿನಲ್ಲಿ ಮಗು ಎತ್ತಿಕೊಂಡಿದ್ದ ತಾಯಿಯನ್ನು ಹತ್ಯೆ ಮಾಡಿ ಮನೆಯ ಹೊರಗೆ ಶವ ಎಸೆಯಲಾಗಿತ್ತು. ಇಬ್ಬರ ತಲೆಗೂ ಗುಂಡೇಟು ತಗುಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಯಿ, ಮಗುವಿನ ಶವ ಮನೆಯ ಬಾಗಿಲಿನಲ್ಲಿತ್ತು. ಮಹಿಳೆ ಸೇರಿದಂತೆ ಇನ್ನೂ ಮೂವರು ಮನೆಯ ಒಳಗಿದ್ದರು. ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಒಬ್ಬರು ಮಾತ್ರ ಆಸ್ಪತ್ರೆಗೆ ಕರೆದೊಯ್ದ ನಂತರ ಸಾವಿಗೀಡಾಗಿದ್ದಾರೆ. ಮನೆಯಲ್ಲಿದ್ದ ಮತ್ತಿಬ್ಬರು ಮಹಿಳೆಯರು ಹತ್ತಿರದ ಸ್ಥಳದಲ್ಲಿ ಅಡಗಿಕೊಂಡು ದಾಳಿಯಿಂದ ಬದುಕುಳಿದಿದ್ದಾರೆ ಎಂದು ಅವರು ತಿಳಿಸಿದ್ದಾರೆ.‌

ಇಬ್ಬರು ಬಲಿಪಶುಗಳು ರಸ್ತೆಯಲ್ಲಿ ಬಿದ್ದಿದ್ದರು. ಇನ್ನೊಬ್ಬರಿಗೆ ಮನೆಯ ದ್ವಾರದಲ್ಲಿ ಗುಂಡು ಹಾರಿಸಲಾಗಿದೆ ಹಾಗೂ ಇನ್ನು ಮೂವರು ಬಲಿಪಶುಗಳು ಮನೆಯೊಳಗೆ ಬಿದ್ದಿದ್ದರು. ಬಳಿಕ ಆಸ್ಪತ್ರೆಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com