ಸೇನಾ ಪಡೆಗಳನ್ನು ತ್ವರಿತವಾಗಿ ಮೇಲ್ದರ್ಜೆಗೇರಿಸಲು ಷಿ ಜಿನ್ಪಿಂಗ್ ಕರೆ

ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ದೇಶದ ಸೇನಾ ಪಡೆಗಳನ್ನು ವಿಶ್ವದರ್ಜೆ ಮಾನದಂಡಗಳಿಗೆ ಮೇಲ್ದರ್ಜೆಗೆ ಏರಿಸಲು ಕರೆ ನೀಡಿದ್ದಾರೆ. 
ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್
ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್

ಬೀಜಿಂಗ್: ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ದೇಶದ ಸೇನಾ ಪಡೆಗಳನ್ನು ವಿಶ್ವದರ್ಜೆ ಮಾನದಂಡಗಳಿಗೆ ಮೇಲ್ದರ್ಜೆಗೆ ಏರಿಸಲು ಕರೆ ನೀಡಿದ್ದಾರೆ.
 
ಚೀನಾ- ಅಮೇರಿಕ ಸಂಘರ್ಷದ ಸಾಧ್ಯತೆಗಳು ಹೆಚ್ಚುತ್ತಿರುವುದರ ಬಗ್ಗೆ ಉನ್ನತ ಮಟ್ಟದ ರಾಜತಾಂತ್ರಿಕ ಅಧಿಕಾರಿಗಳು ಎಚ್ಚರಿಕೆ ನೀಡಿರುವ ಕೆಲವೇ ದಿನಗಳಲ್ಲಿ ಷಿ ಜಿನ್ಪಿಂಗ್ ತಮ್ಮ ಭಾಷಣದಲ್ಲಿ ಈ ಕರೆ ನೀಡಿದ್ದಾರೆ. 

ಕಾರ್ಯತಂತ್ರದ ಅಪಾಯಗಳನ್ನು ನಿಭಾಯಿಸಲು, ಕಾರ್ಯತಂತ್ರದ ಹಿತಾಸಕ್ತಿಗಳನ್ನು ಕಾಪಾಡಲು ಮತ್ತು ಕಾರ್ಯತಂತ್ರದ ಉದ್ದೇಶಗಳನ್ನು ಸಾಕಾರಗೊಳಿಸಲು ದೇಶದ ಒಟ್ಟಾರೆ ಶಕ್ತಿಯನ್ನು ವ್ಯವಸ್ಥಿತವಾಗಿ ನವೀಕರಿಸುವ ಪ್ರಯತ್ನದಲ್ಲಿ ಚೀನಾ ತನ್ನ ರಾಷ್ಟ್ರೀಯ ಕಾರ್ಯತಂತ್ರ ಸಾಮರ್ಥ್ಯವನ್ನು ಗರಿಷ್ಠಗೊಳಿಸಿಕೊಳ್ಳಬೇಕು ಎಂದು ಷಿ ಜಿನ್ಪಿಂಗ್ ಕರೆ ನೀಡಿದ್ದಾರೆ.
 
ಪೀಪಲ್ಸ್ ಲಿಬರೇಶನ್ ಆರ್ಮಿ, ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಮಿಲಿಟರಿ ವಿಭಾಗ ಮತ್ತು ಅರೆಸೇನಾ ಪೀಪಲ್ಸ್ ಸಶಸ್ತ್ರ ಪೋಲಿಸ್ ನ್ನು ಪ್ರತಿನಿಧಿಸುವ ವಿಧ್ಯುಕ್ತ ಸಂಸತ್ತಿನ ಪ್ರತಿನಿಧಿಗಳಿಗೆ ಅವರು ಈ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸ್ವಾವಲಂಬನೆಯನ್ನು ಹೆಚ್ಚಿಸಲು, ತುರ್ತು ಕ್ಷೇತ್ರಗಳಲ್ಲಿ ಕಾರ್ಯತಂತ್ರದ ಸಾಮರ್ಥ್ಯಗಳನ್ನು ಹೆಚ್ಚಿಸಲು, ಕೈಗಾರಿಕಾ ಮತ್ತು ಪೂರೈಕೆ ಸರಪಳಿಗಳನ್ನು ಹೆಚ್ಚಿಸಲು ಮತ್ತು ರಾಷ್ಟ್ರೀಯ ಮೀಸಲುಗಳನ್ನು "ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸಲು ಹೆಚ್ಚು ಸಮರ್ಥಗೊಳಿಸಲು ಷಿ ಜಿನ್ಪಿಂಗ್ ತಮ್ಮ ಭಾಷಣದಲ್ಲಿ ಕರೆ ನೀಡಿದ್ದಾರೆ. 

ಇಂಟಿಗ್ರೇಟೆಡ್ ಸರ್ಕ್ಯೂಟ್‌ಗಳಿಂದ ಏರೋಸ್ಪೇಸ್‌ವರೆಗೆ 10 ಪ್ರಮುಖ ಕ್ಷೇತ್ರಗಳಲ್ಲಿ ಚೀನಾವನ್ನು ಪ್ರಬಲವಾಗಿಸುವ "ಮೇಡ್ ಇನ್ ಚೈನಾ 2025" ಅಭಿಯಾನ ಮತ್ತು ನಾಗರಿಕ-ಮಿಲಿಟರಿ ಏಕೀಕರಣಕ್ಕಾಗಿ ದಶಕಗಳ-ಹಳೆಯ ಅಭಿಯಾನ ಸೇರಿದಂತೆ ಹಲವಾರು ರಾಷ್ಟ್ರೀಯ ಕಾರ್ಯತಂತ್ರಗಳೊಂದಿಗೆ ಷಿ ಜಿನ್ಪಿಂಗ್ ಅವರ ಯೋಜನೆಗಳು ಸಂಯೋಜಿಸಲ್ಪಟ್ಟಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com