ಜರ್ಮನಿಯ ಹ್ಯಾಂಬರ್ಗ್​ನ ಚರ್ಚ್​ನಲ್ಲಿ ಗುಂಡಿನ ದಾಳಿ: ಕನಿಷ್ಟ 7 ಮಂದಿ ಸಾವು, ಹಲವರಿಗೆ ಗಾಯ

ಜರ್ಮನಿಯ ಹ್ಯಾಂಬರ್ಗ್‌ನಲ್ಲಿರುವ ಚರ್ಚ್‌ ಒಂದರಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ಕನಿಷ್ಠ 7 ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.
ಸ್ಥಳದಲ್ಲಿರುವ ಪೊಲೀಸರುಬರ್
ಸ್ಥಳದಲ್ಲಿರುವ ಪೊಲೀಸರುಬರ್

ಬರ್ಲಿನ್: ಜರ್ಮನಿಯ ಹ್ಯಾಂಬರ್ಗ್‌ನಲ್ಲಿರುವ ಚರ್ಚ್‌ ಒಂದರಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ಕನಿಷ್ಠ 7 ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.

ಉತ್ತರ ಹ್ಯಾಂಬರ್ಗ್‌ನಲ್ಲಿರುವ ಚರ್ಚ್‌ನಲ್ಲಿ ಈ ದಾಳಿ ನಡೆದಿದ್ದು, ಘಟನೆಗೆ ನಿಖರ ಕಾರಣಗಳು ತಿಳಿದು ಬಂದಿಲ್ಲ.

ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಕೆಲವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಜರ್ಮನಿಯಲ್ಲಿ ಹಲವಾರು ದಾಳಿಗಳು ಜಿಹಾದಿಗಳು ಮತ್ತು ಉಗ್ರಗಾಮಿಗಳಿಂದ ನಡೆದಿವೆ.

ಡಿಸೆಂಬರ್ 2016 ರಲ್ಲಿ ಬರ್ಲಿನ್ ಕ್ರಿಸ್‌ಮಸ್ ಮಾರುಕಟ್ಟೆಯಲ್ಲಿ ಇಸ್ಲಾಮಿ ಉಗ್ರಗಾಮಿಗಳು ನಡೆಸಿದ ಭೀಕರ ಟ್ರಕ್ ರಾಂಪೇಜ್‌ನಲ್ಲಿ 12 ಜನರು ಸಾವನ್ನಪ್ಪಿದರು. ಅದೇ ಸಮಯದಲ್ಲಿ, ಕೆಲವು ದಿನಗಳ ಹಿಂದೆ ಟುನೀಶಿಯಾದಲ್ಲಿ ದಾಳಿ ನಡೆದಿತ್ತು.

ಫೆಬ್ರವರಿ 2020 ರಲ್ಲಿ, ಬಲಪಂಥೀಯ ಉಗ್ರಗಾಮಿಯೊಬ್ಬ ಮಧ್ಯ ಜರ್ಮನಿಯ ನಗರವಾದ ಹನೌನಲ್ಲಿ 10 ಜನರನ್ನು ಕೊಂದು ಇತರ ಐವರನ್ನು ಗಾಯಗೊಳಿಸಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com