
ಎಡವಿ ಬಿದ್ದ ಅಮೆರಿಕಾ ಅಧ್ಯಕ್ಷರನ್ನು ಮೇಲಕ್ಕೆತ್ತಿದ ಭದ್ರತಾ ಪಡೆಗಳು.
ವಾಷಿಂಗ್ಟನ್: ಅಮೆರಿಕದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವೇದಿಕೆಯ ಮೇಲೆ ಅಮೆರಿಕಾ ಅಧ್ಯಕ್ಷ ಎಡವಿ ಬಿದ್ದಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಯುಎಸ್ ಏರ್‌ಫೋರ್ಸ್ ಅಕಾಡೆಮಿ ಪದವಿ ಸಮಾರಂಭದಲ್ಲಿ ವೇದಿಕೆಯ ಮೇಲೆ ಜೋ ಬೈಡನ್ ಅವರು ಮುಗ್ಗರಿಸಿ ಬಿದ್ದಿದ್ದಾರೆ.
90 ನಿಮಿಷಗಳ ಕಾಲ ಕೆಡೆಟ್‌ಗಳನ್ನು ಅಭಿನಂದಿಸಿ ಪ್ರಮಾಣಪತ್ರಗಳನ್ನು ವಿತರಿಸಿದ ನಂತರ ಅವರು ತಮ್ಮ ಆಸನಕ್ಕೆ ತೆರಳುತ್ತಿದ್ದರು. ಆದರೆ, ಈ ವೇಳೆ ಸಮತೋಲನ ಕಳೆದುಕೊಂಡು ನೆಲಕ್ಕೆ ಬಿದ್ದಿದ್ದಾರೆ.
ಇದನ್ನೂ ಓದಿ: "ನಾನು ನಿಮ್ಮ ಆಟೋಗ್ರಾಫ್ ಪಡೆಯಬೇಕು...": ಮೋದಿಗೆ ಬೈಡನ್
80 ವರ್ಷ ವಯಸ್ಸಿನ ಬೈಡನ್ ದೇಶದ ಅತ್ಯಂತ ಹಿರಿಯ ಅಧ್ಯಕ್ಷರಾಗಿದ್ದುಸ ಕೆಡೆಟ್‌ನೊಂದಿಗೆ ಕೈಕುಲುಕಿದ ನಂತರ ಬೈಡನ್ ಕುಸಿದುಬಿದ್ದರು, ಯುಎಸ್ ಏರ್ ಫೋರ್ಸ್ ಅಕಾಡೆಮಿಯಲ್ಲಿ ಭಾಷಣ ಮಾಡಿದ ನಂತರ ಯುಎಸ್ ಅಧ್ಯಕ್ಷ ಜೋ ಬೈಡನ್ ಅವರು ಕೆಡೆಟ್‌ಗಳೊಂದಿಗೆ ಹಸ್ತಲಾಘವ ಮಾಡಿದರು. ಬಳಿಕ ತಮ್ಮ ಆಸನಕ್ಕೆ ತೆರಳುತ್ತಿದ್ದಾಗ ಎಡವಿ ಕೆಳಗೆ ಬಿದ್ದಿದ್ದಾರೆ. ಕೂಡಲೇ ಭದ್ರತಾ ಪಡೆಗಳು ಅವರನ್ನು ಮೇಲಕ್ಕೆತ್ತಿದರು. ಈ ವೇಳೆ ಭದ್ರತಾ ಪಡೆಗಳಿಗೆ ಬೆರಳು ತೋರಿ ಆ ವಸ್ತುವಿನಿಂದ ಕೆಳಗೆ ಬಿದ್ದಿರುವುದಾಗಿ ಹೇಳಿದರು. ವೇದಿಕೆಯ ಮೇಲೆ ಸಣ್ಣ ಕಪ್ಪು ಮರಳಿನ ಚೀಲವನ್ನು ಹಾಕಲಾಗಿತ್ತು. ಇದರಿಂದಲೇ ಮುಗ್ಗರಿಸಿ ಬಿದ್ದರು ಎಂದು ಹೇಳಲಾಗುತ್ತಿದೆ.
