ನನ್ನ ಮೇಲೆ ಮೂರನೇ ಬಾರಿಗೆ ಹತ್ಯೆ ಯತ್ನ ನಡೆಯಲಿದೆ: ಕೋರ್ಟ್ ಗೆ ಇಮ್ರಾನ್ ಖಾನ್

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಇಂದು ಲಾಹೋರ್ ಹೈಕೋರ್ಟ್‌ಗೆ ತಮ್ಮ ವಿರುದ್ಧ ಮೂರನೇ ಹತ್ಯೆ ಯತ್ನ ನಡೆಯಲಿದೆ. ತಮ್ಮ ವಿರುದ್ಧದ ಎಲ್ಲಾ ರಾಜಕೀಯ ಪ್ರಕರಣಗಳನ್ನು ರದ್ದುಗೊಳಿಸಿ. ಇಲ್ಲದಿದ್ದರೆ ನಾನು ನಿಯಮಿತವಾಗಿ ನ್ಯಾಯಾಲಯಕ್ಕೆ ಹಾಜರಾಗುವ ವೇಳೆ ನನ್ನ ಜೀವಕ್ಕೆ ಅಪಾಯವಿದೆ ಎಂದು ಹೇಳಿದ್ದಾರೆ.
ಇಮ್ರಾನ್ ಖಾನ್
ಇಮ್ರಾನ್ ಖಾನ್

ಲಾಹೋರ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಇಂದು ಲಾಹೋರ್ ಹೈಕೋರ್ಟ್‌ಗೆ ತಮ್ಮ ವಿರುದ್ಧ ಮೂರನೇ ಹತ್ಯೆ ಯತ್ನ ನಡೆಯಲಿದೆ. ತಮ್ಮ ವಿರುದ್ಧದ ಎಲ್ಲಾ ರಾಜಕೀಯ ಪ್ರಕರಣಗಳನ್ನು ರದ್ದುಗೊಳಿಸಿ. ಇಲ್ಲದಿದ್ದರೆ ನಾನು ನಿಯಮಿತವಾಗಿ ನ್ಯಾಯಾಲಯಕ್ಕೆ ಹಾಜರಾಗುವ ವೇಳೆ ನನ್ನ ಜೀವಕ್ಕೆ ಅಪಾಯವಿದೆ ಎಂದು ಹೇಳಿದ್ದಾರೆ.

ದೇಶದ್ರೋಹ, ಧರ್ಮನಿಂದನೆ, ಹಿಂಸಾಚಾರ ಮತ್ತು ಭಯೋತ್ಪಾದನೆಗೆ ಪ್ರಚೋದನೆ ನೀಡುವಂತಹ ವಿವಿಧ ಆರೋಪಗಳ ಮೇಲೆ ದೇಶದ ವಿವಿಧ ನಗರಗಳಲ್ಲಿ ತನ್ನ ವಿರುದ್ಧ ದಾಖಲಾಗಿರುವ ಎಲ್ಲಾ 121 ಪ್ರಕರಣಗಳನ್ನು ರದ್ದುಗೊಳಿಸುವಂತೆ ಖಾನ್ ಎಲ್‌ಎಚ್‌ಸಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ.

71 ವರ್ಷದ ಖಾನ್ ಅವರು ಹೆಚ್ಚಿನ ಭದ್ರತೆಯ ನಡುವೆ ಲಾಹೋರ್ ಹೈಕೋರ್ಟ್ ಮುಂದೆ ಹಾಜರಾಗಿದ್ದರು. ಪ್ರಕರಣದ ವಿಚಾರಣೆ ವೇಳೆ ಅವರು ಮಾತನಾಡಲು ಅವಕಾಶ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು.

ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಅಧ್ಯಕ್ಷ ಇಮ್ರಾನ್ ಖಾನ್, ತಮ್ಮ ಜೀವಕ್ಕೆ ಅಪಾಯವಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ನಿಯಮಿತವಾಗಿ ನ್ಯಾಯಾಲಯಕ್ಕೆ ಹಾಜರಾಗುವುದು ನನ್ನ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ. ನನ್ನ ಜೀವನದ ಮೇಲಿನ ಎರಡು ಹತ್ಯೆಯ ಯತ್ನಗಳಲ್ಲಿ ನಾನು ಬದುಕುಳಿದಿದ್ದೆ. ಒಂದು ಪಂಜಾಬ್‌ನ ವಜೀರಾಬಾದ್‌ನಲ್ಲಿ ಮತ್ತು ಇನ್ನೊಂದು ಇಸ್ಲಾಮಾಬಾದ್ ನ್ಯಾಯಾಂಗ ಸಂಕೀರ್ಣದಲ್ಲಿ ನಡೆದಿತ್ತು ಎಂದು ಹೇಳಿದ್ದಾರೆ.

70 ವರ್ಷಗಳ ಜೀವನದಲ್ಲಿ ತಮ್ಮ ವಿರುದ್ಧ ಒಂದೇ ಒಂದು ಪ್ರಕರಣ ಇರಲಿಲ್ಲ. ಆದರೆ ಕಳೆದ ವರ್ಷ ಏಪ್ರಿಲ್‌ನಲ್ಲಿ ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ನಂತರ ಈ ಎಲ್ಲಾ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದರು. ಇನ್ನು ನ್ಯಾಯಮೂರ್ತಿ ಅಲಿ ಬಕರ್ ನಜಾಫಿ ನೇತೃತ್ವದ ಎಲ್‌ಎಚ್‌ಸಿಯ ಐದು ಸದಸ್ಯರ ಪೀಠವು ಮೇ 5 ರಂದು ಈ ಪ್ರಕರಣಗಳ ಪೊಲೀಸ್ ತನಿಖೆಗೆ ಹಾಜರಾಗುವಂತೆ ಖಾನ್‌ಗೆ ಸೂಚಿಸಿದೆ ಎಂದು ಅಧಿಕಾರಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com