ಪಾಕಿಸ್ತಾನ ಕೂಡಾ ಮೋದಿಯನ್ನು ಪ್ರೀತಿಸುತ್ತದೆ, ಅವರಂತಹ ನಾಯಕನನ್ನು ಬಯಸುತ್ತದೆ: ಅನುಪ್ ಜಲೋಟಾ
ಪ್ರಧಾನಿ ಮೋದಿ ಜಗತ್ತಿನಾದ್ಯಂತ ಹೆಸರುವಾಸಿಯಾಗಿದ್ದು, ಪಾಕಿಸ್ತಾನ ಕೂಡಾ ಅವರನ್ನು ಪ್ರೀತಿಸುತ್ತದೆ ಮತ್ತು ಅವರಂತಹ ನಾಯಕನನ್ನು ಬಯಸುತ್ತದೆ ಎಂದು ಖ್ಯಾತ ಗಾಯಕ ಅನುಪ್ ಜಲೋಟಾ ಮಂಗಳವಾರ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಹೇಳಿದರು.
Published: 23rd May 2023 03:58 PM | Last Updated: 23rd May 2023 04:15 PM | A+A A-

ಅನುಪ್ ಜಲೋಟಾ
ಸಿಡ್ನಿ: ಪ್ರಧಾನಿ ಮೋದಿ ಜಗತ್ತಿನಾದ್ಯಂತ ಹೆಸರುವಾಸಿಯಾಗಿದ್ದು, ಪಾಕಿಸ್ತಾನ ಕೂಡಾ ಅವರನ್ನು ಪ್ರೀತಿಸುತ್ತದೆ ಮತ್ತು ಅವರಂತಹ ನಾಯಕನನ್ನು ಬಯಸುತ್ತದೆ ಎಂದು ಖ್ಯಾತ ಗಾಯಕ ಅನುಪ್ ಜಲೋಟಾ ಮಂಗಳವಾರ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಹೇಳಿದರು.
ಅನಿವಾಸಿ ಭಾರತೀಯರನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡುವ ಮುನ್ನಾ ಸುದ್ದಿಗಾರರೊಂದಿಗೆ ಮಾತನಾಡಿದ ಅನುಪ್ ಜಲೋಟಾ, ಪ್ರಪಂಚದಾದ್ಯಂತ ಜನರು ಮೋದಿಜಿಯನ್ನು ತುಂಬಾ ಪ್ರೀತಿಸುತ್ತಾರೆ. ಈಗ ಪಾಕಿಸ್ತಾನ ಕೂಡ ಮೋದಿಯನ್ನು ಪ್ರೀತಿಸುತ್ತಿದೆ ಎಂದರು.
ಪಾಕಿಸ್ತಾನದಲ್ಲಿ ವಾಸಿಸುವ ಎಲ್ಲಾ ಜನರು ಮೋದಿಜಿಯಂತಹ ನಾಯಕ ಬೇಕು ಎಂದು ಹೇಳಿದ್ದಾರೆ. ಹಾಗಾಗಿ ಪಾಕಿಸ್ತಾನ ಸೇರಿದಂತೆ ಇಡೀ ವಿಶ್ವದಾದ್ಯಂತ ಮೋದಿ ಜಿ ಅಂತಹ ಸುಂದರವಾದ ಪ್ರೀತಿಯನ್ನು ಸೃಷ್ಟಿಸಿದ್ದಾರೆ. ಎಲ್ಲರಿಗೂ ಪ್ರೀತಿಯನ್ನು ಹರಡಿದ್ದಾರೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜಲೋಟಾ ಖುಡೋಸ್ ಬ್ಯಾಂಕ್ ಅರೆನಾದಲ್ಲಿ ಹೇಳಿದರು.
ಇದನ್ನೂ ಓದಿ: ಭಾರತದಲ್ಲಿ ಯಾವುದಕ್ಕೂ ಕೊರತೆಯಿಲ್ಲ, ಆಟೋಮೊಬೈಲ್ ಕ್ಷೇತ್ರದಲ್ಲಿ 3ನೇ ಸ್ಥಾನ- ಸಿಡ್ನಿಯಲ್ಲಿ ಪ್ರಧಾನಿ ಮೋದಿ
ಸಿಡ್ನಿಯಲ್ಲಿರುವ ಎಲ್ಲಾ ಜನರ ಹೃದಯದಲ್ಲಿ ಮೋದಿ ಅವರು ಶಾಶ್ವತವಾಗಿ ಪ್ರಧಾನಿಯಾಗಬೇಕೆಂದು ಬಯಸುತ್ತಾರೆ. ಅವರನ್ನು ಪ್ರೀತಿಸುತ್ತಾರೆ. ಮೋದಿ ಇದ್ದರೆ ಸಂಬಂಧಗಳು ವೃದ್ಧಿಯಾಗುತ್ತವೆ. ಇದನ್ನೇ ಅವರು ಮಾಡುತ್ತಾರೆ. ಅವರು ಏಲ್ಲಿಗೆ ಹೋದರು ಪ್ರೀತಿಯಿಂದ ತುಂಬಿದ ಬುಟ್ಟಿಯೊಂದಿಗೆ ಬರುತ್ತಾರೆ ಎಂದರು.