ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಪ್ರಮಾಣ ವಚನ ಸ್ವೀಕಾರ
ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಪ್ರಮಾಣ ವಚನ ಸ್ವೀಕಾರ

ಮೂರನೇ ಅವಧಿಗೆ ಚೀನಾ ಅಧ್ಯಕ್ಷರಾಗಿ ಕ್ಸಿ- ಜಿನ್ ಪಿಂಗ್ ಆಯ್ಕೆ

ಮೂರನೇ ಅವಧಿಗೆ ಚೀನಾ ಅಧ್ಯಕ್ಷರಾಗಿ ಕ್ಸಿ-ಜಿನ್ ಪಿಂಗ್ ಆಯ್ಕೆಯಾಗಿದ್ದಾರೆ.  ಈ ಮೂಲಕ ದೇಶದ ಅತ್ಯಂತ ಶಕ್ತಿಶಾಲಿ ನಾಯಕರಾಗಿ ಹೊರಹೊಮ್ಮಿದ್ದಾರೆ.

ಬೀಜಿಂಗ್: ಮೂರನೇ ಅವಧಿಗೆ ಚೀನಾ ಅಧ್ಯಕ್ಷರಾಗಿ ಕ್ಸಿ-ಜಿನ್ ಪಿಂಗ್ ಆಯ್ಕೆಯಾಗಿದ್ದಾರೆ. ಈ ಮೂಲಕ  ದೇಶದ ಅತ್ಯಂತ ಶಕ್ತಿಶಾಲಿ ನಾಯಕರಾಗಿ ಹೊರಹೊಮ್ಮಿದ್ದಾರೆ. ಅಕ್ಟೋಬರ್‌ನಲ್ಲಿ ಚೀನಾದ ಕಮ್ಯುನಿಸ್ಟ್ ಪಕ್ಷದ ಮುಖ್ಯಸ್ಥರಾಗಿ ಕ್ಸಿ ಇನ್ನೂ ಐದು ವರ್ಷಗಳ ಅಧಿಕಾರ ಪಡೆದ ನಂತರ ಚೀನಾದ ರಬ್ಬರ್-ಸ್ಟ್ಯಾಂಪ್ ಸಂಸತ್ತು ಇದೀಗ ಅವರನ್ನು ಮೂರನೇ ಅವಧಿಗೆ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದೆ.

ಶೂನ್ಯ ಕೋವಿಡ್ ನೀತಿ ಮತ್ತು ಅಪಾರ ಸಂಖ್ಯೆಯ ಜನರ ಸಾವಿನಿಂದಾಗಿ 69 ವರ್ಷದ ಕ್ಸಿ- ಜಿನ್ ಪಿಂಗ್ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆದಿತ್ತು. ಆದಾಗ್ಯೂ, ಈ ಎಲ್ಲಾ ಸಮಸ್ಯೆಗಳನ್ನು ತಡೆದಿರುವ  ಚೀನಾದ ಶಾಸಕಾಂಗ ನ್ಯಾಷನಲ್ ಫೀಪಲ್ಸ್ ಕಾಂಗ್ರೆಸ್,  ಕ್ಸಿ- ಜಿನ್ ಪಿಂಗ್ ಅವರನ್ನು ಮುಂದಿನ ಅಧ್ಯಕ್ಷರಾಗಿ ಸರ್ವಾನುಮತದಿಂದ ಅನುಮೋದಿಸಿದೆ.

ಶುಕ್ರವಾರ ಎನ್ ಪಿಸಿ ಪ್ರತಿನಿಧಿಗಳು ಕ್ಸಿ ಅವರನ್ನು ಮೂರನೇ ಅವಧಿಗೆ ಚೀನಾ ಅಧ್ಯಕ್ಷರಾಗಿ ಮತ್ತು ದೇಶದ ಕೇಂದ್ರ ಮಿಲಿಟರಿ ಆಯೋಗದ ಮುಖ್ಯಸ್ಥರನ್ನಾಗಿ ಸರ್ವಾನುಮತದಿಂದ ಪುನರ್ ಆಯ್ಕೆ ಮಾಡಿತು. ಕ್ಸಿ- ಪರವಾಗಿ ಒಟ್ಟಾರೇ 2, 952 ಮತಗಳು ಬಂದವು.

ನಂತರ ಅವರು ಪ್ರಮಾಣ ವಚನ ಸ್ವೀಕರಿಸಿದರು."ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಸಂವಿಧಾನಕ್ಕೆ ನಿಷ್ಠನಾಗಿ, ಅಧಿಕಾರವನ್ನು ಎತ್ತಿಹಿಡಿಯಲು  ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮದಿಂದ  ಕರ್ತವ್ಯ ನಿರ್ವಹಿಸುವುದಾಗಿ ಅವರು ಪ್ರತಿಜ್ಞೆ ಮಾಡಿದರು. 

Related Stories

No stories found.

Advertisement

X
Kannada Prabha
www.kannadaprabha.com