Joe Biden just had a really bad fall at the U.S. Air Force Academy graduation. Falling like this at his age is very serious. Democrats want us to trust him to be the President until Jan, 2029. If we’re being real we all know that’s insane. He’s in no condition to run. pic.twitter.com/wacE0bojb9
— Robby Starbuck (@robbystarbuck) June 1, 2023
80 ವರ್ಷದ ಬೈಡನ್ ದೇಶದ ಅತ್ಯಂತ ಹಿರಿಯ ಅಧ್ಯಕ್ಷರಾಗಿದ್ದು, ಈ ರೀತಿ ಮುಗ್ಗರಿಸಿ ಬೀಳುತ್ತಿರುವುದು ಇದೇ ಮೊದಲಲ್ಲ. 2020 ರಲ್ಲಿ, ಬಿಡೆನ್ ತನ್ನ ಸಾಕು ನಾಯಿಯೊಂದಿಗೆ ಆಟವಾಡುವಾಗ ಬಿದ್ದು ಕಾಲು ಮುರಿದುಕೊಂಡಿದ್ದರು.
ಅದಾದ ಬಳಿಕ ಏರ್‌ಫೋರ್ಸ್ ಒನ್ ವಿಮಾನ ಏರುವ ಸಂದರ್ಭದಲ್ಲಿ ಎಡವಿ ಬೀಳುವಂತಾದ ಘಟನೆ ನಡೆದಿತ್ತು. ಪೋಲೆಂಡ್ಗೆ ತೆರಳುವ ನಿಟ್ಟಿನಲ್ಲಿ ಬೈಡನ್ ವಿಮಾನವೇರುತ್ತಿದ್ದರು, ಅದರ ವಿಡಿಯೋ ವೈರಲ್ ಆಗಿತ್ತು.
ಇದನ್ನೂ ಓದಿ: ಜೂನ್ 22ರಂದು ಅಮೆರಿಕಾಗೆ ಪ್ರಧಾನಿ ಭೇಟಿ; ಮೋದಿಗೆ ಜೋ ಬೈಡನ್ ಆತಿಥ್ಯ: ಶ್ವೇತಭವನ
ಎರಡು ವಾರಗಳ ಅವಧಿಯಲ್ಲಿ ಅಮೆರಿಕ ಅಧ್ಯಕ್ಷರಿಗೆ ಲಾಸ್ಏಂಜಲೀಸ್ ವಿಮಾನ ನಿಲ್ದಾಣದಲ್ಲಿ ಈ ರೀತಿಯ ಅನುಭವ ಉಂಟಾಗಿತ್ತು.
ಈ ಘಟನೆಯ ಬಳಿಕ ಶ್ವೇತಭವನಕ್ಕೆ ಅವರು ತೆರಳಿದ್ದಾರೆ. "ಅಧ್ಯಕ್ಷರು ಚೆನ್ನಾಗಿದ್ದಾರೆ" ಎಂದು ಶ್ವೇತಭವನದ ಸಂವಹನ ನಿರ್ದೇಶಕ ಬೆನ್ ಲಾಬೋಲ್ಟ್ ಟ್ವೀಟ್ ಮಾಡಿದ್ದಾರೆ. ವೇದಿಕೆಯ ಮೇಲೆ ಸ್ಪೀಕರ್‌ಗಳು ಬಳಸುವ ಟೆಲಿಪ್ರೊಂಪ್ಟರ್ ಆಧಾರವಾಗಿ ಮರಳಿನ ಚೀಲವನ್ನು ಇರಿಸಲಾಗಿತ್ತು. ಅದು ತಾಗಿ ಎಡವಿದ್ದಾರೆ ಎಂದು ಅವರು ತಿಳಿಸಿದ್ದಾರೆ.