ಅಫ್ಘಾನಿಸ್ತಾನ ವಿದೇಶಾಂಗ ಕಚೇರಿ ಬಳಿ ಬಾಂಬ್ ಸ್ಫೋಟ; ಕನಿಷ್ಠ 6 ಮಂದಿ ಸಾವು

ತಾಲಿಬಾನ್ ಆಡಳಿತದಲ್ಲಿರುವ ಅಫ್ಗಾನಿಸ್ತಾನದಲ್ಲಿ ಮತ್ತೊಂದು ಬಾಂಬ್ ಸ್ಫೋಟ ವರದಿಯಾಗಿದ್ದು, ಅಫ್ಘಾನಿಸ್ತಾನ ವಿದೇಶಾಂಗ ಕಚೇರಿ ಬಳಿ ಬಾಂಬ್ ಸ್ಫೋಟಿಸಿ ಕನಿಷ್ಠ 6 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.
ಅಫ್ಘಾನಿಸ್ತಾನ ವಿದೇಶಾಂಗ ಕಚೇರಿ ಬಳಿ ಬಾಂಬ್ ಸ್ಫೋಟ
ಅಫ್ಘಾನಿಸ್ತಾನ ವಿದೇಶಾಂಗ ಕಚೇರಿ ಬಳಿ ಬಾಂಬ್ ಸ್ಫೋಟ

ಕಾಬುಲ್: ತಾಲಿಬಾನ್ ಆಡಳಿತದಲ್ಲಿರುವ ಅಫ್ಗಾನಿಸ್ತಾನದಲ್ಲಿ ಮತ್ತೊಂದು ಬಾಂಬ್ ಸ್ಫೋಟ ವರದಿಯಾಗಿದ್ದು, ಅಫ್ಘಾನಿಸ್ತಾನ ವಿದೇಶಾಂಗ ಕಚೇರಿ ಬಳಿ ಬಾಂಬ್ ಸ್ಫೋಟಿಸಿ ಕನಿಷ್ಠ 6 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.

ಸೋಮವಾರ ಮಧ್ಯಾಹ್ನ ಆಫ್ಘಾನಿಸ್ತಾನ ವಿದೇಶಾಂಗ ಸಚಿವಾಲಯದ ಕಚೇರಿ ಬಳಿ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದ್ದು, ಈ ಘಟನೆಯಲ್ಲಿ ಕನಿಷ್ಟ 6 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ ಎಂದು ಆಂತರಿಕ ಸಚಿವಾಲಯದ ವಕ್ತಾರ ಅಬ್ದುಲ್ ನಾಫಿ ಟಾಕೋರ್ ಮಾಹಿತಿ ನೀಡಿದ್ದಾರೆ.

ಸಚಿವಾಲಯದ ಬಳಿಯ ಭದ್ರತಾ ತಪಾಸಣಾ ಕೇಂದ್ರದಲ್ಲಿ ಆತ್ಮಹತ್ಯಾ ದಾಳಿಕೋರನನ್ನು ಗುರುತಿಸಲಾಗಿತ್ತು ಎಂದು ಕಾಬೂಲ್ ಪೊಲೀಸ್ ವಕ್ತಾರ ಖಾಲಿದ್ ಜದ್ರಾನ್ ಹೇಳಿದ್ದಾರೆ. "ಮಲಿಕ್ ಅಸ್ಗರ್ ಚೌಕದಲ್ಲಿ ... ಗುರಿಯನ್ನು ತಲುಪುವ ಮೊದಲು ಆತ್ಮಹತ್ಯಾ ದಾಳಿಕೋರನನ್ನು ಚೆಕ್ ಪಾಯಿಂಟ್‌ನಲ್ಲಿ ಗುರುತಿಸಲಾಯಿತು ಮತ್ತು ಗುಂಡಿಟ್ಟು ಕೊಲ್ಲಲಾಯಿತು, ಆದರೆ ಅವನು ಕೆಳಗೆ ಬೀಳುತ್ತಿದ್ದಂತೆಯೇ ಆತ ಧರಿಸಿದ್ದ ಸ್ಫೋಟಕಗಳು ಸ್ಫೋಟಗೊಂಡವು. ಇದರಿಂದ ದುರಂತ ಸಂಭವಿಸಿದೆ" ಎಂದು ಅವರು ಹೇಳಿದರು.

ವಿದೇಶಾಂಗ ಸಚಿವಾಲಯ ಸೇರಿದಂತೆ ಹಲವಾರು ಸರ್ಕಾರಿ ಕಟ್ಟಡಗಳನ್ನು ಹೊಂದಿರುವ ಭಾರೀ ಭದ್ರತೆ ಹೊಂದಿರುವ ಬೀದಿಯನ್ನು ಕಾವಲು ಮಾಡುವ ಚೆಕ್‌ಪಾಯಿಂಟ್‌ನ ಸಮೀಪವಿರುವ ಜನನಿಬಿಡ ಡೌನ್‌ಟೌನ್ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ. ದಾಳಿಯ ಹೊಣೆಯನ್ನು ಯಾವುದೇ ಭಯೋತ್ಪಾದಕ ಸಂಘಟನೆ ಹೊತ್ತುಕೊಂಡಿಲ್ಲ.

ಮೂರು ತಿಂಗಳಿಗೂ ಕಡಿಮೆ ಅವಧಿಯಲ್ಲಿ ವಿದೇಶಾಂಗ ಸಚಿವಾಲಯದ ಬಳಿ ನಡೆದ 2ನೇ ದಾಳಿ ಇದಾಗಿದೆ. ಅಲ್ಲದೆ, ರಂಜಾನ್ ತಿಂಗಳ ಆರಂಭದಲ್ಲೇ ದಾಳಿ ನಡೆದಿದೆ. ಜನವರಿಯಲ್ಲಿ ನಡೆದಿದ್ದ ಆತ್ಮಹತ್ಯಾ ದಾಳಿಯಲ್ಲಿ 10 ಮಂದಿ ಸಾವಿಗೀಡಾಗಿದ್ದರು. 53ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com